ಕಾರವಾರ: ಲಾಕ್ಡೌನ್ ನಡುವೆಯೂ ಅದೆಷ್ಟೋ ಜನರು ಬೀದಿ ಸುತ್ತುತ್ತಿದ್ದಾರೆ. ಆದರೆ ಇಂತಹವರನ್ನು ಎಚ್ಚರಿಸುವ ನಿಟ್ಟಿನಲ್ಲಿ ಕುಮಟಾದಲ್ಲಿ ರಸ್ತೆಯ ಮೇಲೆಯೇ ಬೃಹತ್ ಕೊರೊನಾ ಚಿತ್ರ ಬಿಡಿಸುವ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ.
ನನ್ನ ಗೆಳೆತನ ಮಾಡಿದರೆ ಸಾವೇ ಗತಿ, ಮನೆಯವರೊಟ್ಟಿಗೆ ಇದ್ದರೆ ನಿಮ್ಮ ಪ್ರಗತಿ, ನಿಮ್ಮ ಮುಂದಿದೆ ಎರಡು ಆಯ್ಕೆ... ಹೀಗೆ ಹಲವು ಬರಹಗಳನ್ನು ಬೃಹತ್ ಕೊರೊನಾ ಆಕಾರದ ಜಾಗೃತಿ ಚಿತ್ರದೊಂದಿಗೆ ಕುಮಟಾದ ಗಿಬ್ ಹೈಸ್ಕೂಲ್ ಬಳಿಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕುಮಟಾದ ಕಲಾವಿದ ಪ್ರಕಾಶ್ ಭಂಡಾರಿ ಹಾಗೂ ರಾಜುನಾಯ್ಕ ತಂಡ ಬಿಡಿಸಿದೆ.
ಇನ್ನು ಎಲ್ಲರೂ ಮನೆಯಲ್ಲಿಯೇ ಇದ್ದು ಕೊರೊನಾ ವಿರುದ್ಧ ಹೋರಾಟಕ್ಕೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದ್ದಾರೆ.