ETV Bharat / state

40 ಮಂದಿಗೆ ಕೊರೊನಾ ಸೋಂಕು, ಆರು ಜನ ಗುಣಮುಖ - ಉತ್ತರಕನ್ನಡ ಜಿಲ್ಲೆ ಕೊರೊನಾದಿಂದ 6 ಮಂದಿ ಗುಣಮುಖ

ಅಂಕೋಲಾ ತಾಲೂಕಿನ 45 ವರ್ಷದ ವ್ಯಕ್ತಿ ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ. ಈತ ನಿರಂತರ ಚಿಕಿತ್ಸೆ ಬಳಿಕ ಇದೀಗ ಸಂಪೂರ್ಣ ಗುಣಮುಖನಾಗಿದ್ದು, ಜೊತೆಗೆ ಮುಂಡಗೋಡದ ಮೂವರು ದಾಂಡೇಲಿ ಹಾಗೂ ಹಳಿಯಾಳದ ತಲಾ ಓರ್ವರು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ..

Uttarakannada district
6 ಮಂದಿ ಗುಣಮುಖ
author img

By

Published : Jul 11, 2020, 10:03 PM IST

ಕಾರವಾರ : ಉತ್ತರಕನ್ನಡ ಜಿಲ್ಲೆಯಲ್ಲಿ ತೀವ್ರ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ವ್ಯಕ್ತಿ ಸೇರಿ 6 ಮಂದಿ ಸಂಪೂರ್ಣ ಗುಣಮುಖರಾಗಿದ್ದು, ಇದೀಗ ಇಂದು ಮತ್ತೆ ಬರೋಬ್ಬರಿ 40 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.

ಅಂಕೋಲಾ ತಾಲೂಕಿನ 45 ವರ್ಷದ ವ್ಯಕ್ತಿ ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ. ಈತ ನಿರಂತರ ಚಿಕಿತ್ಸೆ ಬಳಿಕ ಇದೀಗ ಸಂಪೂರ್ಣ ಗುಣಮುಖನಾಗಿದ್ದು, ಜೊತೆಗೆ ಮುಂಡಗೋಡದ ಮೂವರು ದಾಂಡೇಲಿ ಹಾಗೂ ಹಳಿಯಾಳದ ತಲಾ ಓರ್ವರು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಇನ್ನು, ಇದರ ಬೆನ್ನಲ್ಲೇ ಇಂದು ಮತ್ತೆ 40 ಪ್ರಕರಣ ಪತ್ತೆಯಾಗಿವೆ. ಸೋಂಕು ಪತ್ತೆಯಾದವರ ಪೈಕಿ ಅತೀ ಹೆಚ್ಚು 25 ಪ್ರಕರಣ ಶಿರಸಿಯಲ್ಲಿದ್ದು, 6 ಹಳಿಯಾಳ, ಕಾರವಾರ, ಮುಂಡಗೋಡ, ಹೊನ್ನಾವರ ತಲಾ ಎರಡು, ಭಟ್ಕಳದಲ್ಲಿ ಒಂದು ಪ್ರಕರಣ ಪತ್ತೆಯಾಗಿದೆ. ಇದರೊಂದಿಗೆ ಉತ್ತರಕನ್ನಡ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 585ಕ್ಕೆ ಏರಿಕೆಯಾಗಿದ್ದು, 227 ಮಂದಿ ಗುಣಮುಖರಾಗಿದ್ದಾರೆ. ನಾಲ್ವರು ಸಾವನ್ನಪ್ಪಿದ್ದು, 354 ಮಂದಿಗೆ ಚಿಕಿತ್ಸೆ ಮುಂದುವರಿದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.