ETV Bharat / state

ಬೋನ್ಸಾಯ್ ಪದ್ಧತಿ ಮೂಲಕ ಔಷಧಿ ಗಿಡಗಳ ಕೃಷಿ: ಕುಮಟಾದಲ್ಲಿ ವಿಶಿಷ್ಟ ಪರಿಸರ ಪ್ರೇಮಿ - ಬೋನ್ಸಾಯ್ ಪದ್ಧತಿ ಮೂಲಕ ಔಷಧಿ ಗಿಡಗಳ ಕೃಷಿ

ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಮೂರೂರು ಕಲ್ಲಬ್ಬೆ ಗ್ರಾಮದ ನಿವಾಸಿ ನಿವೃತ್ತ ಅರಣ್ಯಾಧಿಕಾರಿ ಎಲ್​ಆರ್​ ಹೆಗಡೆ ಎಂಬುವವರು ಬೋನ್ಸಾಯ್ ಪದ್ಧತಿಯ ಮೂಲಕ ನೂರಾರು ವರ್ಷಗಳ ಕಾಲ ಬೆಳೆಯುವ ಮರಗಳು ಸೇರಿದಂತೆ ಹಲವು ಬಗೆಯ ಔಷಧೀಯ ಗಿಡಗಳನ್ನು ಬೆಳೆಸುತ್ತಿದ್ದಾರೆ. ಈ ಮೂಲಕ ಪರಿಸರ ಸಂರಕ್ಷಣೆಗೆ ಮುಂದಾಗಿದ್ದಾರೆ.

Kumuta person cultivation of medicinal plants by using of bonsai system
ಬೋನ್ಸಾಯ್ ಪದ್ಧತಿ ಮೂಲಕ ಔಷಧಿ ಗಿಡಗಳ ಕೃಷಿ
author img

By

Published : Mar 5, 2022, 10:59 PM IST

ಕಾರವಾರ: ಇತ್ತೀಚಿನ ದಿನಗಳಲ್ಲಿ ಗ್ರಾಮಗಳು ಅಭಿವೃದ್ಧಿ ಹೊಂದುತ್ತಿರುವಂತೆ ಕಾಂಕ್ರಿಟ್ ಕಟ್ಟಡಗಳೇ ಹೆಚ್ಚಾಗುತ್ತಿವೆ. ಗಿಡ-ಮರಗಳನ್ನು ಬೆಳೆಸಲು ಸ್ಥಳಾವಕಾಶವೇ ಇಲ್ಲದಂತಾಗಿದೆ. ಆದರೆ ಇಲ್ಲೊಬ್ಬ ಪರಿಸರ ಪ್ರೇಮಿ ನೂತನ ಶೈಲಿಯಲ್ಲಿ ಔಷಧೀಯ ಗುಣವುಳ್ಳ ಗಿಡಗಳು, ನೂರಾರು ವರ್ಷ ಬಾಳುವ ಮರಗಳನ್ನು ಬೆಳೆಸಲು ಮುಂದಾಗಿದ್ದಾರೆ.

ಬೋನ್ಸಾಯ್ ಪದ್ಧತಿ ಮೂಲಕ ಔಷಧಿ ಗಿಡಗಳ ಕೃಷಿ

ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಮೂರೂರು ಕಲ್ಲಬ್ಬೆ ಗ್ರಾಮದ ನಿವಾಸಿಯಾದ ನಿವೃತ್ತ ಅರಣ್ಯಾಧಿಕಾರಿ ಎಲ್.ಆರ್. ಹೆಗಡೆ ಅವರು ಪರಿಸರ ಸಂರಕ್ಷಣೆಗೆ ಮುಂದಾಗಿದ್ದಾರೆ. ನೂರಾರು ವರ್ಷಗಳ ಕಾಲ ಬೆಳೆಯುವ ಮರಗಳು ಸೇರಿದಂತೆ ಹಲವು ಬಗೆಯ ಔಷಧೀಯ ಗಿಡಗಳನ್ನು ಬೋನ್ಸಾಯ್ ಪದ್ಧತಿಯ ಮೂಲಕ ಬೆಳೆಸಿರುವ ಅವರು ಮನೆಯ ಮುಂದೆ ಅರಣ್ಯವನ್ನೇ ಸೃಷ್ಟಿಸಿದ್ದಾರೆ.

ಹೆಗಡೆಯವರು ಅರಣ್ಯ ಇಲಾಖೆಯಲ್ಲಿಸುಮಾರು 37 ವರ್ಷಗಳ ಕಾಲ ಸೇವೆ ಸಲ್ಲಿಸಿ ವಲಯ ಅರಣ್ಯಾಧಿಕಾರಿಯಾಗಿ ನಿವೃತ್ತಿಯಾಗಿದ್ದು, ಪ್ರಕೃತಿ ಮೇಲಿನ ತಮ್ಮ ಪ್ರೀತಿ ನಿವೃತ್ತಿಯಾಗದಂತೆ ಇಳಿವಯಸ್ಸಿನಲ್ಲೂ ಕಾಡು ಸಂರಕ್ಷಿಸುವ, ಗಿಡ-ಮರಗಳನ್ನು ಬೆಳೆಸುವ ಆಸಕ್ತಿ ಬೆಳೆಸಿಕೊಂಡಿದ್ದಾರೆ.

ಕಳೆದ ಏಳು ವರ್ಷದಿಂದ ಬೋನ್ಸಾಯ್ ಪದ್ಧತಿಯಲ್ಲಿ ಕೃಷಿ ಮಾಡುವ ಮೂಲಕ ಎಲ್ಲರ ಗಮನ ಸೆಳೆಯುತ್ತಿರುವ ಇವರು, ಭಾರತೀಯ ಪರಂಪರೆ ಮತ್ತು ಸಂಸ್ಕೃತಿಯನ್ನು ಅಳವಡಿಸಿಕೊಂಡು ವರಹಾಮಿಹೀರ ಹಾಗೂ ಇತರ ಋಷಿಮುನಿಗಳು ಬರೆದಂತ ಗ್ರಂಥದ ಅನುಗುಣವಾಗಿ ವನ ನಿರ್ಮಾಣ ಮಾಡಿದ್ದಾರೆ. ಸಪ್ತರ್ಷಿವನ, ರಾಶಿವನ,ಪಂಚಫಲವನ,ನಕ್ಷತ್ರವನ, ನವಗ್ರಹವನ ಸೇರಿದಂತೆ ಸುಮಾರು175ಕ್ಕೂ ಅಧಿಕ ಜಾತಿಯ ಔಷಧಿ ಗುಣವುಳ್ಳ ಗಿಡಗಳನ್ನು ಬೆಳೆಸಿದ್ದಾರೆ.

ಬೋನ್ಸಾಯ್ ಪದ್ಧತಿ ಮೂಲಕ ಔಷಧಿ ಗಿಡಗಳ ಕೃಷಿ:

ಬೋನ್ಸಾಯ್ ಕೃಷಿ ಪದ್ಧತಿಯಲ್ಲಿ ಮರವು ತನ್ನ ಮೂಲ ಗುಣದಲ್ಲಿಯೇ ಬೆಳೆಯುತ್ತದೆ. ಆದರೆ ಕುಬ್ಜವಾಗಿರುತ್ತದೆ. ಈ ಕಾರಣದಿಂದ ಇವುಗಳನ್ನು ಕುಂಡದಲ್ಲಿ ಬೆಳೆಸಲಾಗುತ್ತದೆ. ಈ ಮಾದರಿಯಲ್ಲಿ ಹೆಗಡೆಯವರು ಕಲ್ಲಬ್ಬೆಯ ತಮ್ಮ ಮನೆ ಆವರಣದಲ್ಲೇ ಕಲಾನಿಕೇತನ ಕುಬ್ಜವನ ಎಂಬ ಅರಣ್ಯ ನಿರ್ಮಾಣ ಮಾಡಿದ್ದು, ನೂರಾರು ವರ್ಷಗಳ ಕಾಲ ಬದುಕುವ ಮರಗಳನ್ನು ಇಲ್ಲಿ ನೋಡಬಹುದಾಗಿದೆ.

ಇಲ್ಲಿ ಔಷಧೀಯ ಗುಣಗಳುಳ್ಳ ಗಿಡಗಳನ್ನು ಬೆಳೆಸಲಾಗಿದ್ದು, ಆಲ,ಅರಳಿ, ಅಶ್ವತ, ಬೀಟೆ, ರಕ್ತ ಚಂದನ, ರುದ್ರಾಕ್ಷಿ, ನೆಲ್ಲಿ, ಅಶ್ವಿನಿ, ದೇವವೃಕ್ಷ ಸೇರಿದಂತೆ ವಿವಿಧ ಜಾತಿಯ ಸುಮಾರು 400 ಗಿಡಗಳನ್ನು ಬೆಳೆಸಲಾಗಿದೆ. ಅತೀ ಕಡಿಮೆ ನೀರು ಹಾಗೂ ಕಡಿಮೆ ಜಾಗದಲ್ಲಿ ಈ ಸಣ್ಣ ಕಾಡು ನಿರ್ಮಾಣ ಮಾಡಲಾಗಿದ್ದು, ಇಲ್ಲಿಗೆ ಭೇಟಿ ನೀಡುವ ಯಾವುದೇ ಜನರು ಬೋನ್ಸಾಯ್ ಕೃಷಿ ಪದ್ಧತಿ ಬಗ್ಗೆ ಉಚಿತವಾಗಿ ಮಾಹಿತಿ ಪಡೆಯಬಹುದಾಗಿದೆ. ಹೀಗಾಗಿ ಇವರ ಈ ಪರಿಸರ ಕಾಳಜಿಗೆ ಸಾರ್ವಜನಿಕರಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ: ಹಿಜಾಬ್​ ವಿವಾದ: ಮಂಗಳೂರಿನ ಕಾಲೇಜಿಗೆ ಅನಿರ್ದಿಷ್ಟಾವಧಿ ರಜೆ ಘೋಷಣೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.