ETV Bharat / state

ಭಟ್ಕಳದಲ್ಲಿ ಲಾಕ್​ಡೌನ್​ ಸಡಿಲಿಕೆ.. ಸಾಮಾಜಿಕ ಅಂತರ ಮರೆತ ಜನರು

ಮೂರು ದಿನಗಳಿಂದ ಹೊರ ಬರಲು ಭಯ ಪಟ್ಟಿದ್ದ ಜನ ಇಂದು ರಾಜಾರೋಷವಾಗಿ ಸಾಮಾಜಿಕ ಅಂತರ ಮರೆತು ಓಡಾಡಿರುವುದು ಕಂಡು ಬಂದಿತು. ಪಟ್ಟಣದಲ್ಲಿ ಶೇ.90ರಷ್ಟು ಅಂಗಡಿ -ಮುಂಗಟ್ಟು ತೆರೆದಿವೆ.

bhatkal
ಸಾಮಾಜಿಕ ಅಂತರ ಮರೆತ ಸಾರ್ವಜನಿಕರು
author img

By

Published : Jun 1, 2020, 8:55 PM IST

Updated : Jun 1, 2020, 10:07 PM IST

ಭಟ್ಕಳ : ಕಳೆದ ಎರಡು ತಿಂಗಳಿನಿಂದಿದ್ದ ಲಾಕ್​ಡೌನ್‌ನ ಶುಕ್ರವಾರದಿಂದ ಜಿಲ್ಲಾಡಳಿತ ಸಡಿಲಿಕೆ ಮಾಡಿದೆ. ಇದೀಗ ಜನ ಸಾಮಾಜಿಕ ಅಂತರ ಪಾಲನೆ ಮಾಡದೇ ನಿರ್ಲಕ್ಷ ತೋರುತ್ತಿದ್ದಾರೆ.

ಜಿಲ್ಲಾಡಳಿತ ಗುರುತಿಸಿದಂತೆ ಪಟ್ಟಣ ವ್ಯಾಪ್ತಿಯ 5 ಕಂಟೇನ್ಮೆಂಟ್‌ ಪ್ರದೇಶ ಹೊರತುಪಡಿಸಿ ಉಳಿದೆಡೆ ಕಳೆದ ಮೂರು ದಿನಗಳಿಂದ ಲಾಕ್​ಡೌನ ವಿನಾಯಿತಿ ನೀಡಿದೆ. ಇದರಿಂದ ಕಳೆದ ಮೂರು ದಿನಗಳಿಂದ ಹೊರ ಬರಲು ಭಯ ಪಟ್ಟಿದ್ದ ಜನ ಇಂದು ರಾಜಾರೋಷವಾಗಿ ಸಾಮಾಜಿಕ ಅಂತರ ಮರೆತು ಓಡಾಡಿರುವುದು ಕಂಡು ಬಂದಿತು. ಪಟ್ಟಣದಲ್ಲಿ ಶೇ.90ರಷ್ಟು ಅಂಗಡಿ -ಮುಂಗಟ್ಟು ತೆರೆದಿವೆ. ಜನರು ನಿರ್ಭಯವಾಗಿ ಖರೀದಿಯಲ್ಲಿ ತೊಡಗಿದ್ದಾರೆ.

ಕೆಲವರು ಮಾಸ್ಕ ಧರಿಸಿದ್ದರೆ ಇನ್ನು ಕೆಲವರು ಹಾಗೆ ಸಂಚರಿಸುತ್ತಿದ್ದಾರೆ. ಸಾಮಾಜಿಕ ಅಂತರಕ್ಕೆ ಜನರು ಖ್ಯಾರೇ ಎನ್ನುತ್ತಿಲ್ಲ. ಲಾಕ್​ಡೌನ್ ಸಡಿಲಿಕೆಯಿಂದ ತೆರೆದ ಅಂಗಡಿಗಳು ಮಧ್ಯಾಹ್ನ 2 ಗಂಟೆಗೆ ಸರಿಯಾಗಿ ಮತ್ತೆ ಮುಚ್ಚಲಾಯಿತು.

Last Updated : Jun 1, 2020, 10:07 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.