ಕಾರವಾರ: ಕಳೆದೆರಡು ದಿನಗಳಿಂದ ಇಲ್ಲಿನ ಕಡಲತೀರಗಳು ಪ್ರವಾಸಿಗರಿಂದ ತುಂಬಿ ತುಳುಕುತ್ತಿದ್ದು, ಕೊರೊನಾ ಬಳಿಕ ಇದೇ ಮೊದಲ ಬಾರಿಗೆ ಪ್ರವಾಸಿಗರ ದಂಡು ಹರಿದುಬಂದಿದೆ.
ಕರಾವಳಿ ನಗರಿ ಕಾರವಾರದ ರವೀಂದ್ರನಾಥ ಠಾಗೋರ್ ಕಡಲತೀರ ಪ್ರವಾಸಿಗರಿಂದ ತುಂಬಿ ತುಳುಕುತ್ತಿದೆ. ಕ್ರಿಸ್‌ಮಸ್ ಹಿನ್ನೆಲೆ ಕಳೆದೆರಡು ದಿನಗಳಿಂದ ರಜೆ ಇರುವುದರಿಂದ ವಿವಿಧೆಡೆಗಳಿಂದ ಪ್ರವಾಸಿಗರು ಜಿಲ್ಲೆಯ ಪ್ರವಾಸಿ ತಾಣಗಳಿಗೆ ಭೇಟಿ ನೀಡುತ್ತಿದ್ದಾರೆ. ಅದರಲ್ಲೂ ಜಿಲ್ಲೆಯ ಕಾರವಾರ, ಗೋಕರ್ಣ, ಮುರ್ಡೇಶ್ವರ ಸೇರಿದಂತೆ ಕರಾವಳಿ ತೀರಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದು, ಇಲ್ಲಿನ ಬೀಚ್‌ಗಳು ರದ್ದಿಯಾಗುತ್ತಿವೆ.
ಸದ್ಯ ಕೊರೊನಾ ಪ್ರಕರಣಗಳ ಸಂಖ್ಯೆ ಸಹ ಕಡಿಮೆಯಾಗಿದ್ದು ಸಾಲು ಸಾಲು ರಜೆಗಳು ಇದ್ದಿದ್ದರಿಂದಾಗಿ ಕುಟುಂಬಸ್ಥರೊಂದಿಗೂ ಕಾಲ ಕಳೆಯೋದಕ್ಕೆ ಇದು ಸಹಕಾರಿಯಾಗಿದೆ. ಇನ್ನು ಕೊರೊನಾ ಲಾಕ್‌ಡೌನ್ ಬಳಿಕ ಪ್ರವಾಸೋದ್ಯಮ ಸಂಪೂರ್ಣ ನೆಲಕಚ್ಚಿದ್ದು, ಆರು ತಿಂಗಳ ಬಳಿಕ ಪ್ರವಾಸಿಗರ ಆಗಮನದಿಂದಾಗಿ ಕಡಲತೀರದಲ್ಲಿ ಜಲಸಾಹಸ ಕ್ರೀಡೆಗಳೂ ಸಹ ಪುನಾ ರಂಭಗೊಂಡಿವೆ.
ಸಾಲು ಸಾಲು ರಜೆಗಳು ಪ್ರವಾಸಿಗರನ್ನು ಕಡಲತೀರಗಳತ್ತ ಕರೆತಂದಿದ್ದು ಕೊರೊನಾ ಬಳಿಕ ಪ್ರವಾಸೋದ್ಯಮ ಮತ್ತೆ ಚೇತರಿಕೆ ಕಾಣುವಂತಾಗಿದೆ.