ETV Bharat / state

ಕಾರವಾರದ ಆಕರ್ಷಣೆ ಹೆಚ್ಚಿಸಿದ ಸುರಂಗ ಮಾರ್ಗಗಳು: ಕರ್ನಾಟಕದ ಕಾಶ್ಮೀರಕ್ಕೆ ಮತ್ತೊಂದು ಗರಿ!

ರಾಜ್ಯದ ಕರಾವಳಿ ಭಾಗದಲ್ಲಿ ಇದೇ ಮೊದಲ ಬಾರಿಗೆ ಸುರಂಗ ಮಾರ್ಗವನ್ನ ರಾಷ್ಟ್ರೀಯ ಹೆದ್ದಾರಿ 66ರ ನಿರ್ಮಿಸಲಾಗಿದ್ದು, ವಾಹನ ಓಡಾಟಕ್ಕೆ ಅವಕಾಶ ಕಲ್ಪಿಸಿರುವುದರಿಂದ ಸ್ಥಳೀಯರು ಸಂತಸ ವ್ಯಕ್ತಪಡಿಸಿದ್ದಾರೆ.

karwar national highway tunnel
ಕಾರವಾರದ ಸುರಂಗ ಮಾರ್ಗಗಳು
author img

By

Published : Jun 7, 2023, 9:55 AM IST

Updated : Jun 7, 2023, 12:54 PM IST

ಕಾರವಾರದ ಆಕರ್ಷಕ ಸುರಂಗ ಮಾರ್ಗಗಳು

ಕಾರವಾರ : ಕರ್ನಾಟಕದ ಕಾಶ್ಮೀರ ಎಂದರೆ ನೆನಪಾಗೋದು ಕಾರವಾರ. ಇಲ್ಲಿನ ಠಾಗೋರ್ ಕಡಲತೀರ ಸೇರಿದಂತೆ ಹಲವು ಪ್ರವಾಸಿ ತಾಣಗಳು ಪ್ರತಿನಿತ್ಯ ಸಾವಿರಾರು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಇದೀಗ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಾಲ್ಕು ಸುರಂಗಗಳನ್ನು ನಿರ್ಮಿಸಲಾಗಿದ್ದು, ಕಾರವಾರಕ್ಕೆ ಬರುವ ಪ್ರವಾಸಿಗರು ಸುರಂಗ ಮಾರ್ಗದಲ್ಲಿ ಹೋಗುವ ಅನುಭವವನ್ನು ಸಹ ಪಡೆಯುವಂತಾಗಿದೆ.

ಹೌದು, ಕಡಲನಗರಿ ಕಾರವಾರ ಪ್ರವಾಸಿಗರ ನೆಚ್ಚಿನ ತಾಣ. ನಿತ್ಯ ದೇಶ ವಿದೇಶದಿಂದ ಸಾಕಷ್ಟು ಪ್ರವಾಸಿಗರು ಇಲ್ಲಿಗೆ ಆಗಮಿಸಿ ಎಂಜಾಯ್ ಮಾಡುತ್ತಾರೆ. ಇದೀಗ ಕಾರವಾರಕ್ಕೆ ಆಗಮಿಸುವ ಪ್ರವಾಸಿಗರಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹೊಸ ಅನುಭವ ಪಡೆಯುವಂತೆ ಮಾಡಿದೆ. ರಾಷ್ಟ್ರೀಯ ಹೆದ್ದಾರಿ 66ರ ಅಗಲೀಕರಣವಾಗಿದ್ದು, ಕಾರವಾರ ತಾಲೂಕಿನ ಬಿಣಗಾದಿಂದ ಕಾರವಾರ ನಗರದ ವರಗೆ ನಾಲ್ಕು ಸುರಂಗ ಮಾರ್ಗಗಳನ್ನು ಕೊರೆಯಲಾಗಿದೆ. ಸುಮಾರು ಏಳೆಂಟು ವರ್ಷಗಳಿಂದ ಕಾಮಗಾರಿ ಮಾಡಿ ಕೊನೆಗೂ ಹೆದ್ದಾರಿಯಲ್ಲಿ ಸುರಂಗ ಮಾರ್ಗದ ಮೂಲಕ ಜನರಿಗೆ ಓಡಾಡಲು ಅವಕಾಶ ಮಾಡಿಕೊಡಲಾಗಿದೆ.

ಇದನ್ನೂ ಓದಿ : ದಶಕಗಳ‌ ಸಮಸ್ಯೆಗೆ ಪರಿಹಾರ : ಬೈತಖೋಲ ಬಂದರು ಹೂಳೆತ್ತುವ ಕಾಮಗಾರಿಗೆ ಚಾಲನೆ

ಈ ಹಿಂದೆ ಬಿಣಗಾದಿಂದ ಕಾರವಾರಕ್ಕೆ ಬರಬೇಕಾದರೆ ಸುಮಾರು 4 ಕಿಲೋ ಮೀಟರ್ ಸಂಚರಿಸಿ ಬರಬೇಕಾಗಿತ್ತು. ಆದರೆ, ಸುರಂಗ ಮಾರ್ಗದ ನಿರ್ಮಾಣದಿಂದ ಕೇವಲ 1 ಕಿಲೋ ಮೀಟರ್ ಸಂಚರಿಸಿದರೆ ಕಾರವಾರ ನಗರ ಪ್ರವೇಶ ತಲುಪುವಂತಾಗಿದ್ದು, ವಾಹನ ಓಡಾಟಕ್ಕೆ ಅವಕಾಶ ಮಾಡಿಕೊಟ್ಟಿರುವುದು ಖುಷಿ ಪಡುವಂತಾಗಿದೆ.

ಇದನ್ನೂ ಓದಿ : ಭಟ್ಕಳದಲ್ಲಿ ಜೀವಜಲಕ್ಕೆ ಹಾಹಾಕಾರ : ಕೋಮು ಸಾಮರಸ್ಯಕ್ಕೆ ಸಾಕ್ಷಿಯಾದ ನೀರು ಪೂರೈಕೆ!

ಇನ್ನು ರಾಜ್ಯದ ಕರಾವಳಿ ಭಾಗದಲ್ಲಿ ಇದೇ ಮೊದಲ ಬಾರಿಗೆ ಸುರಂಗ ಮಾರ್ಗವನ್ನ ಹೆದ್ದಾರಿಯಲ್ಲಿ ನಿರ್ಮಿಸಲಾಗಿದೆ. ಕಾರವಾರದಲ್ಲಿ ನಿರ್ಮಾಣವಾಗಿರುವ ಸುರಂಗ ಮಾರ್ಗದ ಮೂಲಕ ವಾಹನದಲ್ಲಿ ಜನರು ಬಂದರೆ ಫ್ಲೈ ಓವರ್ ಸಿಗುತ್ತದೆ. ಫ್ಲೈ ಓವರ್​ನಲ್ಲಿ ರವೀಂದ್ರ ನಾಥ್ ಠಾಗೋರ್ ಕಡಲ ತೀರವನ್ನ ನೋಡಿಕೊಂಡು ಹೋಗುವ ಅವಕಾಶ ಸಿಕ್ಕಿದ್ದು, ಇದೊಂದು ರೀತಿ ಪ್ರವಾಸಿಗರನ್ನ ಹೆಚ್ಚಾಗಿ ಆಕರ್ಷಿಸುವಂತಾಗಿದೆ ಎನ್ನುತ್ತಾರೆ ಸ್ಥಳೀಯರು.

ಇದನ್ನೂ ಓದಿ : ಲಾಭದತ್ತ ಕಾರವಾರ ವಾಣಿಜ್ಯ ಬಂದರು : ಪ್ರಸಕ್ತ ವರ್ಷ 21 ಕೋಟಿ ಲಾಭ ಗಳಿಕೆ!

ಕಳೆದ ಐದಾರು ತಿಂಗಳ ಹಿಂದೆಯೇ ಸಂಸದ ಅನಂತ್ ಕುಮಾರ್ ಹೆಗಡೆ ಒಂದು ಸುರಂಗ ಮಾರ್ಗವನ್ನ ಉದ್ಘಾಟಿಸಿದ್ದರು. ಒಂದೇ ಮಾರ್ಗದ ಮೂಲಕ ವಾಹನಗಳು ಒಡಾಡುತ್ತಿದ್ದು, ಅಪಘಾತಕ್ಕೆ ಆಹ್ವಾನ ಮಾಡುವಂತಾಗಿತ್ತು. ಈ ಹಿನ್ನೆಲೆಯಲ್ಲಿ ತ್ವರಿತ ಗತಿಯಲ್ಲಿ ಕೆಲಸ ಮಾಡುವ ಮೂಲಕ ಎರಡು ಸುರಂಗ ಮಾರ್ಗದಲ್ಲಿ ಓಡಾಡಲು ಸದ್ಯಕ್ಕೆ ಅವಕಾಶ ಮಾಡಿಕೊಡಲಾಗಿದೆ. ಹೀಗಾಗಿ, ಕಾರವಾರಕ್ಕೆ ಆಗಮಿಸುವ ಪ್ರವಾಸಿಗರು ಮತ್ತು ಜನರು ಇನ್ಮುಂದೆ ಸುರಂಗ ಮಾರ್ಗದಲ್ಲಿ ಸಂಚರಿಸುವ ಹೊಸ ಅನುಭವ ಪಡೆಯುವ ಮೂಲಕ ಎಂಜಾಯ್ ಮಾಡಬಹುದು.

ಇದನ್ನೂ ಓದಿ : ಮುಗಿಯದ ಕಾಮಗಾರಿಯಿಂದ ಧೂಳುಮಯವಾದ ಹೆದ್ದಾರಿ; ನಿತ್ಯದ್ವರ್ಣದ ಕಾಡುಗಳಲ್ಲಿಯೂ ನರಕಮಯ ಪ್ರಯಾಣ!

Last Updated : Jun 7, 2023, 12:54 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.