ETV Bharat / state

ಕುಡಿದ ಮತ್ತಲ್ಲಿ ಕಳ್ಳತನಕ್ಕಾಗಿ ಒಂಟಿ ಮಹಿಳೆಯ ಹತ್ಯೆ.. ಆರೋಪಿ ಅರೆಸ್ಟ್​

author img

By

Published : Jul 20, 2020, 5:29 PM IST

Updated : Jul 20, 2020, 5:50 PM IST

ಕುಡಿದ ಮತ್ತಿನಲ್ಲಿ ಕಳ್ಳತನಕ್ಕಾಗಿ ಯತ್ನಿಸಿದ ವ್ಯಕ್ತಿಯೋರ್ವ ಒಂಟಿ ಮಹಿಳೆಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಸಿದ್ದಾಪುರ ಬಳಿ ನಡೆದಿದೆ. ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

lone women murders by a man for theft in Siddapur
ಕುಡಿದ ಮತ್ತಲ್ಲಿ ಕಳ್ಳತನಕ್ಕಾಗಿ ಒಂಟಿ ಮಹಿಳೆಯ ಹತ್ಯೆ

ಕಾರವಾರ (ಉ.ಕ): ಮಹಿಳೆಯನ್ನು ಕಲ್ಲಿನಿಂದ ಜಜ್ಜಿ ಬರ್ಬರವಾಗಿ ಹತ್ಯೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಪತ್ತೆಹಚ್ಚುವಲ್ಲಿ ಸಿದ್ದಾಪುರ ಪೊಲೀಸರು ಯಶಸ್ವಿಯಾಗಿದ್ದಾರೆ.

ಸಿದ್ದಾಪುರದ ದೊಡ್ಮನೆ ಪಂಚಾಯಿತಿ ವ್ಯಾಪ್ತಿಯ ರಾಜು ತಿಮ್ಮಗೌಡ ಬಂಧಿತ ಆರೋಪಿ. ಪಂಚಾಯಿತಿ ವ್ಯಾಪ್ತಿಯ ಜಕ್ಕಾರ ಬಳಿಯ ಕಾಡಿನಲ್ಲಿರುವ ಒಂಟಿ ಮನೆಯಲ್ಲಿ ಗೌರಿ ಈಶ್ವರ ನಾಯ್ಕ (52) ಎಂಬ ಮಹಿಳೆಯನ್ನು ನಿನ್ನೆ ಕಲ್ಲಿನಿಂದ ಜಜ್ಜಿ ಹತ್ಯೆ ಮಾಡಲಾಗಿತ್ತು.

ಬಳಿಕ ವಿದ್ಯುತ್​ ಬಿಲ್​ ನೀಡಲು ಬಂದಿದ್ದ ವ್ಯಕ್ತಿ ಕೊಲೆಯಾಗಿದ್ದ ಮಹಿಳೆಯನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದಾಗ ಆರೋಪಿ ರಾಜು, ಒಂದು ದಿನ ಮುಂಚೆ ಕೆಲಸದ ನಿಮಿತ್ತ ತೆರಳಿದ ಮಹಿಳೆಯನ್ನು ಮರಳಿ ಬೈಕ್ ಮೇಲೆ ಕರೆತಂದು ಮನೆಗೆ ಬಿಟ್ಟಿರುವುದು ತಿಳಿದುಬಂದಿದೆ. ಇದರಿಂದ ಅನುಮಾನಗೊಂಡು ವಿಚಾರಣೆ ನಡೆಸಿದಾಗ ಸತ್ಯ ಹೊರಬಿದ್ದಿದ್ದು, ಕುಡಿದ ಮತ್ತಿನಲ್ಲಿ ಕಳ್ಳತನಕ್ಕೆ ಬಂದು ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ.

ಆರೋಪಿಯನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Last Updated : Jul 20, 2020, 5:50 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.