ETV Bharat / state

ಕಾರವಾರ: ಚಾಲುಕ್ಯರ ಕಾಲದ ಎರಡು ಅಪೂರ್ವ ತಾಮ್ರ ಶಾಸನಗಳು ಪತ್ತೆ

author img

By

Published : Jan 17, 2021, 10:58 PM IST

ದೇವಸ್ಥಾನದ ಮರು ನಿರ್ಮಾಣ ಸಂಬಂಧ ಭೂಮಿ ಅಗೆಯುವಾಗ 5 ಸೆಂ.ಮೀ. ಹಾಗೂ 20 ಸೆಂ.ಮೀ. ಉದ್ದಳತೆಯ ಮತ್ತು 15 ಸೆಂ.ಮೀ. ಹಾಗೂ 10 ಸೆಂ.ಮೀ. ಉದ್ದಳತೆಯ ಎರಡು ತಾಮ್ರ ಶಾಸನಗಳು ಲಭ್ಯವಾಗಿವೆ.

copper inscriptions of Chalukyan period
ಕಾರವಾರ: ಚಾಲುಕ್ಯರ ಕಾಲದ ಎರಡು ತಾಮ್ರ ಶಾಸನಗಳು ಪತ್ತೆ

ಕಾರವಾರ: ದೇವಾಲಯದ ಜೀರ್ಣೋದ್ಧಾರದ ವೇಳೆ ಕಲ್ಯಾಣ ಚಾಲುಕ್ಯರ ತ್ರೈಲೋಕ್ಯಮಲ್ಲನ ಆಡಳಿತ ಕಾಲದ ಎರಡು ತಾಮ್ರ ಶಾಸನಗಳು ಅಂಕೋಲಾ ತಾಲ್ಲೂಕಿನ ಕುಂಬಾರಕೇರಿಯ ಕದಂಬೇಶ್ವರ ದೇವಾಲಯದ ಬಳಿ ಪತ್ತೆಯಾಗಿವೆ.

ಓದಿ: ವಿರೋಧದ ನಡುವೆಯೂ ಮುಂದಿನ ತಿಂಗಳು 'ಕೈ' ಹಿಡಿಯಲಿರುವ ಶರತ್ ಬಚ್ಚೇಗೌಡ..

ದೇವಸ್ಥಾನದ ಮರು ನಿರ್ಮಾಣ ಸಂಬಂಧ ಭೂಮಿ ಅಗೆಯುವಾಗ 5 ಸೆಂ.ಮೀ. ಹಾಗೂ 20 ಸೆಂ.ಮೀ. ಉದ್ದಳತೆಯ ಮತ್ತು 15 ಸೆಂ.ಮೀ. ಹಾಗೂ 10 ಸೆಂ.ಮೀ. ಉದ್ದಳತೆಯ ಎರಡು ತಾಮ್ರ ಶಾಸನಗಳು ಲಭ್ಯವಾಗಿವೆ. ಈ ಶಾಸನಗಳನ್ನು ದೇವಸ್ಥಾನದ ಕಟ್ಟಡ ನಿರ್ಮಾಣ ಸಮಿತಿಯ ಅಧ್ಯಕ್ಷ ವಿಠ್ಠಲರಾವ್ ವೆರ್ಣೇಕರ್ ಅವರು ಇತಿಹಾಸ ಸಂಶೋಧಕ ಶ್ಯಾಮಸುಂದರ ಗೌಡರ ಗಮನಕ್ಕೆ ತಂದಿದ್ದರು. ಈ ಬಗ್ಗೆ ಅಧ್ಯಯನ ನಡೆಸಿದ ಶ್ಯಾಮ್ ಸುಂದರ ಗೌಡ ಶಾಸನಗಳು ಕಲ್ಯಾಣ ಚಾಳುಕ್ಯರ ತ್ರೈಲೋಕ್ಯಮಲ್ಲನ ಆಡಳಿತ ಕಾಲದ್ದಾಗಿದೆ ಎಂದು ತಿಳಿಸಿದ್ದಾರೆ.

ಪ್ರಸ್ತುತ ಶಾಸನಗಳು 10ನೇ ಶತಮಾನದ ಕೊನೆಯಲ್ಲಿ ಅಂಕೋಲೆಯು ನೇರವಾಗಿ ಕಲ್ಯಾಣ ಚಾಳುಕ್ಯರ ಆಡಳಿತಕ್ಕೆ ಒಳಪಟ್ಟಿತ್ತು ಎನ್ನುವ ವಿಷಯವನ್ನು ತಿಳಿಸುತ್ತವೆ. ಶಾಸನದಲ್ಲಿ ಸ್ವಸ್ತಿ ಸಮಸ್ತ ಭುವನಾಶ್ರಯ ಪ್ರತೂವೀವಲ್ಲಭ ಮಹಾರಾಜಾಧಿರಾಜ ಸತ್ಯಾಶ್ರಯ ಕುಳತಿಳಕ ಪರಮಭಟ್ಟಾರಕ ಚಾಳುಕ್ಯಾಭರಣ ಶ್ರೀಮತ್ರೈಲೋಕ್ಯಮಲ್ಲ ದೇವರ ರಾಜ್ಯದಲ್ಲಿ ಶಕವರ್ಷ 897ನೇಯ ಯುವ ಸಂವತ್ಸರದ ಭಾದ್ರಪದ ಮಾಸದ ಅಮವಾಸ್ಯೆ ಆದಿತ್ಯವಾರದಂದು ಸಂಭವಿಸಿದ ಸೂರ್ಯಗ್ರಹಣದ ಸಂದರ್ಭದಲ್ಲಿ ಶ್ರೀಮದ್ ಕಲಿಯರಸ ಪ್ಪಿರಿಯ ಭೂತಯ್ಯಗಡಂಬನು ಕದಂಬೇಶ್ವರ ದೇವಾಲಯ ನಿರ್ಮಾಣ ಮಾಡಿದ್ದಾನೆ ಎಂಬ ವಿವರಗಳನ್ನು ಉಲ್ಲೇಖಿಸಲಾಗಿದೆ.

ಶಾಸನದಲ್ಲಿ ಉಲ್ಲೇಖಿತ ತ್ರೈಲೋಕ್ಯಮಲ್ಲನು ಕಲ್ಯಾಣ ಚಾಳುಕ್ಯರ ಎರಡನೇ ತೈಲಪನಾಗಿದ್ದು, ಈತನು ಕ್ರಿ.ಶ. 973ರಿಂದ 979ರ ವರೆಗೆ ಆಳ್ವಿಕೆ ನಡೆಸಿದ್ದಾನೆ. ಈತನ ಅವಧಿಯಲ್ಲಿ ಅಧಿಕಾರಿಯಾಗಿದ್ದ ಭೂತಯ್ಯಗಡಂಬ ಕದಂಬ ವಂಶಸ್ಥನಾಗಿರಬೇಕು. ಭೂತಯ್ಯ+ಕದಂಬ= ಭೂತಯ್ಯಗಡಂಬ. ಆದ್ದರಿಂದಲೇ ಆತ ಕಟ್ಟಿಸಿದ ದೇವಾಲಯ ಕದಂಬೇಶ್ವರ ದೇವಾಲಯವೆಂದು ಖ್ಯಾತಿಯಾಗಿದೆ.

ಅಲ್ಲದೆ ಶಾಸನವು ಸಿವರಾಸಿ ಜೀಯನನ್ನು ಉಲ್ಲೇಖಿಸುವುದರಿಂದ ಆ ಸಮಯದಲ್ಲಿ ಈ ಪ್ರದೇಶದಲ್ಲಿ ಕಾಳಾಮುಖ ಯತಿಗಳ ಪ್ರಾಭಲ್ಯವಿರುವುದರ ಕುರಿತು ಬೆಳಕು ಚೆಲ್ಲುತ್ತದೆ. ಶಾಸನದಲ್ಲಿ ಬರುವ ತೆಂಕಣಕೇರಿಯು ಇಂದಿನ ತೆಂಕಣಕೇರಿಯೆಂದು ಗುರುತಿಸಿದರೆ ಶಾಸನ ಹೇಳುವ 'ತಳವಟ್ಟೆ ಧಮ್ಮಗೇರಿ ಹರದರಕೇರಿ'ಯನ್ನು ತಳವೃತ್ತಿಯಾಧಾರಿತ ವ್ಯಾಪಾರಿಗಳ ಕೇರಿ ಎಂದು ಭಾವಿಸಿದಾಗ ಅದನ್ನು ಇಂದಿನ ಕುಂಬಾರಕೇರಿ ಎಂದು ಗುರುತಿಸಬಹುದು ಎಂದು ಶ್ಯಾಮಸುಂದರ ಗೌಡ ವಿವರಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.