ETV Bharat / state

ಕಾರವಾರದ ಯುವಕ ಕುವೈತ್ ನಲ್ಲಿ ಸಾವು..‌. ಮೃತದೇಹಕ್ಕಾಗಿ ತಾಯಿಯಿಂದ ಜಿಲ್ಲಾಡಳಿತಕ್ಕೆ ಮೊರೆ

ಕಾರವಾರ ಮೂಲದ ಯುವಕನೋರ್ವ ಕುವೈತ್ ನಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದು, ಮೃತದೇಹವನ್ನು ತವರಿಗೆ ತರಲು ತಾಯಿ ಜಿಲ್ಲಾಧಿಕಾರಿ ಬಳಿ ಮನವಿ ಮಾಡಿದ್ದಾಳೆ.

ರೊಬಿನಸನ್ ಫ್ರಾನ್ಸಿಸ್ ರುಜಾರಿಯೋ
author img

By

Published : Sep 17, 2019, 5:21 PM IST

ಕಾರವಾರ: ಕಾರವಾರ ಮೂಲದ ಯುವಕನೋರ್ವ ಕುವೈತ್ ನಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದು, ಇದೀಗ ಮಗನ ಮೃತದೇಹವನ್ನು ತವರಿಗೆ ತರಲು ಸಹಾಯ ಮಾಡುವಂತೆ ಮೃತನ ತಾಯಿ ಜಿಲ್ಲಾಧಿಕಾರಿ ಬಳಿ ಮನವಿ ಮಾಡಿದ್ದಾರೆ.

ಬಡತನದಿಂದಾಗಿ ಕೆಲ ವರ್ಷದ ಹಿಂದೆ ಕುವೈತ್​ಗೆ ತೆರಳಿದ ತಾಲ್ಲೂಕಿನ ಕಡವಾಡದ ಕ್ರಿಶ್ಚಿಯನ್ ವಾಡಾದ ನಿವಾಸಿ ರೊಬಿನಸನ್ ಫ್ರಾನ್ಸಿಸ್ ರುಜಾರಿಯೋ ಭಾನುವಾರ ಕುವೈತ್ ನ ಫರ್ವಾನಿಯ ನಗರದಲ್ಲಿ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟಿದ್ದಾನೆ.

ಆದರೆ ಈತನ ಮೃತದೇಹವನ್ನು ಕಾರವಾರಕ್ಕೆ ಗೋವಾ ವಿಮಾನ ನಿಲ್ದಾಣದ ಮೂಲಕ ತರಬೇಕಾಗಿದ್ದು, ಇದೀಗ ಮೃತನ ತಾಯಿ ಮೇರಿ ಫ್ರಾನ್ಸಿಸ್ ರುಜಾರಿಯೋ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ತನ್ನ ಮಗ ಕುವೈತಿನ ದಜೀಜ ಎಂಬ ನಗರದಲ್ಲಿ ಕುವೈತ್ ಫುಡ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾನೆ. ಆರ್ಥಿಕ ತೊಂದರೆಯಿಂದಾಗಿ ಮಗನ ಮೃತದೇಹವನ್ನು ತರಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಕುವೈತಿನ ಭಾರತೀಯ ಧೂತಾವಾಸದ ಜೊತೆ ಚರ್ಚಿಸಿ ತನ್ನ ಮಗನ ಶವವನ್ನು ಗೋವಾ ಮೂಲಕ ಕಾರವಾರಕ್ಕೆ ತರಿಸಬೇಕಾಗಿ ಮನವಿ ಮಾಡಿದ್ದಾಳೆ.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ ಡಾ.ಹರೀಶಕುಮಾರ್ ಕೆ. ಮೃತನ ಬಗ್ಗೆ ಮಾಹಿತಿ ಕಲೆಹಾಕಿ ಮುಂದಿನ ಕ್ರಮ ಕೈಗೊಳ್ಳುವ ಬಗ್ಗೆ ಭರವಸೆ ನೀಡಿದ್ದಾರೆ.

Intro:Body:ಕಾರವಾರ ಮೂಲದ ಯುವಕ ಕುವೈತ್ ನಲ್ಲಿ ಸಾವು..‌. ಮೃತದೇಹಕ್ಕಾಗಿ ತಾಯಿಯಿಂದ ಜಿಲ್ಲಾಡಳಿತಕ್ಕೆ ಮೊರೆ

ಕಾರವಾರ: ಕಾರವಾರ ಮೂಲದ ಯುವಕನೋರ್ವ ಕುವೈತ್ ನಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದು, ಇದೀಗ ಮಗನ ಮೃತದೇಹವನ್ನು ತವರಿಗೆ ತರಲು ಸಹಾಯ ಮಾಡುವಂತೆ ಮೃತನ ತಾಯಿ ಜಿಲ್ಲಾಧಿಕಾರಿ ಬಳಿ ಮನವಿ ಮಾಡಿದ್ದಾಳೆ.
ಬಡತನದಿಂದಾಗಿ ಕೆಲ ವರ್ಷದ ಹಿಂದೆ ಕುವೈತ್ ಗೆ ತೆರಳಿದ ತಾಲ್ಲೂಕಿನ ಕಡವಾಡದ ಕ್ರಿಶ್ಚಿಯನ್ ವಾಡಾದ ನಿವಾಸಿ ರೊಬಿನಸನ್ ಫ್ರಾನ್ಸಿಸ್ ರುಜಾರಿಯೋ ಭಾನುವಾರ ಕುವೈತ್ ನ ಫರ್ವಾನಿಯ ನಗರದಲ್ಲಿ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟಿದ್ದಾನೆ.
ಆದರೆ ಈತನ ಮೃತದೇಹವನ್ನು ಕಾರವಾರಕ್ಕೆ ಗೋವಾ ವಿಮಾನ ನಿಲ್ದಾಣದ ಮೂಲಕ ತರಬೇಕಾಗಿದ್ದು, ಇದೀಗ ಮೃತನ ತಾಯಿ ಮೇರಿ ಫ್ರಾನ್ಸಿಸ್ ರುಜಾರಿಯೋ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ತನ್ನ ಮಗ ಕುವೈತಿನ ದಜೀಜ ಎಂಬ ನಗರದಲ್ಲಿ ಕುವೈತ್ ಫುಡ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾನೆ.
ಆರ್ಥಿಕ ತಿಂದರೆಯಿಂದಾಗಿ ಮಗನ ಮೃತದೇಹವನ್ನು ತರಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಕುವೈತಿನ ಭಾರತೀಯ ಧೂತಾವಾಸದ ಜೊತೆ ಚರ್ಚಿಸಿ ತನ್ನ ಮಗನ ಶವವನ್ನು ಗೋವಾ ಮೂಲಕ ಕಾರವಾರಕ್ಕೆ ತರಿಸಬೇಕಾಗಿ ಮನವಿ ಮಾಡಿದ್ದಾಳೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ ಡಾ.ಹರೀಶಕುಮಾರ್ ಕೆ. ಮೃತನ ಬಗ್ಗೆ ಮಾಹಿತಿ ಕಲೆಹಾಕಿ ಮುಂದಿನ ಕ್ರಮ ಕೈಗೊಳ್ಳುವ ಬಗ್ಗೆ ಭರವಸೆ ನೀಡಿದ್ದಾರೆ.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.