ETV Bharat / state

ಭಟ್ಕಳ ತಾಲೂಕಿನ 5 ಕಂಟೇನ್ಮೆಂಟ್​ ಝೋನ್​ ಹೊರತುಪಡಿಸಿ ಉಳಿದೆಡೆ ಲಾಕ್​ಡೌನ್​ ಸಡಿಲಿಕೆ - Lockdown loosening except containment zone

ಭಟ್ಕಳ ತಾಲೂಕಿನ 5 ಕಂಟೇನ್ಮೆಂಟ್​ ಝೋನ್​ಗಳಾದ ಮದೀನಾ ಕಾಲೋನಿ, ಉಸ್ಮಾನಿಯ ರಸ್ತೆ, ಗುಡ್ ಲಕ್ ರಸ್ತೆ, ಕೋಕ್ರಿ ನಗರ, ಸುಲ್ತಾನ್ ಸ್ಟ್ರೀಟ್ ಹೊರತುಪಡಿಸಿ ಉಳಿದೆಡೆ ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಕೆಲವು ಅಂಗಡಿ ಮುಂಗಟ್ಟುಗಳನ್ನು ತೆರೆಯಲು ಅವಕಾಶ ನೀಡಲಾಗಿದೆ.

Lockdown loosening  except containment zone
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು
author img

By

Published : May 28, 2020, 8:15 PM IST

ಭಟ್ಕಳ: ತಾಲೂಕಿನ 5 ಕಂಟೇನ್ಮೆಂಟ್​ ಝೋನ್​ಗಳನ್ನು ಹೊರತುಪಡಿಸಿ ಉಳಿದೆಡೆ ನಾಳೆಯಿಂದ ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಕೆಲವು ಅಂಗಡಿ ಮುಂಗಟ್ಟುಗಳನ್ನು ತೆರೆಯಲು ಅವಕಾಶ ನೀಡಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ತಿಳಿಸಿದ್ದಾರೆ.

ಇಲ್ಲಿನ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿನ 5 ಕಂಟೇನ್ಮೆಂಟ್​ ಝೋನ್​ಗಳಾದ ಮದೀನಾ ಕಾಲೋನಿ, ಉಸ್ಮಾನಿಯ ರಸ್ತೆ, ಗುಡ್ ಲಕ್ ರಸ್ತೆ, ಕೋಕ್ರಿ ನಗರ, ಸುಲ್ತಾನ್ ಸ್ಟ್ರೀಟ್ ಹೊರತುಪಡಿಸಿ ಬೆಳಿಗ್ಗೆ 7 ರಿಂದ ಮಧ್ಯಾಹ್ನ 1 ಗಂಟೆಯವರಿಗೆ ಕೆಲವು ಅಂಗಡಿ ಮುಂಗಟ್ಟು ತೆರೆಯುವಂತೆ ಅನುಮತಿ ನೀಡಿದರು.

ನಂತರ ಪತ್ರಕರ್ತರ ಸಲಹೆ ಮೇರೆಗೆ ಸಮಯದ ನಿಗದಿಯನ್ನು ಬೆಳಿಗ್ಗೆ 8 ಗಂಟೆಯಿಂದ 2 ಗಂಟೆಯವರಿಗೆ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಿದ್ದಾರೆ. ಈ 5 ಕಂಟೇನ್ಮೆಂಟ್​ ಝೋನ್ ಹೊರತುಪಡಿಸಿ ಬೇಕರಿ, ಮೆಡಿಕಲ್, ದಿನಸಿ, ಬ್ಯಾಂಕ್, ಗ್ಯಾರೇಜ್, ಸಲೂನ್, ಪೆಟ್ರೋಲ್ ಬಂಕ್, ಕಟ್ಟಡ ನಿರ್ಮಾಣದ ಸಾಮಗ್ರಿಗಳ ಅಂಗಡಿಗಳಿಗೆ ತೆರೆಯುವಂತೆ ಸೂಚನೆ ನೀಡಿದ್ದಾರೆ. ಅಲ್ಲದೇ ಜೂ. 1ರಿಂದ ರಿಕ್ಷಾ ಓಡಾಟ, ಆಟೋ ಮೊಬೈಲ್, ಬಟ್ಟೆ, ಸೂಪರ್ ಮಾರ್ಕೆಟ್​ಗಳನ್ನು ನಿಯಮ ಬದ್ಧವಾಗಿ ತೆರೆಯಲು ಅವಕಾಶ ನೀಡಲಾಗುವುದು ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು

ಈ ಎಲ್ಲಾ ಸಡಿಲಿಕೆಗಳು ಜೂ.8 ರವರೆಗೆ ಜಾರಿಯಲ್ಲಿದ್ದು, ನಂತರ ದಿನಗಳಲ್ಲಿ ಕೇಸ್ ಬರದ್ದಿದ್ದರೆ ಇನ್ನಷ್ಟು ಸಡಿಲಿಕೆ ಬಗ್ಗೆ ಚಿಂತನೆ ಮಾಡಲಿದ್ದೇವೆ. ಈ ಸಮಯದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ, ಮಾಸ್ಕ್ ಧರಿಸುವಿಕೆ ಕಡ್ಡಾಯವಾಗಿದೆ. ಅಂಗಡಿಗೆ ಬರುವ ಗ್ರಾಹಕರು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಹಾಗೂ ಮಾಸ್ಕ್ ಧರಿಸುವಂತೆ ನೋಡಿಕೊಳ್ಳುವುದು ಅಂಗಡಿ ಮಾಲೀಕರ ಜವಾಬ್ದಾರಿ. ಇದಕ್ಕೆ ವಿಫಲವಾದಲ್ಲಿ ಅವರ ಅಂಗಡಿ ಪರವಾನಿಗೆ ರದ್ದಾಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.