ETV Bharat / state

ಕಾಡಿನಲ್ಲಿ ಕೆಟ್ಟು ನಿಂತ ಬಸ್: ವಿಡಿಯೋ ಮೂಲಕ ಮಹಿಳಾ ಕಂಡಕ್ಟರ್ ಅಳಲು - ಕಾರವಾರ ಕೆಎಸ್​ಆರ್​ಟಿಸಿ ಬಸ್ ಮಹಿಳಾ ಕಂಡಕ್ಟರ್ ನ್ಯೂಸ್

ಕಾಡಿನ ಮಧ್ಯೆ ಕೆಟ್ಟು ನಿಂತಿದ್ದ ಕೆಎಸ್​ಆರ್​ಟಿಸಿ ಬಸ್​ ಸರಿಪಡಿಸಲು ಮೇಲಧಿಕಾರಿಗಳು ತಾಂತ್ರಿಕ ಸಿಬ್ಬಂದಿ ಕಳುಹಿಸಿಕೊಟ್ಟಿಲ್ಲ ಎಂದು ಮಹಿಳಾ ಕಂಡಕ್ಟರ್​ ತಮ್ಮ ಅಸಹಾಯಕತೆಯನ್ನು ವಿಡಿಯೋ ಮೂಲಕ ತೋಡಿಕೊಂಡಿದ್ದಾರೆ.

Woman Conductor selfi Video viral
author img

By

Published : Nov 6, 2019, 9:37 PM IST

ಕಾರವಾರ: ಕಾಡಿನ ಮಧ್ಯೆ ಕೆಟ್ಟು ನಿಂತಿದ್ದ ಕೆಎಸ್​ಆರ್​ಟಿಸಿ ಬಸ್​ ಸರಿಪಡಿಸಲು ಯಾವೊಬ್ಬ ತಾಂತ್ರಿಕ ಸಿಬ್ಬಂದಿ ಕಳುಹಿಸದ ಮೇಲಧಿಕಾರಿಗಳ ಧೋರಣೆ ವಿರೋಧಿಸಿ ಮಹಿಳಾ ಕಂಡಕ್ಟರ್​ ತಮ್ಮ ಅಸಹಾಯಕತೆ ತೋಡಿಕೊಂಡರು. ಈ ಕುರಿತು ಕಂಡಕ್ಟರ್‌ ಮಾಡಿರುವ ಸೆಲ್ಫಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಕಾರವಾರ ಮಹಿಳಾ ಕಂಡಕ್ಟರ್ ಸೆಲ್ಫಿ ವಿಡಿಯೋ ವೈರಲ್​

ಹಳಿಯಾಳ ಘಟಕದ ಬಸ್ ಮಾರ್ಗ ಮಧ್ಯೆ ಪಂಕ್ಚರ್ ಆಗಿ ನಿಂತಿದ್ದು, ಡಿಪೋ ಮ್ಯಾನೇಜರ್ ಒಂದು ಚಕ್ರ ಮಾತ್ರ ಕಳುಹಿಸಿದ್ದಾರೆ. ಆದರೆ ಬಸ್​ನಲ್ಲಿದ್ದ ಟೂಲ್ ಬಾಕ್ಸ್ ತೆಗೆಯಲು ಆಗುತ್ತಿಲ್ಲ. ಬೇರೆ ಯಾವುದೇ ಟೂಲ್ ಬಾಕ್ಸ್ ಆಗಲೀ ಅಥವಾ ಮೆಕ್ಯಾನಿಕ್ ಆಗಲೀ ಕಳುಹಿಸಿಕೊಟ್ಟಿಲ್ಲ. ಕಾಡಿನ ಮಧ್ಯೆ ನಾನು ಒಬ್ಬಳೇ ಇದ್ದು ನನಗೇನಾದರೂ ಆದಲ್ಲಿ ಅದಕ್ಕೆ ಡಿಪೋ ಮ್ಯಾನೇಜರ್ ಹೊಣೆಗಾರರು ಎಂದು ಸೆಲ್ಫಿ ವಿಡಿಯೋದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಮ್ಯಾನೇಜರ್​ಗೆ ತಿಳಿಸಿದಾಗ ಮತ್ತೆ ಯಲ್ಲಾಪುರಕ್ಕೆ ತೆರಳಿ ಮೆಕ್ಯಾನಿಕ್‌ ಕರೆದುಕೊಂಡು ಬರುವಂತೆ ತಿಳಿಸಿದ್ದು ಬಸ್ ಪರಿಶೀಲಿಸದೇ ಕಳುಹಿಸುತ್ತಿರುವುದಕ್ಕೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗುತ್ತಿದೆ.

Intro:Body:KN_KWR_04_LADY CONDUCTOR VIDEO VIRAL_7202800

ಕಾರವಾರ: ಕಾಡಿನ ಮಧ್ಯೆ ಪಂಕ್ಚರ್ ಆಗಿ ನಿಂತಿದ್ದ ಕೆಎಸ್ ಆರ್ ಟಿಸಿ ಬಸ್ ನ ಮಹಿಳಾ ಕಂಡಕ್ಟರೊರ್ವರು ತಮ್ಮ ಅಸಹಾಯಕತೆಯನ್ನು ತೋಡಿಕೊಂಡ ಘಟನೆಯೊಂದು ಹಳಿಯಾಳ ಬಳಿ ನಡೆದಿದ್ದು, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ವೈರಲ್ ಆಗಿದೆ.
ಹಳಿಯಾಳ ಘಟಕದ ಬಸ್ ಮಾರ್ಗ ಮಧ್ಯೆ ಪಂಕ್ಚರ್ ಆಗಿ ನಿಂತಿದ್ದು, ಡಿಪೋ ಮ್ಯಾನೇಜರ್ ಒಂದು ಚಕ್ರ ಮಾತ್ರ ಕಳುಹಿಸಿದ್ದಾರೆ. ಆದರೆ ಬಸ್ ನಲ್ಲಿದ್ದ ಟೂಲ್ ಬಾಕ್ಸ್ ತೆಗೆಯಲು ಆಗುತ್ತಿಲ್ಲ. ಬೇರೆ ಯಾವುದೇ ಟೂಲ್ ಬಾಕ್ಸ್ ಆಗಲಿ ಅಥವಾ ಮೆಕಾನಿಕ್ ನನ್ನಾಗಲಿ ಕಳುಹಿಸಿಕೊಟ್ಟಿಲ್ಲ ಎಂದು ಅಳಲು ತೋಡಿಕೊಂಡಿದ್ದಾಳೆ.
ಅಲ್ಲದೆ ಈ ಬಗ್ಗೆ ಮ್ಯಾನೇಜರ್ ಗೆ ತಿಳಿಸಿದಾಗ ಮತ್ತೆ ಯಲ್ಲಾಪುರಕ್ಕೆ ತೆರಳಿ ಮೆಕಾನಿಕಲ್ ಕರೆದುಕೊಂಡುಬರುವಂತೆ ತಿಳಿಸಿದ್ದು, ಇದೀಗ ಡ್ರೈವರ್ ಯಲ್ಲಾಪುರಕ್ಕೆ ತೆರಳಿದ್ದಾರೆ. ಆದರೆ ಕಾಡಿನ ಮಧ್ಯೆ ನಾನು ಒಬ್ಬಳೆ ಇದ್ದು ನನಗೆ ಏನಾದರೂ ಆದಲ್ಲಿ ಅದಕ್ಕೆ ಡಿಪೋ ಮ್ಯಾನೇಜರ್ ಹೊಣೆಗಾರರು ಎಂದು ದೂರಿದ್ದಾರೆ. ಈ ಸೆಲ್ಪೀ ವಿಡಿಯೋ ಇದೀಗ ವೈರಲ್ ಆಗಿದ್ದು, ಬಸ್ ಪರಿಶೀಲಿಸದೇ ಕಳುಹಿಸುತ್ತಿರುವುದಕ್ಕೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗತೊಡಗಿದೆ. Conclusion:

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.