ETV Bharat / state

ಭಟ್ಕಳದಲ್ಲಿ ಮತ್ತೊಬ್ಬರಿಗೆ ಕೊರೊನಾ... 21ಕ್ಕೇರಿದ ಸಕ್ರಿಯ ಸೋಂಕಿತರ ಸಂಖ್ಯೆ! - another corona case in bhatkala

7 ಮಂದಿಗೆ ಸೋಂಕು ತಗುಲಿರುವ ಕುರಿತು ಇಂದು ಬೆಳಗ್ಗೆ ಹೆಲ್ತ್​ ಬುಲೆಟಿನ್​​ ಬಿಡುಗಡೆ ಮಾಡಲಾಗಿತ್ತು. ಈಗ ಸಂಜೆ ವೇಳೆ ಬಿಡುಗಡೆಯಾದ ಬುಲೆಟಿನ್​​ನಲ್ಲಿ ಮತ್ತೊಬ್ಬರಿಗೆ ಸೋಂಕು ತಗುಲಿರುವ ಬಗ್ಗೆ ಮಾಹಿತಿ ನೀಡಲಾಗಿದೆ.

hospital
ಆಸ್ಪತ್ರೆ
author img

By

Published : May 9, 2020, 7:37 PM IST

ಕಾರವಾರ: ಬೆಳಗ್ಗೆ ಏಳು ಜನರಲ್ಲಿ ಸೋಂಕು ದೃಢಪಟ್ಟು ಆತಂಕಕ್ಕೆ ಕಾರಣವಾಗಿದ್ದ ಭಟ್ಕಳದಲ್ಲಿ ಸಂಜೆ ಹೊತ್ತಿಗೆ ಮತ್ತೊಬ್ಬರಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ಸಕ್ರಿಯ ಸೋಂಕಿತರ ಸಂಖ್ಯೆ 21ಕ್ಕೆ ಏರಿಕೆಯಾಗಿದೆ.

ಸಂಜೆಯ ಹೆಲ್ತ್​​ ಬುಲೆಟಿನ್​​​ನಲ್ಲಿ 23 ವರ್ಷದ ಮಹಿಳೆಗೆ ಸೋಂಕು ತಗುಲಿರುವುದು ದೃಢಪಟ್ಟಿರುವ ಕುರಿತು ಖಚಿತಪಡಿಸಲಾಗಿದೆ. ಈಕೆ ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಮಗುವಿಗೆ ಚಿಕಿತ್ಸೆ ಕೊಡಿಸಲು ಪತಿಯೊಂದಿಗೆ ಹೋದ ಸಂದರ್ಭದಲ್ಲಿ ಸೋಂಕು ತಗುಲಿರಬಹುದು ಎನ್ನಲಾಗಿದೆ.

ಸೋಂಕಿತ ಮಹಿಳೆ ಕುಟುಂಬದ 8 ಮಂದಿ ಹಾಗೂ ಅವರ ಸಂಪರ್ಕದಲ್ಲಿದ್ದ ನಾಲ್ವರಿಗೆ ನಿನ್ನೆ ಸೋಂಕು ದೃಢಪಟ್ಟಿತ್ತು. ನಾಲ್ಕು ದಿನದ ಹಿಂದೆ ಇದೇ ಕುಟುಂಬದ 18 ವರ್ಷದ ಯುವತಿಗೆ ಸೋಂಕು ತಗುಲಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.