ETV Bharat / state

ಸಮಾಜದಲ್ಲಿ ಶಾಂತಿ ಕದಡುವ ಸಂಘಟನೆಗಳನ್ನ ಬ್ಯಾನ್ ಮಾಡಲು ಒತ್ತಾಯ - undefined

ಶಿರಸಿಯಲ್ಲಿ ಇತ್ತೀಚೆಗೆ ಕೋಮು ಗಲಭೆ, ಕೊಲೆ, ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿವೆ. ಇತ್ತೀಚೆಗೆ ನಗರದಲ್ಲಿ ನಡೆದ ಭೀಕರ ಕೊಲೆ ಹಾಗೂ ಹಲ್ಲೆ ಪ್ರಕರಣ ಸಾಕ್ಷಿ. ಇಂತಹ ಘಟನೆಗಳಲ್ಲಿ ಭಾಗಿಯಾಗುವ ಸಂಘಟನೆಗಳನ್ನು ಬ್ಯಾನ್ ಮಾಡಲು ಒತ್ತಾಯ.

ಸಮಾಜದಲ್ಲಿ ಶಾಂತಿ ಕದಡುವ ಸಂಘಟನೆಗಳನ್ನ ಬ್ಯಾನ್ ಮಾಡಲು ಒತ್ತಾಯ
author img

By

Published : May 2, 2019, 7:03 AM IST

ಶಿರಸಿ: ಪ್ರಶಾಂತ ಜಿಲ್ಲೆ ಶಿರಸಿಯಲ್ಲಿ ಇತ್ತೀಚೆಗೆ ಕೋಮು ಗಲಭೆ, ಕೊಲೆ, ಅತ್ಯಾಚಾರ ಪ್ರಕರಣ ಹೆಚ್ಚುತ್ತಿವೆ. ಇದಕ್ಕೆ ಮೊನ್ನೆ ಮೊನ್ನೆ ನಗರದಲ್ಲಿ ನಡೆದ ಭೀಕರ ಕೊಲೆ ಹಾಗೂ ಹಲ್ಲೆ ಪ್ರಕರಣ ಸಾಕ್ಷಿ. ಕೊಲೆ ಪ್ರಕರಣ ಬೆನ್ನತ್ತಿದಾಗ ಈ ಘಟನೆಗೂ ಸಂಘಟನೆಯೊಂದಕ್ಕೂ ನೇರ ಸಂಬಂಧ ಇರೋದು ಬಯಲಾಗಿದೆ. ಆ ಸಂಘಟನೆಯನ್ನು ಸಂಪೂರ್ಣ ಬ್ಯಾನ್ ಮಾಡಲು ಒತ್ತಡ ಕೇಳಿಬಂದಿದೆ.

ಸಮಾಜದಲ್ಲಿ ಶಾಂತಿ ಕದಡುವ ಸಂಘಟನೆಗಳನ್ನ ಬ್ಯಾನ್ ಮಾಡಲು ಒತ್ತಾಯ

ಶಿರಸಿಯ ಕಸ್ತೂರ ಬಾ ನಗರದಲ್ಲಿ ಅಸ್ಲಾಂ ಸಯ್ಯದ್ ಎಂಬಾತ ಮಾರ್ಚ್ 23 ರಂದು ರಾತ್ರಿ ಹೆಣವಾಗಿಬಿದ್ದಿದ್ದ. ಅದೇ ದಿನ ಬಿಜೆಪಿ ಮುಖಂಡನೊಬ್ಬನ ಮೇಲೆ ಚೂರಿ ಇರಿತವಾಗಿ ಆತ ಆಸ್ಪತ್ರೆ ಸೇರಿದ್ದರು. ಈ ಬರ್ಬರ ಹತ್ಯೆ ನಗರದಲ್ಲಿ ಸಂಚಲನ ಮೂಡಿಸಿತ್ತು. ಈ ಕುರಿತು ಪರಿಶೀಲನೆ ನಡೆಸಿದ ಪೊಲೀಸರು, ಪ್ರಕರಣದ ಗಂಭೀರತೆ ಅರಿತಿದ್ರು. ಹಲ್ಲೆಗೂ ಆ ಸಂಘಟನೆಗೂ ಲಿಂಕ್ ಇದ್ಯಾ ಎಂದು ಕೇಳಿದ್ದಕ್ಕೆ ಎಸ್.ಪಿ. ವಿನಾಯಕ್ ಪಾಟೀಲ್ ಅನುಮಾನದಿಂದಲೇ ತನಿಖೆ ತಿಳಿಸೋದಾಗಿ ತಿಳಿಸಿದ್ರು.

ವಾರದೊಳಗೇ ಬಿಜೆಪಿ ಮುಖಂಡ ಅನೀಪ್ ತಸೀಲ್ದಾರ್ ಮೇಲೆ ಹಲ್ಲೆ ಮಾಡಿದ ನಾಲ್ವರನ್ನು ಬಂಧಿಸಲಾಗಿದೆ. ಅಚ್ಚರಿ ಏನಂದ್ರೆ ಇವರೆಲ್ಲ ಎಸ್​ಡಿಪಿಐ ಸಂಘಟನೆಯ ಪ್ರಮುಖರು! ಸಂಘದ ತಾಲೂಕಾ ಅಧ್ಯಕ್ಷ ಅಸ್ಲಾಂ, ಜಿಲ್ಲಾ ಕಾರ್ಯಾಧ್ಯಕ್ಷ ಮಹ್ಮದ ಷರೀಪ್ ಬಂಧಿತರಾಗಿದ್ದಾರೆ.

ಸಮಾಜದಲ್ಲಿ ಅಶಾಂತಿ ಉಂಟುಮಾಡುವ ಎಸ್​ಡಿಪಿಐ ಶಿರಸಿಯಲ್ಲಿ ಬಲವಾಗಿ ಬೇರೂರಿದೆ. ಸುಮಾರು 1600 ಕ್ಕೂ ಹೆಚ್ಚು ಸದಸ್ಯರನ್ನ ಸಂಘ ಹೊಂದಿದ್ದು, ಈಗಾಗಲೇ ನಗರ ಸಭೆ ಚುನಾವಣೆಗೆ ಎಸ್​​ಡಿಪಿಐ ಅಭ್ಯರ್ಥಿ ಸ್ಪರ್ಧಿಸಿದ್ದರು. ನಗರದ ಬಸ್ ನಿಲ್ದಾಣದ ಪಕ್ಕದ ಇವರ ಕಚೇರಿಯಲ್ಲೇ ಎಲ್ಲ ಚಟುವಟಿಕೆ ನಡೆಯುತ್ತೆ ಎನ್ನಲಾಗಿದೆ. ಅದರಲ್ಲೂ ಪರೇಶ್ ಮೆಸ್ತಾ ಸಾವಿನ ಪ್ರಕರಣದ ಬಳಿಕ ಈ ಸಂಘಟನೆ ಹೆಚ್ಚು ಬಲವಾಗಿ ಬೇರೂರಿದೆ ಎನ್ನುತ್ತಾರೆ ಸ್ಥಳೀಯರು.

ಅದೇನೆ ಇರಲಿ, ಸಮಾಜದಲ್ಲಿ ಶಾಂತಿ ಕದಡುವ ಯಾವುದೇ ಸಂಘಟನೆಯನ್ನು ಬೆಳೆಸೋದು ಸರಿಯಲ್ಲ. ಘಾತುಕ ಕೆಲಸ ಮಾಡೋರಿಗೆ ತಕ್ಕ ಶಿಕ್ಷೆ ಆಗಲೇಬೇಕು ಎನ್ನುವುದು ಎಲ್ಲರ ಆಶಯವಾಗಿದೆ.

sample description

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.