ETV Bharat / state

ಇ-ತ್ಯಾಜ್ಯ ನಿರ್ವಹಣೆಗೆ ಹೊಸ ಹೆಜ್ಜೆ; ಕಾರವಾರ ನಗರಸಭೆಯಿಂದ ಮಾದರಿ ಕಾರ್ಯ

ಇ-ತ್ಯಾಜ್ಯ ಉತ್ಪಾದನೆಯಲ್ಲಿ ಭಾರತ 5ನೇ ಸ್ಥಾನದಲ್ಲಿದೆ. ಪ್ರತಿವರ್ಷ ಅಂದಾಜು ಸುಮಾರು 18.5 ಲಕ್ಷ ಟನ್‌ನಷ್ಟು ಇ-ತ್ಯಾಜ್ಯ ಉತ್ಪತ್ತಿಯಾಗುತ್ತಿದೆ. ಇದರ ಬಗ್ಗೆ ಗಮನ ಹರಿಸಿದ ಕಾರವಾರ ನಗರಸಭೆ ಇ-ತ್ಯಾಜ್ಯ ನಿರ್ವಹಣಾ ಘಟಕವನ್ನು ಆರಂಭಿಸಿದೆ.

Karwar municipality make e-waste management system
ಇ ತ್ಯಾಜ್ಯ ನಿರ್ವಹಣೆಗೆ ಮುಂದಾದ ಕಾರವಾರ ನಗರ ಸಭೆ
author img

By

Published : Apr 30, 2022, 9:41 PM IST

ಕಾರವಾರ: ಸರ್ಕಾರ ಸ್ವಚ್ಛತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಸಾವಿರಾರು ಕೋಟಿ ಹಣ ಖರ್ಚು ಮಾಡುತ್ತಿದೆ. ಆದರೂ ಕೂಡ ಕೆಲ ನಗರಗಳು ಸ್ವಚ್ಛತೆ ಬಗ್ಗೆ ಗಮನ ಹರಿಸುತ್ತಿಲ್ಲ. ಅದರಲ್ಲೂ ಇ-ತ್ಯಾಜ್ಯ ಇತ್ತೀಚಿನ ದಿನಗಳಲ್ಲಿ ಅತಿದೊಡ್ಡ ಸಮಸ್ಯೆಯಾಗಿ ಪರಿಣಮಿಸುತ್ತಿದೆ. ಆದರೆ ಇಲ್ಲೊಂದು ನಗರ ರಾಜ್ಯದಲ್ಲೇ ಮೊದಲ ಬಾರಿಗೆ ಇ-ವೇಸ್ಟೇಜ್ ಸಂಗ್ರಹಕ್ಕೆ ಮುಂದಾಗಿದ್ದು ಒಂದು ಹೆಜ್ಜೆ ಸ್ವಚ್ಛತೆಯಕಡೆ ಎನ್ನುವ ಘೋಷವಾಕ್ಯದೊಂದಿಗೆ ಇತರೆ ನಗರಗಳಿಗೂ ಮಾದರಿಯಾಗುವ ಕೆಲಸಕ್ಕೆ ಮುಂದಾಗಿದೆ.

23ಕ್ಕೂ ಅಧಿಕ ಬಗೆಯ ಎಲೆಕ್ಟ್ರಾನಿಕ್ಸ್ ಮತ್ತು ಎಲೆಕ್ಟ್ರಿಕಲ್ ಉಪಕರಣಗಳನ್ನು ಇ-ತ್ಯಾಜ್ಯ ಎಂದು ಪರಿಗಣಿಸಲಾಗುತ್ತದೆ. ಇಂತಹ ಎಲೆಕ್ಟ್ರಾನಿಕ್ ವಸ್ತುಗಳನ್ನ ಬಳಕೆ ಮಾಡಿದ ನಂತರ ಹಾಗೆಯೇ ಎಸೆದುಬಿಡುತ್ತಾರೆ. ಇದರಿಂದ ಅವುಗಳಲ್ಲಿನ ಆರ್ಸೆನಿಕ್, ಪಾದರಸ, ಕ್ಯಾಡಿಯಂನಂಥ ಭಾರ ಲೋಹಗಳು ಜಲಮೂಲ ಮತ್ತು ಮಣ್ಣು ಸೇರಿ ಪರಿಸರ ಮಾಲಿನ್ಯವಾಗುತ್ತದೆ. ಇವುಗಳ ವಿಲೇವಾರಿ ಸಮರ್ಪಕವಾಗಿ ನಡೆಯದಿರುವುದು ಮನುಷ್ಯನ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುವ ಸಾಧ್ಯತೆಯಿದೆ.

ಇ ತ್ಯಾಜ್ಯ ನಿರ್ವಹಣೆಗೆ ಮುಂದಾದ ಕಾರವಾರ ನಗರಸಭೆ

ಈ ನಿಟ್ಟಿನಲ್ಲಿ ರಾಜ್ಯದಲ್ಲಿಯೇ ಮೊದಲ ಬಾರಿಗೆ ಕಾರವಾರ ನಗರಸಭೆ ವತಿಯಿಂದ ನಗರದ ನಗರಸಭೆ ಹಾಗೂ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಬಾಕ್ಸ್‌ಗಳನ್ನು ಇರಿಸಿ ಇ-ತ್ಯಾಜ್ಯ ಸಂಗ್ರಹಕ್ಕೆ ಮುಂದಾಗಿದ್ದಾರೆ. ಇ-ತ್ಯಾಜ್ಯ ಉತ್ಪಾದನೆಯಲ್ಲಿ ಭಾರತ 5ನೇ ಸ್ಥಾನದಲ್ಲಿದೆ. ಭಾರತದಲ್ಲಿ ಪ್ರತಿವರ್ಷ ಸುಮಾರು 18.5 ಲಕ್ಷ ಟನ್‌ನಷ್ಟು ಇ-ತ್ಯಾಜ್ಯ ಉತ್ಪತ್ತಿಯಾಗುತ್ತದೆ.

ಕಾರವಾರದಲ್ಲಿ ಸ್ವಚ್ಛ, ಸುಂದರ ಪರಿಸರ ನಿರ್ಮಾಣಕ್ಕಾಗಿ ನಾನಾ ಕ್ರಮಕ್ಕೆ ಮುಂದಾಗಿರುವ ನಗರಸಭೆ ಇದರ ಜೊತೆ ಕಸ ಸಂಗ್ರಹದ ವಿಚಾರದಲ್ಲಿಯೂ ರಾಜ್ಯದಲ್ಲಿ ಮುಂಚೂಣಿಯಲ್ಲಿತ್ತು. ಇದೀಗ ಅಪಾಯಕಾರಿ ಇ-ತ್ಯಾಜ್ಯ ಪರಿಸರಕ್ಕೆ ಸೇರುವುದನ್ನ ತಡೆಯುವ ನಿಟ್ಟಿನಲ್ಲಿ ರಾಜ್ಯದಲ್ಲಿಯೇ ಮೊದಲ ಬಾರಿಗೆ ಅದರ ಸಂಗ್ರಹಕ್ಕೆ ಮುಂದಾಗಿದ್ದು, ನಗರಸಭೆ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿಯೂ ಮೆಚ್ಚುಗೆ ವ್ಯಕ್ತವಾಗಿದೆ.

ಇದನ್ನೂ ಓದಿ: ಕೋವಿಡ್ ಕೇಸ್ ಏರಿಕೆ ಬೆನ್ನಲ್ಲೇ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಹೊಸ ಗೈಡ್​​​ಲೈನ್ಸ್ ಬಿಡುಗಡೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.