ETV Bharat / state

ವಿಷ ಸೇವಿಸಿದ್ದ ರೋಗಿಯ ರಂಪಾಟ: ಖಾಸಗಿ ಆಸ್ಪತ್ರೆಯ ಐಸಿಯು ಪುಡಿ ಪುಡಿ! - sirasi patients destroy ICU room news

ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ವ್ಯಕ್ತಿಯೊಬ್ಬ ಕೋಪಗೊಂಡು ದಾಂಧಲೆ ನಡೆಸಿರುವ ಘಟನೆ ಗುರವಾರ ರಾತ್ರಿ ಶಿರಸಿಯಲ್ಲಿ ನಡೆದಿದೆ.

ಖಾಸಗಿ ಆಸ್ಪತ್ರೆಯ ಐಸಿಯು ಪುಡಿ ಪುಡಿ
ಖಾಸಗಿ ಆಸ್ಪತ್ರೆಯ ಐಸಿಯು ಪುಡಿ ಪುಡಿ
author img

By

Published : Aug 27, 2020, 9:43 PM IST

Updated : Aug 28, 2020, 7:20 AM IST

ಶಿರಸಿ (ಉತ್ತರಕನ್ನಡ): ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ರೋಗಿಯೊಬ್ಬ ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆಗೆ ದಾಖಲಾಗಿ ದಾಂಧಲೆ ನಡೆಸಿದ್ದಾನೆ.

ಖಾಸಗಿ ಆಸ್ಪತ್ರೆಯಲ್ಲಿ ರಂಪಾಟ ನಡೆಸಿದ ರೋಗಿ, ಆಸ್ಪತ್ರೆಯಲ್ಲಿನ ಗ್ಲಾಸ್, ಮಾನಿಟರ್​ ಸೇರಿದಂತೆ ಇತರೆ ಉಪಕರಣಗಳನ್ನು ಒಡೆದು ಹಾಕಿದ ಘಟನೆ ಗುರವಾರ ರಾತ್ರಿ ಶಿರಸಿಯಲ್ಲಿ ನಡೆದಿದೆ.

ಕ್ರಿಮಿನಾಶಕ ಸೇವಿಸಿದ್ದ ರೋಗಿಯ ರಂಪಾಟ

ನಗರದ ರೋಟರಿ ಚಾರಿಟೇಬಲ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ತಾಲೂಕಿನ ತಾರಗೋಡ ಗುಡ್ಡೆಕೊಪ್ಪದ ಪ್ರಕಾಶ ದಾಂಧಲೆ ಮಾಡಿದವ ಎಂದು ಆರೋಪಿಸಲಾಗಿದೆ. ಈತ ಕಳೆದ ಬುಧವಾರ ಬೆಳಗ್ಗೆ ಕ್ರಿಮಿನಾಶಕ ಸೇವಿಸಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದ. ನಂತರ ಅಲ್ಲಿಂದ ರೋಟರಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ದಾಖಲಿಸಲಾಗಿತ್ತು.

ಖಾಸಗಿ ಆಸ್ಪತ್ರೆಯ ಐಸಿಯು ಪುಡಿ ಪುಡಿ
ಖಾಸಗಿ ಆಸ್ಪತ್ರೆಯ ಐಸಿಯು ಪುಡಿ ಪುಡಿ

ಒಂದೂವರೆ ದಿನಗಳಿಂದ ಆಸ್ಪತ್ರೆಯ ಐಸಿಯುನಲ್ಲಿದ್ದ ರೋಗಿ, ಒಮ್ಮೆಲೇ ರೊಚ್ಚಿಗೆದ್ದು ಕೈಗೆ ಗ್ಲೂಕೋಸ್ ಆಡಳವಡಿಸಲು ಆಸರೆಯಾಗಿ ಇಟ್ಟಿದ್ದ ರಾಡ್​​ನಿಂದ ಐಸಿಯುನ ಮಾನಿಟರ್, ರಕ್ತ ಪರೀಕ್ಷಾ ಕೇಂದ್ರದ ಮೈಕ್ರೋಸ್ಕೋಪ್, ಬಾಗಿಲು, ಹಲವು ಗ್ಲಾಸ್​​ಗಳನ್ನು ಒಡೆದು ಹಾಕಿದ್ದಾನೆ. ರಾಡ್ ಹಿಡಿದು ರಸ್ತೆಯವರೆಗೆ ರೋಗಿ ಓಡಿ ಬಂದಿದ್ದು, ನಂತರ ಆತನನ್ನು ಹಿಡಿದು ಕೈ ಕಾಲು ಕಟ್ಟಿ ಹಾಕಿದ್ದಾರೆ. ಆದರೆ ಘಟನೆಯಲ್ಲಿ ಹತ್ತಿರದಲ್ಲೇ ಇದ್ದ ಯಾವುದೇ ನರ್ಸ್​ ಅಥವಾ ಆಸ್ಪತ್ರೆಯ ಸಿಬ್ಬಂದಿ, ಐಸಿಯುನಲ್ಲಿದ್ದ ಉಳಿದ ರೋಗಿಗಳಿಗೆ ತೊಂದರೆ ಆಗಿಲ್ಲ.

Last Updated : Aug 28, 2020, 7:20 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.