ETV Bharat / state

ಕನ್ನಡ ಬಾವುಟ ಸುಟ್ಟ ಪ್ರಕರಣದಲ್ಲಿ ಅಗತ್ಯ ಕ್ರಮ : ಸಚಿವ ಹೆಬ್ಬಾರ್ ಭರವಸೆ

ಎಂಇಎಸ್​​ ಪುಂಡಾಟಿಕೆಯಿಂದ ಜನರು ಬೇಸತ್ತಿದ್ದಾರೆ. ಇದರಿಂದ ತನ್ನ ಎಲ್ಲ ಅಸ್ಥಿತ್ವ ಕಳೆದುಕೊಂಡು ಹತಾಶರಾಗಿ ಇಂತಹ ಪುಂಡಾಟಿಕೆಯ ಕಾರ್ಯದಲ್ಲಿ ತೊಡಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

hebbar statment on burning of Kannada flag

author img

By

Published : Dec 19, 2021, 2:42 AM IST

ಶಿರಸಿ: ಕನ್ನಡ ಬಾವುಟ ಸುಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲವೂ ಸಾಕ್ಷಿ ಸಹಿತ ಸಿಕ್ಕಿದ್ದು, ತಪ್ಪಿತಸ್ಥರ ವಿರುದ್ಧ ನಿರ್ಧಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾವುದು ಎಂದು ಕಾರ್ಮಿಕ ಸಚಿವ ಶಿವರಾಮ್‌ ಹೆಬ್ಬಾರ್‌ ತಿಳಿಸಿದರು.

ಕನ್ನಡ ಬಾವುಟ ಸುಟ್ಟ ಪ್ರಕರಣದಲ್ಲಿ ಅಗತ್ಯ ಕ್ರಮ : ಸಚಿವ ಹೆಬ್ಬಾರ್ ಭರವಸೆ

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಂಇಎಸ್ ಪುಂಡಾಟಿಕೆ ಸಹಿಸಿಕೊಳ್ಳಲು ಸರ್ಕಾರ ಸಿದ್ದವಿಲ್ಲ. ಈ ಹಿಂದೆ ಬೆಳಗಾವಿಯಲ್ಲಿದ್ದ ಕಾಲ ಈಗ ಬದಲಾವಣೆಯಾಗಿದೆ. ‌ಕರ್ನಾಟಕದಲ್ಲಿ ಎಂಇಎಸ್‌ ಈಗಾಗಲೇ ನಿರ್ಣಾಮವಾಗಿದೆ. ಹಿಂದೆ 4-5 ಜನ ಎಂಇಎಸ್‌ ಎಂಎಲ್‌ಎಗಳು, ಬೆಳಗಾವಿ ನಗರ ಪಾಲಿಕೆಗಳಲ್ಲಿ ಸದಸ್ಯರು ಇರುತ್ತಿದ್ದರು. ಈಗ ಎಂಇಎಸ್‌ ಜನಪ್ರತಿನಿಧಿಗಳು ಒಬ್ಬರೂ ಇಲ್ಲ. ಇವರ ಪುಂಡಾಟಿಕೆಯಿಂದ ಜನರು ಬೇಸತ್ತಿದ್ದಾರೆ. ಇದರಿಂದ ಎಂಇಎಸ್‌ ತನ್ನ ಎಲ್ಲ ಅಸ್ಥಿತ್ವ ಕಳೆದುಕೊಂಡು ಹತಾಶರಾಗಿ ಇಂತಹ ಪುಂಡಾಟಿಕೆಯ ಕಾರ್ಯದಲ್ಲಿ ತೊಡಗಿದೆ. ಆ ಪುಂಡರನ್ನು ಹದ್ದಬಸ್ತಿಲ್ಲಿಡುವ ಕಾರ್ಯ ಸರ್ಕಾರ ಮಾಡಲಿದೆ ಎಂದರು. ಬೆಳಗಾವಿಯನ್ನು ಕರ್ನಾಟಕದಿಂದ ಬೇರ್ಪಡಿಸುವ ಯಾವ ದುಷ್ಟ ಶಕ್ತಿಗಳಿಗೂ ಅವಕಾಶ ಇಲ್ಲ ಎಂದು ತಿಳಿಸಿದರು.

ರಾಜ್ಯದ ಬುದ್ದಿವಂತ ರಾಜಕಾರಣಿ ಎಂದೆನಿಸಿರುವ ರಮೇಶ್​ ಕುಮಾರ್‌ ಬೇಷರತ್​ ಆಗಿ ಸದನದಲ್ಲೇ ಕ್ಷಮೆ ಕೇಳಿದ್ದಾರೆ. ಆದರೆ, ಇಂತಹ ಹೇಳಿಕೆ ನೀಡುವುದು ಒರ್ವ ಬುದ್ಧಿವಂತ ರಾಜಕಾರಣಿ ಎನಿಸಿಕೊಳ್ಳವವರಿಗೆ ಶೋಭೆ ತರುವಂತದ್ದಲ್ಲ. ತನ್ನ ಬುದ್ಧಿವಂತಿಗೆ ಪ್ರದರ್ಶನ ಮಾಡಲು ಹೋಗಿ ಇಡೀ ದೇಶವ್ಯಾಪಿ ಮಹಿಳೆಯರನ್ನು ಎದುರು ಹಾಕಿಕೊಳ್ಳುವ ದುಸ್ಥಿತಿ ಬಂದಿದೆ.

ಇದನ್ನೂ ಓದಿರಿ: ನಾನು ಯಾವುದೇ ತಪ್ಪು ಮಾಡಿಲ್ಲ, ರಾಜೀನಾಮೆ ನೀಡುವ ಪ್ರಶ್ನೆ ಇಲ್ಲ: ಭೈರತಿ ಬಸವರಾಜ್

ಯಾವುದೇ ರಾಜಕಾರಣಿ ಸದನದೊಳಗೆ ಅಥವಾ ಹೊರಗೆ ತಮ್ಮ ನಾಲಿಗೆಯ ಮೇಲೆ ಹಿಡಿತ ಹೊಂದಿರಬೇಕು. ನಮ್ಮ ನಡೆ ಮತ್ತು ನುಡಿ ಜವಾಬ್ದಾರಿಯುತವಾಗಿ ಇರಬೇಕು. ಹಾಗಿದ್ದರೆ ಮಾತ್ರ ಸಮಾಜ ನಮ್ಮನ್ನು ಗೌರವಿಸುತ್ತದೆ. ಇಂಥದನ್ನು ಮಾಡಿಕೊಂಡರೆ ಅದೇ ಸಮಾಜ ಹಿರಿಯ ರಾಜಕಾರಣಿಯಾದರೂ ಈ ಪರಿಸ್ಥಿತಿಗೆ ತಂದಿಡುತ್ತದೆ ಎಂದರು.

ಇನ್ನು ಸಚಿವ ಭೈರತಿ ಬಸವರಾಜ ಮೇಲೆ ಕೇಳಿ ಬಂದಿರುವ ಆರೋಪ ಸತ್ಯಕ್ಕೆ ದೂರವಾಗಿದೆ. ಹಿಂದಿನ ಡಿಎಸ್ಪಿ ಗಣಪತಿ ಕೊಲೆ ಕೇಸ್​ಗೂ ಜಾರ್ಜ್​​ ರಾಜೀನಾಮೆಗೂ, ಭೈರತಿ ಬಸವರಾಜ ರಾಜೀನಾಮೆಗೆ ಹೋಲಿಕೆ ಮಾಡುವ ಪ್ರಶ್ನೆಯಿಲ್ಲ. ಭೈರತಿ ಬಸವರಾಜ ಕೇಸ್​ನ್ನು ಜಾರ್ಜ್​​​​ರವರ ಪ್ರಕರಣಕ್ಕೆ ಹೋಲಿಕೆ ಮಾಡುವುದು ಸರಿಯಲ್ಲ. 20 ವರ್ಷಗಳ ಹಿಂದಿನ ಪ್ರಕರಣ ಇದಾಗಿದ್ದು, ರಾಜೀನಾಮೆ ವಿಷಯವೇ ಬರುವುದಿಲ್ಲ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.