ETV Bharat / state

ಅಂತಾರಾಜ್ಯ ಕಳ್ಳನ ಬಂಧನ: 5 ಲಕ್ಷ ರೂ.ಗೂ ಅಧಿಕ ಮೌಲ್ಯದ ವಸ್ತುಗಳು ವಶ

author img

By

Published : Nov 3, 2020, 8:22 PM IST

ರಾತ್ರಿ ವೇಳೆಯಲ್ಲಿ ಮನೆಗೆ ನುಗ್ಗಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಕಳ್ಳನನ್ನು ಪೊಲೀಸರು ಬಂಧಿಸಿದ್ದಾರೆ. ಇತನಿಂದ 3,50,000 ರೂ.ಮೌಲ್ಯದ 70 ಗ್ರಾಂ ಬಂಗಾರ ಹಾಗೂ 15,000 ರೂ. ಮೌಲ್ಯದ 200 ಗ್ರಾಂ ಬೆಳ್ಳಿಯ ಆಭರಣ ಮತ್ತು 31,000 ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ.

ಅಂತಾರಾಜ್ಯ ಕಳ್ಳನ ಬಂಧನ
ಅಂತಾರಾಜ್ಯ ಕಳ್ಳನ ಬಂಧನ

ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಗ್ರಾಮೀಣ ಭಾಗದಲ್ಲಿ ಕಳೆದ 2 ವರ್ಷಗಳಿಂದ ರಾತ್ರಿ ವೇಳೆಯಲ್ಲಿ ಮನೆಗೆ ನುಗ್ಗಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಕಳ್ಳನನ್ನು ಪೊಲೀಸರು ಬಂಧಿಸಿದ್ದಾರೆ. ಆತನಿಂದ 5 ಲಕ್ಷ ರೂ.ಗೂ ಅಧಿಕ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ತಡಸ್ಸಿನ ಕಮಲಾನಗರದ ಕೃಷ್ಣ ಲಮಾಣಿ (38 ) ಬಂಧಿತ ಆರೋಪಿಯಾಗಿದ್ದಾನೆ. ಇತನಿಂದ 3,50,000 ರೂ.ಮೌಲ್ಯದ 70 ಗ್ರಾಂ ಬಂಗಾರ ಹಾಗೂ 15,000 ರೂ. ಮೌಲ್ಯದ 200 ಗ್ರಾಂ ಬೆಳ್ಳಿಯ ಆಭರಣ ಮತ್ತು 31,000 ರೂ. ನಗದು. ಹೀಗೆ ಒಟ್ಟು 5 ಲಕ್ಷ ರೂ. ಬೆಲೆಯ ಬಂಗಾರದ ಆಭರಣಗಳು, ಬೆಳ್ಳಿಯ ಆಭರಣಗಳು ಹಾಗೂ ನಗದು ಹಣವನ್ನು ಜಪ್ತಿಪಡಿಸಿಕೊಳ್ಳಲಾಗಿದೆ.

ಅಂತಾರಾಜ್ಯ ಕಳ್ಳನ ಬಂಧನ
5 ಲಕ್ಷ ರೂ.ಗೂ ಅಧಿಕ ಮೌಲ್ಯದ ವಸ್ತುಗಳು ವಶ

ಕಳೆದ ಅ.19 ರಂದು ಮುಂಡಗೋಡ ಠಾಣಾ ವ್ಯಾಪ್ತಿಯ ಮೈನಳ್ಳಿಯಲ್ಲಿ ಒಂದೇ ದಿನ ಎರಡು ಮನೆ ಕಳ್ಳತನವಾಗಿದ್ದು, ಆರೋಪಿಯು ಕಳುವು ಮಾಡುವಾಗ ಮನೆಯ ಜನರು ಎಚ್ಚರವಾಗಿ ಅವನನ್ನು ಬೆನ್ನು ಹತ್ತಿ ಹಿಡಿಯಲು ಪ್ರಯತ್ನಿಸಿದ್ದರು. ಆದ್ರೂ ಆರೋಪಿಯು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದನು. ಅದರಂತೆ ಕೂಡಲೇ ಶಿರಸಿ ಡಿ.ಎಸ್.ಪಿ., ಮುಂಡಗೋಡ ಠಾಣಾ ಪೊಲೀಸ್ ನಿರೀಕ್ಷಕರ ನೇತೃತ್ವದಲ್ಲಿ ತನಿಖಾ ತಂಡವನ್ನು ರಚಿಸಿ ಆರೋಪಿಯನ್ನು ಪತ್ತೆ ಹಚ್ಚಲು ಬಲೆ ಬೀಸಲಾಗಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.