ಕಾರವಾರ: ತಾಲೂಕಿನ ಕುಮಟಾದಲ್ಲಿ ಖದೀಮರು ನಿನ್ನೆ ರಾತ್ರಿ ಮದ್ಯದ ಅಂಗಡಿಯನ್ನೇ ಒಡೆದು ಸಾವಿರಾರು ರೂಪಾಯಿ ಮೌಲ್ಯದ ಮದ್ಯವನ್ನು ಹೊತ್ತೊಯ್ದಿರುವ ಘಟನೆ ತಡರಾತ್ರಿ ನಡೆದಿದೆ
ಪಟ್ಟಣದ ಎಪಿಎಂಸಿ ಬಳಿ ಇರುವ ಅಲ್ಫಾ ವೈನ್ ಶಾಪ್ ಬಾಗಿಲನ್ನು ತಡರಾತ್ರಿ ಒಡೆದ ಖದೀಮರು ಶಾಪ್ ನಲ್ಲಿದ್ದ ಸುಮಾರು 45 ಸಾವಿರ ರೂಪಾಯಿ ಮೌಲ್ಯದ ವಿವಿಧ ಬ್ರಾಂಡಿನ ಮದ್ಯವನ್ನು ಹೊತ್ತೊಯ್ದಿದ್ದಾರೆ. ಲಾಕ್ ಡೌನ್ ನಿಂದಾಗಿ ಮದ್ಯ ಮಾರಾಟ ಸಂಪೂರ್ಣ ಸ್ಥಗಿತಗೊಂಡಿದ್ದು, ಮದ್ಯ ಸಿಗದೇ ಅದೆಷ್ಟೋ ಜನರು ಪರದಾಡುತ್ತಿದ್ದಾರೆ. ಕೆಲವರು ಆತ್ಮಹತ್ಯೆಗೆ ಶರಣಾದರೆ ಇನ್ನೂ ಕೆಲವೆಡೆ ಮದ್ಯದಂಗಡಿಗಳಿಗೆ ರಾತ್ರೋರಾತ್ರಿ ಕನ್ನ ಹಾಕಲಾಗುತ್ತಿದೆ.
ಇನ್ನೂ ಈ ವಿಚಾರ ಬೆಳಗ್ಗೆ ಅಂಗಡಿ ಮಾಲೀಕನ ಗಮನಕ್ಕೆ ಬಂದಿದ್ದು, ಬಳಿಕ ಕುಮಟಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ.