ಕಾರವಾರ: ಕೋವಿಡ್ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಜಾರಿ ಮಾಡಿದ್ದ ವೀಕೆಂಡ್ ಲಾಕ್‌ಡೌನ್ ನಡುವೆಯೂ ಕಾರವಾರದಲ್ಲಿ ಅನಗತ್ಯವಾಗಿ ಓಡಾಡುತ್ತಿದ್ದವರಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.
ವೀಕೆಂಡ್ ಲಾಕ್‌ಡೌನ್ ಎರಡನೇಯ ದಿನ ಕಾರವಾರದ ವಿವಿಧೆಡೆ ಹಾಲು, ಮೊಟ್ಟೆ, ಮಾಂಸ ಖರೀದಿಗೆಂದು ತಿರುಗುವ ಕೆಲವರನ್ನು ಪೊಲೀಸರು ಹಿಂದಕ್ಕೆ ಕಳುಹಿಸಿದ್ದಾರೆ.
ಇದನ್ನೂ ಓದಿ: ಹೂವಿನಹಡಗಲಿಯಲ್ಲಿ 3 ಬ್ಲಾಕ್ ಫಂಗಸ್ ಪ್ರಕರಣ ಪತ್ತೆ!
ಭಾನುವಾರವಾದ ಕಾರಣ ಮೊಟ್ಟೆ, ಮೀನು, ಚಿಕನ್ ಖರೀದಿಗೆ ಜನರ ಓಡಾಟ ಹೆಚ್ಚಾಗಿತ್ತು. 10 ಗಂಟೆಯಾದರೂ ಓಡಾಟ ನಡೆಸುತ್ತಿದ್ದ ಕಾರಣ, ಸಿಪಿಐ ಸಂತೋಷ ಶೆಟ್ಟಿ ರಸ್ತೆಗಿಳಿದು ಅನಗತ್ಯವಾಗಿ ತಿರುಗಾಡುವವರಿಗೆ ಮನೆಯ ಬಳಿಯೇ ಅಗತ್ಯ ವಸ್ತುಗಳು ಬರುವುದು, ಅಲ್ಲಿಯೇ ಖರೀದಿಸುವಂತೆ ಹೇಳಿ ಕಳುಹಿಸಿದ್ದಾರೆ.