ETV Bharat / state

ಅಂಕೋಲಾ ದಹಿಂಕಾಲ ಉತ್ಸವದಲ್ಲಿ ಮಿಂಚಿದ ಕಾಂತಾರಾ ಸ್ತಬ್ಧಚಿತ್ರ; ರಿಷಭ್‌ ಶೆಟ್ಟಿ ಮೆಚ್ಚುಗೆ - ರಿಷಬ್ ಶೆಟ್ಟಿ ಟ್ವೀಟ್

ಅಂಕೋಲಾ ದಹಿಂಕಾಲ ಉತ್ಸವದಲ್ಲಿ ಗಮನ‌ ಸೆಳೆದ ಕಾಂತಾರಾ ಸ್ತಬ್ಧಚಿತ್ರ. ಲಕ್ಷಾಂತರ ಜನರ ಮಧ್ಯೆ ರಂಗೇರಿದ ಪಂಜುರ್ಲಿ ದೈವದ ಸ್ತಬ್ಧ ಚಿತ್ರ ಮೆರವಣಿಗೆ.

Kantara tableau in ankola dahinkala utsav
ಅಂಕೋಲಾ ದಹಿಂಕಾಲ ಉತ್ಸವದಲ್ಲಿ ಗಮನ‌ ಸೆಳೆದ ಕಾಂತಾರಾ ಸ್ತಬ್ಧ ಚಿತ್ರ
author img

By

Published : Nov 20, 2022, 8:46 AM IST

ಕಾರವಾರ: ಎಲ್ಲೆಡೆ ಕಾಂತಾರಾ ಸಿನೆಮಾ ಸದ್ದು ಮಾಡುತ್ತಿದೆ. ಈ ನಡುವೆ ಅಂಕೋಲಾದಲ್ಲಿ ನಡೆದ ನಾಮಧಾರಿ ಸಮುದಾಯದ 'ದಹಿಂಕಾಲ ಉತ್ಸವ'ದಲ್ಲಿ ಕಾಂತಾರಾ ಸ್ತಬ್ಧಚಿತ್ರ ಗಮನ ಸೆಳೆಯಿತು. ಇದನ್ನು ನೋಡಿದ ಚಿತ್ರ ನಿರ್ದೇಶಕ ರಿಷಬ್ ಶೆಟ್ಟಿ ಮೆಚ್ಚುಗೆ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.

ಪ್ರತಿ ವರ್ಷದಂತೆ ಕಾರ್ತಿಕ ಮಾಸದಲ್ಲಿ ನಡೆಯುವ ನಾಮಧಾರಿ ದಹಿಂಕಾಲ ಉತ್ಸವ ಈ ಬಾರಿ ಕೂಡ ಅದ್ದೂರಿಯಾಗಿ ನಡೆಯಿತು. ಈ ವೇಳೆ ನಡೆಯುವ ಮೆರವಣಿಗೆಯಲ್ಲಿ ವಿವಿಧ ಸ್ತಬ್ಧಚಿತ್ರಗಳನ್ನ ಪ್ರದರ್ಶಿಸಲಾಗಿದ್ದು, ಅದರಲ್ಲಿ ಕಾಂತಾರಾ ಸ್ತಬ್ಧಚಿತ್ರ ಗಮನ ಸೆಳೆದಿದೆ.

ಚಿತ್ರದ ಕೊನೆಯಲ್ಲಿ ರಿಷಬ್ ಶೆಟ್ಟಿ ದೈವ ಆವಾಹನೆಯಾದಂತೆ ನಟಿಸುವ ದೃಶ್ಯವನ್ನು ಸ್ತಬ್ಧಚಿತ್ರವನ್ನಾಗಿ ರೂಪಿಸಲಾಗಿದೆ. ರಿಷಬ್​ ಶೆಟ್ಟಿಯೇ ನೈಜವಾಗಿ ಬಂದು ನಿಂತಂತೆ ಭಾಸವಾಗುತ್ತಿದ್ದು, ಪಂಜುರ್ಲಿ ದೈವವನ್ನೂ ಇಲ್ಲಿ ರೂಪಿಸಲಾಗಿದೆ. ಕಲಾವಿದ ದಿನೇಶ್ ಮೇತ್ರಿ ಕೈಯಲ್ಲಿ ಅರಳಿದ ಸ್ತಬ್ಧಚಿತ್ರ ಇದಾಗಿದೆ. ಉತ್ಸವದ ನಿಮಿತ್ತ ಶ್ರೀ ಶಾಂತಾದುರ್ಗಾ ವೆಂಕಟರಮಣ ದೇವರ ದೀಪಾಲಂಕೃತ ರಥೋತ್ಸವ ನಗರದ ಪ್ರಮುಖ ಬೀದಿಯಲ್ಲಿ ನಡೆಯಿತು.

ಜಾಗೃತಿಯ ಹಬ್ಬ: ಐತಿಹಾಸಿಕ ದಂಹಿಕಾಲ ಉತ್ಸವ ನಾಮಧಾರಿ ಸಮಾಜದ ಉತ್ಸವವಾದರೂ ಎಲ್ಲ ಸಮಾಜದವರನ್ನು ಒಟ್ಟಾಗಿ ಸೇರಿಸಿಕೊಂಡು ಆಚರಿಸಲ್ಪಡುತ್ತದೆ. ದೇವದಾಸಿ ಪದ್ಧತಿಯನ್ನು ವಿರೋಧಿಸುವುದಕ್ಕಾಗಿ ಹುಟ್ಟಿಕೊಂಡ ಆಚರಣೆಯೊಂದು ಸಮುದಾಯದ ಜಾಗೃತಿಯ ಹಬ್ಬವಾಗಿ ರೂಪಾಂತರಗೊಂಡಿದ್ದು ಇತಿಹಾಸ. ಜಿಲ್ಲೆಯ 18 ಸೀಮೆಗಳಲ್ಲಿ ಹರಡಿರುವ ನಾಮಧಾರಿಗಳು ಹಾಗೂ ಇತರ ಸಮುದಾಯದವರು ಈ ಹಬ್ಬಕ್ಕೆ ಆಗಮಿಸಿ ಮೆರುಗು ತಂದರು.

ಅಂಕೋಲಾ ದಹಿಂಕಾಲ ಉತ್ಸವದಲ್ಲಿ ಗಮನ‌ ಸೆಳೆದ ಕಾಂತಾರಾ ಸ್ತಬ್ಧಚಿತ್ರ

ಈ ಹಿಂದೆ ಪಟ್ಟಣದ ಬಂಡಿಬಜಾರದ ಕಟ್ಟೆಯಲ್ಲಿ ಶ್ರೀ ವೆಂಕಟರಮಣ ದೇವರನ್ನು ಪ್ರತಿಷ್ಠಾಪಿಸಿ ದೇವರ ಮುಂದೆ ಒಂದು ಸಮಾಜದವರು ಅರೆಬೆತ್ತಲೆಯಾಗಿ ನೃತ್ಯ ಮಾಡುವ ಅಸಹ್ಯಕರ ಸಂಪ್ರದಾಯವಿತ್ತು. ಈ ಸಂಪ್ರದಾಯವನ್ನು ತೊಡೆದು ಹಾಕಲು (ಸ್ವಾತಂತ್ರ್ಯ ಪೂರ್ವ 1946) ಸುಮಾರು 76 ವರ್ಷಗಳ ಹಿಂದೆ ಸಂಕಲ್ಪತೊಟ್ಟ ನಾಮಧಾರಿ ಸಮಾಜದವರು ನೃತ್ಯ ಮಾಡುವ ಸಂಪ್ರದಾಯವನ್ನು ಬಹಿಷ್ಕರಿಸಿ ಪೌರಾಣಿಕ ಪ್ರಸಂಗಗಳ ಯಕ್ಷಗಾನವನ್ನು ಆಡಿಸುವುದರೊಂದಿಗೆ ಸಮಾಜಕ್ಕೆ ದೊಡ್ಡ ಕೊಡುಗೆ ನೀಡಿದರು.

ದಹಿಂಕಾಲವೆಂದರೆ 'ಹೆಪ್ಪಿಟ್ಟ ಹಾಲು ಮೊಸರಾಗುವ ಸಮಯ' ಎಂದು ಅರ್ಥವಿದೆ. ಹೀಗೆ ಸಮಾಜದಲ್ಲಿನ ಕೆಟ್ಟ ವಿಚಾರಗಳು ತೊಲಗಿ ಸಮಾಜಕ್ಕೆ ಒಳಿತನ್ನು ಮಾಡುವ ಸಮಾಜ ಪ್ರಗತಿ ಪಥದಲ್ಲಿ ಸಾಗಬೇಕೆನ್ನುವುದು ದಹಿಂಕಾಲ ಉತ್ಸವದ ಮುಖ್ಯ ಉದ್ದೇಶವಾಗಿದೆ.

ಇದನ್ನೂ ಓದಿ: ಅಂಕೋಲಾದಲ್ಲಿ ನಾಮಧಾರಿ ದಹಿಂಕಾಲ ಉತ್ಸವ... ಗಮನ ಸೆಳೆದ ಕಲಾ ತಂಡಗಳ ಪ್ರದರ್ಶನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.