ETV Bharat / state

ಮುಂಡಳ್ಳಿ ಕಡಲತಡಿಯ ನಿವಾಸಿಗಳಿಗೆ ಅಕ್ರಮ ಮರಳು ಗಣಿಗಾರಿಕೆ ಕಂಟಕ

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲ್ಲೂಕಿನ ಮುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡಲತೀರದಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆ ಇದೀಗ ಗ್ರಾಮಕ್ಕೆ ಮುಳುವಾಗಿದೆ. ಗ್ರಾಮಕ್ಕೆ ಹೊಂದಿಕೊಂಡಿರುವ ಕಡಲತೀರದಲ್ಲಿ ಸಾಕಷ್ಟು ಮರಳು ಶೇಖರಣೆಯಾಗಿತ್ತು. ಆದ್ರೆ ಇದರ ಮೇಲೆ ಕಣ್ಣು ಹಾಕಿರುವ ಕೆಲ ದಂಧೆಕೋರರು ಕಡಲತೀರದಲ್ಲಿನ ಮರಳನ್ನು ಚೀಲಗಳಲ್ಲಿ ತುಂಬಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದಾರೆ. ಈ ಬಗ್ಗೆ ಗ್ರಾಮಸ್ಥರು ಸಾಕಷ್ಟು ಬಾರಿ ತಡೆಯಲು ಪ್ರಯತ್ನಿಸಿದರೂ ಸಹ ಸ್ಥಳೀಯ ಕೆಲವರ ಸಹಕಾರದಿಂದಾಗಿ ಅಕ್ರಮ ಮರಳು ಸಾಗಾಟ ದಂಧೆ ಎಗ್ಗಿಲ್ಲದೇ ನಡೆಯುತ್ತಿದ್ದು ಇದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ.

Illegal sand mining in Karwar river side regions
ಭೀಕರ ಮಳೆ, ಬಿರುಗಾಳಿಯಾಯ್ತು ಕಡಲ ತೀರ ವಾಸಿಗಳಿಗೆ ಈಗ ಅಕ್ರಮ ಮರಳುಗಣಿಗಾರಿಕೆ ಕಂಟಕ
author img

By

Published : Sep 7, 2020, 9:52 PM IST

ಕಾರವಾರ: ಕಡಲತಡಿಯ ಆ ಗ್ರಾಮದ ಜನರು ಮಳೆಗಾಲ ಶುರುವಾಯ್ತು ಅಂದ್ರೆ ಹಗಲು ರಾತ್ರಿ ಆತಂಕದಿಂದಲೇ ಬದುಕಬೇಕು. ಆಳೆತ್ತರಕ್ಕೆ ಅಪ್ಪಳಿಸುವ ಅಲೆಗಳಿಂದ ಮನೆಗಳಿಗೆ ನೀರು ನುಗ್ಗುವ ಆತಂಕ ಒಂದೆಡೆಯಾದ್ರೆ, ಮನೆಯೇ ಹಾರಿ‌ಹೋಗುವ ರೀತಿ ಬೀಸುವ ಗಾಳಿ ಇನ್ನೊಂದೆಡೆ. ಇಷ್ಟಾದರೂ ಗಟ್ಟಿ ಧೈರ್ಯ ಮಾಡಿ ಜೀವನ ಕಟ್ಟಿಕೊಂಡು ಬದುಕು ಸಾಗಿಸುತ್ತಿದ್ದವರಿಗೆ ಇದೀಗ ಅಕ್ರಮ ಮರಳು ಗಣಿಗಾರಿಕೆ ಕಂಟಕವಾಗಿ ಕಾಡತೊಡಗಿದೆ.

ಭೀಕರ ಮಳೆ, ಬಿರುಗಾಳಿಯಾಯ್ತು ಕಡಲ ತೀರ ವಾಸಿಗಳಿಗೆ ಈಗ ಅಕ್ರಮ ಮರಳುಗಣಿಗಾರಿಕೆ ಕಂಟಕ

ಹೌದು, ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲ್ಲೂಕಿನ ಮುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡಲತೀರದಲ್ಲಿ ನಡೆಯುತ್ತಿರುವ ಇಂತಹದೊಂದು ಅಕ್ರಮ ಚಟುವಟಿಕೆ ಇದೀಗ ಗ್ರಾಮಕ್ಕೆ ಮುಳುವಾಗಿದೆ. ಗ್ರಾಮಕ್ಕೆ ಹೊಂದಿಕೊಂಡಿರುವ ಕಡಲ ತೀರದಲ್ಲಿ ಸಾಕಷ್ಟು ಮರಳು ಶೇಖರಣೆಯಾಗಿತ್ತು. ಆದ್ರೆ ಇದರ ಮೇಲೆ ಕಣ್ಣು ಹಾಕಿರುವ ಕೆಲ ದಂಧೆಕೋರರು ಕಡಲತೀರದಲ್ಲಿನ ಮರಳನ್ನು ಚೀಲಗಳಲ್ಲಿ ತುಂಬಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದಾರೆ. ಈ ಬಗ್ಗೆ ಗ್ರಾಮಸ್ಥರು ಸಾಕಷ್ಟು ಬಾರಿ ತಡೆಯಲು ಪ್ರಯತ್ನಿಸಿದರೂ ಸಹ ಸ್ಥಳೀಯ ಕೆಲವರ ಸಹಕಾರದಿಂದಾಗಿ ಅಕ್ರಮ ಮರಳು ಸಾಗಾಟ ದಂಧೆ ಎಗ್ಗಿಲ್ಲದೇ ನಡೆಯುತ್ತಿದ್ದು ಇದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ.

ಈ ಬಗ್ಗೆ ಸ್ಥಳೀಯ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗದ ಹಿನ್ನೆಲೆ ಸ್ಥಳೀಯರು ಜಿಲ್ಲಾಧಿಕಾರಿಗಳಿಗೆ ಭೇಟಿ ಮಾಡಿ ಸಮಸ್ಯೆ ಪರಿಹರಿಸುವಂತೆ ಮನವಿ ಮಾಡಿದ್ದಾರೆ. ಇನ್ನು ಮುಂಡಳ್ಳಿ ಗ್ರಾಮದಲ್ಲಿ ಬಹುತೇಕರು ಮೀನುಗಾರಿಕೆ, ಕೂಲಿ ಹಾಗೂ ಕೃಷಿ ಕಾರ್ಯವನ್ನು ಮಾಡಿಕೊಂಡಿದ್ದಾರೆ. ಗ್ರಾಮದಲ್ಲಿ ಸುಮಾರು 150ಕ್ಕೂ ಅಧಿಕ ಮನೆಗಳಿದ್ದು, ಕಡಲತೀರಕ್ಕೆ ಹೊಂದಿಕೊಂಡೇ ಹೆಚ್ಚಿನವರು ವಾಸವಾಗಿದ್ದಾರೆ. ಅಲ್ಲದೇ ಗ್ರಾಮದಲ್ಲಿ ಶಾಲೆ, ದೇವಾಲಯಗಳು ಸಹ ಕಡಲತೀರದ ಸಮೀಪದಲ್ಲೇ ಇದ್ದು ಇದೀಗ ಬೀಚ್‌ನಲ್ಲಿರುವ ಮರಳನ್ನು ಯಥೇಚ್ಛವಾಗಿ ತುಂಬಿ ಸಾಗಾಟ ಮಾಡುತ್ತಿದ್ದು ಕಡಲಕೊರೆತ ಉಂಟಾಗುವಂತಾಗಿದೆ. ಈಗಾಗಲೇ ಮಳೆಗಾಲದಲ್ಲಿ ಭಾರಿ ಅಲೆಗಳು ಎದ್ದಾಗ ನೀರು ಮನೆಗಳಿಗೆ ನುಗ್ಗುತ್ತಿದೆ. ಇನ್ನು ಈಗ ನಡೆಸುತ್ತಿರುವ ಮರಳು ದಂಧೆ ನಿಲ್ಲಿಸದಿದ್ದಲ್ಲಿ ಸಮುದ್ರತೀರವೇ ಇಲ್ಲದಂತಾಗಿ ಮನೆಗಳು ಸಂಪೂರ್ಣ ಕೊಚ್ಚಿ ಹೋಗುವ ಸಾಧ್ಯತೆ ಇರುವುದರಿಂದ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

ಇನ್ನು ಸಮುದ್ರದ ಮರಳು ಉಪ್ಪಿನ ಅಂಶವನ್ನ ಹೊಂದಿರುವುದರಿಂದ ಈ ಮರಳನ್ನು ಕಟ್ಟಡ ಕಾಮಗಾರಿಯಲ್ಲಿ ಬಳಕೆ ಮಾಡುವುದಿಲ್ಲ. ಆದ್ರೆ ಈ ದಂಧೆಕೋರರು ಹಣದ ಆಸೆಗೆ ನದಿಯ ಮರಳಿನೊಂದಿಗೆ ಸಮುದ್ರದ ಮರಳನ್ನು ಸೇರಿಸಿ ಮಾರಾಟ ಮಾಡುತ್ತಿರುವ ಸಾಧ್ಯತೆಗಳಿದ್ದು, ಇಂತಹ ಮರಳಿನಿಂದ ನಿರ್ಮಾಣವಾದ ಕಟ್ಟಡಗಳು ಸಹ ಅಪಾಯಕಾರಿಯಾಗುವ ಸಾಧ್ಯತೆಗಳಿವೆ. ಹೀಗಾಗಿ ಜನರ ಹಿತದೃಷ್ಟಿಯಿಂದ ಅಕ್ರಮ ಮರಳು ದಂಧೆಗೆ ಬ್ರೇಕ್ ಹಾಕಬೇಕು ಅನ್ನೋದು ಗ್ರಾಮಸ್ಥರ ಬೇಡಿಕೆಯಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.