ಶಿರಸಿ: ಕಾಡಿನಿಂದ ನಾಡಿಗೆ ಬಂದು ವಾಸದ ಮನೆಯ ಹಿಂಭಾಗದಲ್ಲಿ ಅಡಗಿ ಕುಳಿತಿದ್ದ ಕಾಳಿಂಗ ಸರ್ಪವನ್ನು ಸ್ಥಳೀಯರ ಸಹಕಾರದಿಂದ ಅರಣ್ಯಾಧಿಕಾರಿಗಳು ಹಿಡಿದು ಕಾಡಿಗೆ ಬಿಟ್ಟಿದ್ದಾರೆ.
ಬಿಸಿಲ ತಾಪದಿಂದ ರಕ್ಷಿಸಿಕೊಳ್ಳಲು ತಂಪನ್ನು ಅರಸಿ ನಾಡಿಗೆ ಬಂದ 12 ಅಡಿಯ ಕಾಳಿಂಗ ಸರ್ಪ, ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಹಾರ್ಸಿಕಟ್ಟಾ ಸಮೀಪದ ಹೊನ್ನೆಹದ್ದ ಮಂಜುನಾಥ ಹೆಗಡೆ ಎಂಬುವವರ ಮನೆಯ ಹಿಂಭಾಗ ಪ್ರತ್ಯಕ್ಷವಾಗಿತ್ತು.
ಅಡಿಕೆ ಚೀಲದ ಬಳಿ ಅಡಗಿ ಕುಳಿತಿದ್ದ ಕಾಳಿಂಗನ ಬಗ್ಗೆ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಉರಗ ರಕ್ಷಕ ಮನೋಹರ್ ನಾಯರ್ ಜೊತೆ ಆಗಮಿಸಿ ಕಾಳಿಂಗ ಸರ್ಪವನ್ನು ಯಶಸ್ವಿಯಾಗಿ ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಡಲಾಗಿದೆ.