ETV Bharat / state

ಉತ್ತರ ಕನ್ನಡದ ರಾಮನಗರದಲ್ಲಿಯೂ ಅಕ್ರಮ ಕಲ್ಲು ಗಣಿಗಾರಿಕೆ: ಸ್ಫೋಟದ ಆತಂಕದಲ್ಲಿ ಜನ!

author img

By

Published : Jan 22, 2021, 10:25 PM IST

ಸ್ಫೋಟದ ತೀವ್ರತೆಗೆ ಗ್ರಾಮದ ಮನೆಗಳು ಬಿರುಕು ಬಿಟ್ಟುದ್ದು, ಕೃಷಿ ಜಮೀನು ಬರಡಾಗಿ ಬೂದಿ ಮುಚ್ಚಿಕೊಂಡಿದೆ. ಇನ್ನು ಅಂತರ್ಜಲ ಮಟ್ಟ ಸಹ ಸಂಪೂರ್ಣ ಇಳಿಮುಖವಾಗಿದೆ. ಪಕ್ಕದಲ್ಲಿಯೇ ಇರುವ ಸೂಪಾ ಅಣೆಕಟ್ಟಿಗೂ ಆತಂಕ ಎದುರಾಗಿದೆ. ಸ್ಫೋಟಕಗಳು ಎಲ್ಲೆಂದರಲ್ಲಿ‌ ಸಿಗುತ್ತಿದ್ದು, ಇದೀಗ ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.

illegal-quarrying-in-uttarakannada-district-ramanagara
ಅಕ್ರಮ ಕಲ್ಲುಗಣಿಗಾರಿಕೆ

ಕಾರವಾರ: ಶಿವಮೊಗ್ಗದಲ್ಲಿ ನಡೆದ ಸ್ಫೋಟದ ದುರ್ಘಟನೆ ಉತ್ತರ ಕನ್ನಡ ಜಿಲ್ಲೆಯ ರಾಮನಗರದ ಜನತೆಗೆ ಆತಂಕ‌ ಸೃಷ್ಟಿಸಿದೆ. ಕಾರಣ ಆಡಾಳಿ, ಗೌಳಿವಾಡ ಕಲ್ಲು ಗಣಿಗಾರಿಕಾ ಪ್ರದೇಶದಲ್ಲಿ ಮನಸೋ ಇಚ್ಛೆ ಜಿಲೆಟಿನ್ ಸ್ಫೋಟಿಸಿ ಕಲ್ಲು ಗಣಿಗಾರಿಕೆ ನಡೆಸುತ್ತಿರುವ ಪರಿಣಾಮ ಜನರಲ್ಲಿ ಸ್ಫೋಟದ ಭೀತಿ ಉಂಟಾಗಿದೆ.

ರಾಮನಗರದ ಆಡಾಳಿ, ಗೌಳಿವಾಡದಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆ ಪ್ರದೇಶದ ಸುತ್ತಮುತ್ತಲಿನ ಜನರಿಗೆ ಇದೀಗ ಮತ್ತಷ್ಟು ಆತಂಕ ಶುರುವಾಗಿದೆ. ಈ ಭಾಗದಲ್ಲಿ 8 ಕಂಪನಿಗಳಿಗೆ ಕಲ್ಲು ಗಣಿಗಾರಿಕೆ ನಡೆಸಲು ಎಕರೆಗಟ್ಟಲೆ ಜಾಗ ನೀಡಲಾಗಿದೆ.‌ ಇವುಗಳ ಪೈಕಿ ಬಹುತೇಕ ಕಂಪನಿಗಳು ಪರವಾನಗಿ ಪಡೆದ ಪ್ರದೇಶಗಳಿಗಿಂತಲೂ ಹೆಚ್ಚಾಗಿ ಕಾನೂನು ನಿಮಯ ಉಲ್ಲಂಘಿಸಿ ಕಲ್ಲು ಗಣಿಗಾರಿಕೆ, ಕ್ರಷರ್ ನಡೆಸುತ್ತಿವೆ ಎನ್ನುವ ಆರೋಪವಿದೆ.

ರಾಮನಗರದಲ್ಲಿಯೂ ನಿಲ್ಲದ ಅಕ್ರಮ ಕಲ್ಲು ಗಣಿಗಾರಿಕೆ

ಇನ್ನು ಈ ಭಾಗದಲ್ಲಿ ಬ್ಲಾಸ್ಟಿಂಗ್ ಕೂಡ ಮಿತಿಮೀರಿ ನಡೆಯುತ್ತಿದ್ದು, ಮಧ್ಯಾಹ್ನದ ಹೊತ್ತಿನಲ್ಲೇ 5-6 ಬಾರಿ ನಿಯಮ ಮೀರಿ ಬ್ಲಾಸ್ಟಿಂಗ್ ನಡೆಸುತ್ತಿದ್ದಾರೆ. ಈ ಬಗ್ಗೆ ಜಿಲ್ಲಾಡಳಿತ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಕೂಡ ಯಾರೊಬ್ಬರು ಗಮನ ಹರಿಸುತ್ತಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.

ನಾವು ಕಾಳಿ ಜಲವಿದ್ಯುತ್ ಯೋಜನೆಗಾಗಿ ಸರ್ವಸ್ವವನ್ನು ತ್ಯಾಗ ಮಾಡಿದವರು. ನಮಗೆ ಪರ್ಯಾಯವಾಗಿ ರಾಮನಗರದ 100 ಎಕರೆ ಪ್ರದೇಶದಲ್ಲಿ ವಸತಿ ಕಲ್ಪಿಸಿದ್ದರು. ಆದರೆ ಈ ಪ್ರದೇಶ ಕಲ್ಲಿನಿಂದ ಕೂಡಿರುವ ಕಾರಣ ಗಣಿಗಾರಿಕೆ ನಡೆಸಲು ಹೊರ ರಾಜ್ಯದವರಿಗೆ ಅವಕಾಶ ನೀಡಿದ್ದಾರೆ. ಆದರೆ ಇವರು ಅಕ್ರಮ ಗಣಿಗಾರಿಕೆಯಿಂದ ಕೋಟ್ಯಾಧೀಶರಾಗುತ್ತಿದ್ದರೆ, ಸಾಮಾನ್ಯ ಜನರು ನರಕಯಾತನೆ ಅನುಭವಿಸುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಓದಿ-ಜಿಲೆಟಿನ್ ಸ್ಫೋ​​ಟ ಸ್ಥಳಕ್ಕೆ ಸಚಿವ ನಿರಾಣಿ ಭೇಟಿ; ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ

ಇನ್ನು ಸೂಪಾ ಜಲಾಶಯದಿಂದ ನಿರಾಶ್ರಿತರಾದವರಿಗೆ 1981ರಲ್ಲಿ ರಾಮನಗರದಲ್ಲಿ ಪುನರ್ವಸತಿ ಕಲ್ಪಿಸಲಾಗಿತ್ತು. ಆದರೆ ಈ ಭೂಮಿಯನ್ನು ಕಲ್ಲು ಗಣಿಗಾರಿಕೆಗೆ ನೀಡಿದ್ದು, ಸರ್ಕಾರ ನಿಗದಿಪಡಿಸಿದ ಯಾವ ನಿಯಮವನ್ನೂ ಈ ಕಂಪನಿಗಳು ಪಾಲಿಸುತ್ತಿಲ್ಲವಂತೆ. ಇದರಿಂದ ಪ್ರತಿ ದಿನ ಇಲ್ಲಿನ ಜನರು ನರಳುವಂತೆ ಮಾಡಿದೆ.

ಅಲ್ಲದೆ, ಸ್ಫೋಟದ ತೀವ್ರತೆಗೆ ಗ್ರಾಮದ ಮನೆಗಳು ಬಿರುಕು ಬಿಟ್ಟುದ್ದು, ಕೃಷಿ ಜಮೀನು ಬರಡಾಗಿ ಬೂದಿ ಮುಚ್ಚಿಕೊಂಡಿದೆ. ಇನ್ನು ಅಂತರ್ಜಲ ಮಟ್ಟ ಸಹ ಸಂಪೂರ್ಣ ಇಳಿಮುಖವಾಗಿದೆ. ಪಕ್ಕದಲ್ಲಿಯೇ ಇರುವ ಸೂಪಾ ಅಣೆಕಟ್ಟಿಗೂ ಆತಂಕ ಎದುರಾಗಿದೆ. ಸ್ಫೋಟಕಗಳು ಎಲ್ಲೆಂದರಲ್ಲಿ‌ ಸಿಗುತ್ತಿದ್ದು, ಇದೀಗ ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.