ಕಾರವಾರ: ರೈಲಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 18 ಸಾವಿರ ಮೌಲ್ಯದ ಗೋವಾ ಮದ್ಯವನ್ನು ವಶಪಡಿಸಿಕೊಂಡಿರುವ ಘಟನೆ ಕಾರವಾರದ ಶಿರವಾಡ ರೈಲ್ವೆ ನಿಲ್ದಾಣದಲ್ಲಿ ಇಂದು ನಡೆದಿದೆ.
ಮುಂಬೈನಿಂದ ತ್ರಿವೇಂಡ್ರಂ ತೆರಳುತ್ತಿದ್ದ ನೇತ್ರಾವತಿ ಎಕ್ಸ್ಪ್ರೆಸ್ ರೈಲಿನ ಮುಂಭಾಗದ ಜನರಲ್ ಬೋಗಿಯಲ್ಲಿ 4 ಬ್ಯಾಗುಗಳಲ್ಲಿ ಗೋವಾದ 190 ಬಾಟಲ್ಗಳನ್ನು ಸಾಗಿಸುತ್ತಿದ್ದರು. ಇದೇ ವೇಳೆ, ಕಾರವಾರ ರೈಲ್ವೆ ನಿಲ್ದಾಣದಲ್ಲಿ ತಪಾಸಣೆ ನಡೆಸಿದ ಆರ್ಪಿಎಫ್ ಸಿಬ್ಬಂದಿ ದಿಲೀಪ್ ಗುನಗಿ ತಪಾಸಣೆ ನಡೆಸಿದಾಗ ಬಾಟಲ್ ಪತ್ತೆಯಾಗಿದೆ. ಆದರೆ, ಯಾವುದೇ ಆರೋಪಿಗಳು ಪತ್ತೆಯಾಗಿಲ್ಲ. ಮದ್ಯವನ್ನು ವಶಕ್ಕೆ ಪಡೆದಿರುವ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿ ಅಬಕಾರಿ ಇಲಾಖೆಗೆ ಹಸ್ತಾಂತರಿಸಿದ್ದಾರೆ.