ಉತ್ತರ ಕನ್ನಡ/ ಶಿರಸಿ: ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ 5 ಟಿಪ್ಪರ್ ವಶಪಡಿಸಿಕೊಂಡ ಪೊಲೀಸರು ಐವರು ಚಾಲಕರನ್ನು ಬಂಧಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾದಲ್ಲಿ ನಡೆದಿದೆ.
ಜೋಯಿಡಾದ ಶಾಂತರಾಮ್(40), ಅಬ್ದುಲ್ (38), ಥಾಮಸ್(45), ಬಸವರಾಜ್ (41), ಹಾಗೂ ದೀಪಕ್(28) ಬಂಧಿತ ಆರೋಪಿಗಳು.
ಜೋಯಿಡಾದ ಜಗಲಪೇಟೆ ಬಳಿ 5 ಟಿಪ್ಪರ್ನಲ್ಲಿ ಮರಳು ಸಾಗಿಸುತ್ತಿದ್ದ ವೇಳೆ ಖಚಿತ ಮಾಹಿತಿ ಪಡೆದ ಜೋಯಿಡಾ ಹಾಗೂ ರಾಮನಗರ ಪೊಲೀಸರು ದಾಳಿ ನಡೆಸಿ ತಲಾ 50 ಮೆಟ್ರಿಕ್ ಟನ್ನಂತೆ ಲಾರಿಯಲ್ಲಿದ್ದ ಅಕ್ರಮ ಮರಳು ವಶಕ್ಕೆ ಪಡೆದಿದ್ದಾರೆ.
ರಾಮನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.