ಶಿರಸಿ : ಇತಿಹಾಸ ಪ್ರಸಿದ್ಧ ಗೋಕರ್ಣದ ಕೋಟಿತೀರ್ಥ ಸಂರಕ್ಷಣೆ ಮಾಡಲು ಪ್ರಧಾನಿ ಕಚೇರಿಯಿಂದ ರಾಜ್ಯ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರಕ್ಕೆ ಪತ್ರ ಬಂದಿದ್ದು, ಡಿಸಿ ಅವರಿಗೆ ತ್ವರಿತ ಕ್ರಮ ಕೈಗೊಂಡು ವರದಿ ನೀಡಲು ಸೂಚಿಸಿದ್ದಾರೆ.
ಇಲ್ಲಿನ ಜನಪರ ಕಾಳಜಿಯ ವೈದ್ಯರಾದ ಡಾ.ರವಿಕಿರಣ ಪಟವರ್ಧನ್ ಅವರು ಗೋಕರ್ಣದ ಕೋಟಿತೀರ್ಥವು ಕಲುಷಿತಗೊಂಡಿದೆ. ಈ ಕೆರೆಯ ನೀರನ್ನು ಉಪಯೋಗಿಸುವುದರಿಂದ ಜನರ ಆರೋಗ್ಯಕ್ಕೆ ಹಾನಿಕರವಾಗಿದ್ದು, ಸದರಿ ಕೆರೆ ಸ್ವಚ್ಚಗೊಳಿಸಿ ಸಂರಕ್ಷಿಸುವಂತೆ ಪ್ರಧಾನಿ ಮಂತ್ರಿಗಳಿಗೆ ಮನವಿಯನ್ನು ಕಳುಹಿಸಿದ್ದರು.
ಅದಕ್ಕೆ ಸ್ಪಂದಿಸಿರುವ ಪ್ರಧಾನಿ ಕಚೇರಿ, ರಾಜ್ಯ ಕೆರೆ ಸಂರಕ್ಷಣಾ ಮತ್ತು ಅಭಿವೃದ್ಧಿ ಪ್ರಾಧಿಕಾರಕ್ಕೆ ಕ್ರಮಕ್ಕೆ ಪತ್ರ ಬರೆದಿದ್ದಾರೆ. ಕೆರೆ ಸಂರಕ್ಷಣಾ ಪ್ರಾಧಿಕಾರವು ಉತ್ತರ ಕನ್ನಡದ ಜಿಲ್ಲಾಧಿಕಾರಿಗೆ ಪತ್ರ ಬರೆದು ಸೂಕ್ತ ಕ್ರಮ ಕೈಗೊಂಡು ತುರ್ತು ವರದಿ ನೀಡಲು ಸೂಚಿಸಿದ್ದಾರೆ.