ETV Bharat / state

ಖ್ಯಾತಿಯ ಉತ್ತುಂಗಕ್ಕೇರಿದರೂ ಕನ್ನಡಿಗ ದ್ರೋಣಾಚಾರ್ಯನ ಮರೆಯದ ಬಂಗಾರದ 'ಬಾಹು' ನೀರಜ್.. - neeraj chopra visits coach kashinath naik house

ಟೋಕಿಯೊ ಒಲಂಪಿಕ್ಸ್​ ಜಾವೆಲಿನ್ ಥ್ರೋ ವಿಭಾಗದಲ್ಲಿ ಬಂಗಾರದ ಪದಕ ವಿಜೇತ ನೀರಜ್​ ಚೋಪ್ರಾ ತಮ್ಮ ಗುರುಗಳಾದ ಶಿರಸಿ ಮೂಲದ ಕಾಶಿನಾಥ್​ ಅವರ ಮನೆಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಗೆದ್ದ ಪದಕವನ್ನು ಗುರುವಿನ ಮೂಲಕ ಮತ್ತೊಮ್ಮೆ ಹಾಕಿಕೊಂಡು ಸಂಭ್ರಮಿಸಿದರು..

javelin-throw-gold-medalist-neeraj-chopra
ನೀರಜ್ ಚೋಪ್ರಾ
author img

By

Published : Aug 24, 2021, 9:04 PM IST

Updated : Aug 25, 2021, 7:51 AM IST

ಕಾರವಾರ : ಟೋಕಿಯೊ ಒಲಂಪಿಕ್ಸ್​ನಲ್ಲಿ ಚಿನ್ನದ ಪದಕ ಗೆದ್ದಿದ್ದ ನೀರಜ್ ಚೋಪ್ರಾ ಪೂನಾದಲ್ಲಿರುವ ತಮ್ಮ ಗುರು ಹಾಗೂ ಕನ್ನಡಿಗ ಕಾಶಿನಾಥ ನಾಯ್ಕ್ ಅವರ ಮನೆಗೆ ಭೇಟಿ ನೀಡಿ ಕೆಲ ಸಮಯ ಕಳೆದಿದ್ದಾರೆ.

javelin throw gold medalist neeraj chopra
ಗುರುವಿನಿಂದ ಪದಕ ಹಾಕಿಸಿಕೊಂಡ ನೀರಜ್​ ಚೋಪ್ರಾ

ಪೂನಾದ ಕೋರೆಗಾಂವ್​ನಲ್ಲಿರುವ ಶಿರಸಿ ಮೂಲದ ಕಾಶಿನಾಥ ಅವರ ಮನೆಗೆ ಆಗಮಿಸಿದ ನೀರಜ್ ಚೋಪ್ರಾ, ಅವರನ್ನು ಕಾಶಿನಾಥ ಪತ್ನಿ ಚೈತ್ರಾ ಆರತಿ ಬೆಳಗಿ ತಿಲಕ ಇಟ್ಟು ಸ್ವಾಗತಿಸಿದರು. ಮನೆಗೆ ಆಗಮಿಸುತ್ತಿದ್ದಂತೆ ಎದುರಿನಲ್ಲೇ ಕಂಡ ನಾಯಿಯನ್ನು ಹಿಡಿದು ನೀರಜ್​​ ಆಟವಾಡಿದ್ದಾರೆ.

ನಾಯಿಯ ಜೊತೆ ನೀರಜ್​ ಚೋಪ್ರಾ ಆಟ

ಬಳಿಕ ಗುರು ಕಾಶಿನಾಥ ನಾಯ್ಕ್ ಹಾಗೂ ಅವರ ಕುಟುಂಬದವರೊಂದಿಗೆ ಒಂದು ಗಂಟೆಗೂ ಹೆಚ್ಚು ಕಾಲ ಕಳೆದ ಅವರು ಮಕ್ಕಳನ್ನು ಎತ್ತಿ ಮುದ್ದಾಡಿದ್ದಾರೆ. ಜೊತೆಗೆ ಉಪಹಾರ ಕೂಡ ಸೇವನೆ ಮಾಡಿದ್ದಾರೆ. ಬಳಿಕ ಗುರುವಿನ ಮಾರ್ಗದರ್ಶನದಲ್ಲಿ ಗೆದ್ದ ಚಿನ್ನದ ಪದಕವನ್ನು ಗುರುವಿನಂದಲೇ ಮತ್ತೊಮ್ಮೆ ಕೊರಳಿಗೆ ಹಾಕಿಕೊಂಡು ಸಂಭ್ರಮಿಸಿದ್ದಾರೆ.

ಖ್ಯಾತಿಯ ಉತ್ತುಂಗಕ್ಕೇರಿದರೂ ಕನ್ನಡಿಗ ದ್ರೋಣಾಚಾರ್ಯನ ಮರೆಯದ ಬಂಗಾರದ 'ಬಾಹು' ನೀರಜ್..

ಈ ಮೂಲಕ ಕೆಲ ದಿನಗಳ ಹಿಂದೆ ಚಿನ್ನ ಗೆದ್ದ ನೀರಜ್ ಚೋಪ್ರಾ ಗುರು ಕಾಶಿನಾಥ ನಾಯ್ಕ್ ಅವರು ಅಲ್ಲ. ಅವರು ಯಾರೆಂಬುದೇ ಗೊತ್ತಿಲ್ಲ ಎಂದು ಅಥ್ಲೆಟಿಕ್ಸ್ ಫೆಡರೇಷನ್ ಆಫ್ ಇಂಡಿಯಾದ ಅಧ್ಯಕ್ಷ ಅದಿಲ್ಲೆ ಸುಮರುವಾಲ್ಲಾ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಕರ್ನಾಟಕ ಸರ್ಕಾರ ಕೋಚ್ ಕಾಶಿನಾಥ ನಾಯ್ಕ್ ಅವರಿಗೆ ಘೋಷಣೆ ಮಾಡಿದ್ದ ರೂ. 10 ಲಕ್ಷ ಬಹುಮಾನ ನೀಡಲು ವಿರೋಧ ವ್ಯಕ್ತಪಡಿಸಿದ್ದರು.

ಕಾಶಿನಾಥ ನಾಯ್ಕ ಕುಟುಂಬದೊಂದಿಗೆ ನೀರಜ್​ ಚೋಪ್ರಾ

ಈ ಬಗ್ಗೆ ಕನ್ನಡಿಗರು ಸೇರಿ ದೇಶದಾದ್ಯಂತ ಅಥ್ಲೆಟಿಕ್ಸ್ ಅಧ್ಯಕ್ಷರಿಗೆ ಕಾಮನ್‌ವೆಲ್ತ್ ಪದಕ ವಿಜೇತನ ಬಗ್ಗೆ ಅರಿವು ಇಲ್ಲದ್ದನ್ನ ಖಂಡಿಸಿದ್ದರು. ಆದರೆ, ಇದೀಗ ಸ್ವತಃ ನೀರಜ್ ಚೋಪ್ರಾ ಅವರೇ ಗುರುವಿನ ಮನೆಗೆ ಬಂದು ಪದಕ ತೋರಿಸಿ ಗೆಲುವನ್ನು ಸಂಭ್ರಮಿಸಿದ್ದು, ವಿರೋಧ ವ್ಯಕ್ತಪಡಿಸಿದವರಿಗೆ ಪ್ರತ್ಯುತ್ತರ ನೀಡಿದಂತಾಗಿದೆ.

Last Updated : Aug 25, 2021, 7:51 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.