ETV Bharat / state

ಶಾಂತಿ, ಸೌಹಾರ್ದತೆ ಸಂದೇಶ ಸಾರಲು ಸೈಕಲ್ ಯಾತ್ರೆ: 35 ದೇಶ ಸುತ್ತಲು ಹೊರಟ ಕೇರಳದ ಟೆಕ್ಕಿ - ಈಟಿವಿ ಭಾರತ ಕನ್ನಡ

ಆ.15ರಂದು ಕೇರಳದ ತಿರುವನಂತಪುರಂನಿಂದ ಸೈಕ್ಲಿಂಗ್ ಆರಂಭಿಸಿರುವ ಫಯಿಜ್ ಅಶ್ರಫ್, 35 ದೇಶಗಳನ್ನ ದಾಟಿ, 35,000 ಕಿ.ಮೀ. ಕ್ರಮಿಸಿ 450 ದಿನಗಳಲ್ಲಿ ಲಂಡನ್ ತಲುಪುವ ವಿಶ್ವಾಸ ಹೊಂದಿದ್ದಾರೆ.

Kerala techy Cycling Around 35 Country
35 ದೇಶ ಸುತ್ತಲು ಸೈಕಲ್​​ನಲ್ಲಿ ಹೊರಟ ಕೇರಳದ ಟೆಕ್ಕಿ
author img

By

Published : Sep 6, 2022, 5:33 PM IST

ಭಟ್ಕಳ: ಕೇರಳದ ಕ್ಯಾಲಿಕಟ್​​ನ ಫಯಿಜ್ ಅಶ್ರಫ್ ಎಂಬುವವರು ಸೈಕಲ್​​ನಲ್ಲಿ ದೇಶ ಸುತ್ತಲು ಹೊರಟಿದ್ದಾರೆ. ಶಾಂತಿ, ಸೌಹಾರ್ದತೆ ಮತ್ತು ಆರೋಗ್ಯ ಕಾಳಜಿಯ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಅವರು ಈ ಸೈಕಲ್ ಯಾತ್ರೆ ಕೈಗೊಂಡಿದ್ದಾರೆ.

ಆ.15ರಂದು ಕೇರಳದ ತಿರುವನಂತಪುರಂನಿಂದ ಸೈಕ್ಲಿಂಗ್ ಆರಂಭಿಸಿರುವ ಇವರು, 35 ದೇಶಗಳನ್ನ ದಾಟಿ, 35,000 ಕಿ.ಮೀ. ಕ್ರಮಿಸಿ 450 ದಿನಗಳಲ್ಲಿ ಲಂಡನ್ ತಲುಪುವ ವಿಶ್ವಾಸ ಹೊಂದಿದ್ದಾರೆ. ಸಾಫ್ಟ್​​ವೇರ್ ಇಂಜಿನಿಯರ್ ಆಗಿರುವ ಇವರು 2019 ರಲ್ಲಿ ಸೈಕಲ್​​ನಲ್ಲೇ ಸಿಂಗಾಪುರ ಪ್ರವಾಸ ಕೈಗೊಂಡಿದ್ದರು.

35 ದೇಶ ಸುತ್ತಲು ಸೈಕಲ್​​ನಲ್ಲಿ ಹೊರಟ ಕೇರಳದ ಟೆಕ್ಕಿ

ಸದ್ಯ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಿಂದ ಮುಂದೆ ಸಾಗಿರುವ ಫಯಿಜ್, 30 ದಿನಗಳಲ್ಲಿ ಭಾರತವನ್ನ ಸುತ್ತಿ, ಬಳಿಕ ಪಾಕಿಸ್ತಾನ, ಮಸ್ಕತ್, ಓಮನ್, ಯುಎಇ, ಸೌದಿ ಅರೇಬಿಯಾ, ಕ್ವಾಟರ್, ಬಹ್ರೈನ್, ಕುವೈತ್, ಇರಾಕ್, ಇರಾನ್, ಅಜರ್ ಬೈಜಾನ್, ಜಾರ್ಜಿಯಾ ಹಾಗೂ ಟರ್ಕಿ ದೇಶಗಳ ಮೂಲಕ ಲಂಡನ್ ತಲುಪಲಿದ್ದಾರೆ.

ಇದನ್ನೂ ಓದಿ: ಪರಿಸರ ಜಾಗೃತಿಗೆ ಸೈಕಲ್‌ ಯಾತ್ರೆ: ಗದಗದಲ್ಲಿ ರಾಜಸ್ಥಾನದ ನರ್ಪತ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.