ETV Bharat / state

ಅದ್ಧೂರಿ ಕದಂಬೋತ್ಸವದಲ್ಲಿ ಜಾನುವಾರು ಮೇಳ ಆಕರ್ಷಣೆ

ಬನವಾಸಿಯ ವರದಾ ನದಿ ತಟದಲ್ಲಿ ನಡೆಸಲಾಗುತ್ತಿರುವ ಅದ್ಧೂರಿ ಕದಂಬೋತ್ಸವದ ಎರಡನೇ ದಿನವಾದ ಭಾನುವಾರದಂದು ಮಯೂರವರ್ಮ ಮೈದಾನದಲ್ಲಿ ಏರ್ಪಡಿಸಲಾಗಿದ್ದ ಜಾನುವಾರು ಪ್ರದರ್ಶನ ಕೃಷಿಕರ ಹಾಗೂ ಜನಸಾಮಾನ್ಯರ ಮೆಚ್ಚುಗೆಗೆ ಪಾತ್ರವಾಯಿತು.

author img

By

Published : Feb 9, 2020, 8:25 PM IST

livestock fair in shirasi
ಅದ್ಧೂರಿ ಕದಂಬೋತ್ಸವದಲ್ಲಿ ಆಕರ್ಷಣೆಗೊಂಡ ಜಾನುವಾರು ಮೇಳ

ಶಿರಸಿ(ಉತ್ತರಕನ್ನಡ): ಬನವಾಸಿಯ ವರದಾ ನದಿ ತಟದಲ್ಲಿ ನಡೆಸಲಾಗುತ್ತಿರುವ ಅದ್ಧೂರಿ ಕದಂಬೋತ್ಸವದ ಎರಡನೇ ದಿನವಾದ ಭಾನುವಾರದಂದು ಮಯೂರವರ್ಮ ಮೈದಾನದಲ್ಲಿ ಏರ್ಪಡಿಸಲಾಗಿದ್ದ ಜಾನುವಾರ ಪ್ರದರ್ಶನ ಕೃಷಿಕರ ಹಾಗೂ ಜನಸಾಮಾನ್ಯರ ಮೆಚ್ಚುಗೆಗೆ ಪಾತ್ರವಾಯಿತು.

ಕೃಷಿಕರ ಉಪ ಆದಾಯಗಳಲ್ಲೊಂದಾದ ಹೈನುಗಾರಿಕೆ ಜನಮಾನಸದಿಂದ ಮರೆಯಾಗುತ್ತಿರುವುದರಿಂದ ಹೈನುಗಾರರಲ್ಲಿ ಪ್ರೋತ್ಸಾಹ ತುಂಬುವ ನಿಟ್ಟಿನಲ್ಲಿ ಕದಂಬೋತ್ಸವದಲ್ಲಿ ಜಿಲ್ಲಾಡಳಿತ ಪಶು ಇಲಾಖೆ ನೇತೃತ್ವದಲ್ಲಿ ಜಾನುವಾರು ಪ್ರದರ್ಶನ ಏರ್ಪಡಿಸಿತ್ತು. ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಮೇಳಕ್ಕೆ ಚಾಲನೆ ನೀಡಿದರು. ‌

ಉತ್ತರಕನ್ನಡ ಜಿಲ್ಲೆಯಿಂದ ಮರೆಯಾದ ಪಾರಂಪರಿಕ ಹಾಗೂ ಅಪರೂಪದ ಜಾನುವಾರು ತಳಿಗಳನ್ನು ವಿಶೇಷ ಆಕರ್ಷಣೆಯ ಮಾದರಿಯಲ್ಲಿ ಜಿಲ್ಲೆಯ ಹಾಗೂ ಹೊರ ಜಿಲ್ಲೆಗಳಿಂದ ಪ್ರದರ್ಶನಕ್ಕೆ ತರಲಾಗಿತ್ತು. ಜಿಲ್ಲೆ ಮಾತ್ರವಲ್ಲದೇ ಹೊರ ಜಿಲ್ಲೆಗಳಿಂದಲೂ ಆಗಮಿಸಿದ್ದ ಸುಮಾರು ಐವತ್ತಕ್ಕೂ ಅಧಿಕ ಜಾನುವಾರುಗಳು ಪ್ರದರ್ಶನದಲ್ಲಿ ಪಾಲ್ಗೊಂಡಿದ್ದವು.

ಮಲೆನಾಡು ಗಿಡ್ಡ, ಜರ್ಸಿ, ಗೀರ್, ಸಿಂಧಿ, ಶಾಯಿವಾಲಾ, ಹೆಚ್.ಎಫ್ ಜಾತಿಯ ಹಸುಗಳು, ಮುರಾ, ಜಾಫರಾಬಾದಿ ಜಾತಿಯ ಎಮ್ಮೆ, ಒಂಗೋಲ, ಖಿಲಾರ್ ಸೇರಿದಂತೆ ಅನೇಕ ಬಗೆಯ ಎತ್ತುಗಳು ಜಾನುವಾರು ಪ್ರದರ್ಶನದ ಘನತೆ ಹೆಚ್ಚಿಸಿದವು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.