ETV Bharat / state

ಮುರ್ಡೇಶ್ವರದಲ್ಲಿ ಲಕ್ಷಾಂತರ ಮೌಲ್ಯದ ಬಂಗಾರ, ನಗದು ಕಳವು - Bhatkal Latest Crime News

ಮುರ್ಡೆಶ್ವರದ ಹೆರಾಡಿ ಗ್ರಾಮದ ಗಜಾನನ ಗಣಪ ನಾಯ್ಕ ಎಂಬುವವರ ಮನೆಯಲ್ಲಿ ಕಳ್ಳತನವಾಗಿದೆ.

Home theft in Murdeshwar
ಮುರ್ಡೇಶ್ವರದಲ್ಲಿ ಮನೆ ಕಳ್ಳತನ..
author img

By

Published : Oct 27, 2020, 10:20 AM IST

ಭಟ್ಕಳ: ಮುರ್ಡೆಶ್ವರದ ಹೆರಾಡಿಯಲ್ಲಿ ಮನೆಗೆ ಕನ್ನ ಹಾಕಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ಬಂಗಾರ ಹಾಗೂ ನಗದು ದೋಚಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಗ್ರಾಮದ ಗಜಾನನ ಗಣಪ ನಾಯ್ಕ ಎಂಬುವವರ ಮನೆಯಲ್ಲಿ ಕಳ್ಳತನವಾಗಿದೆ. ಅ.23 ರಂದು ಬೆಳಿಗ್ಗೆ ಗಜಾನನ ತಮ್ಮ ಹೆಂಡತಿ ಜೊತೆಗೆ ಮೂಲಮನೆಯಾದ ಹೊನ್ನಾವರಕ್ಕೆ ತೆರಳಿದ್ದರು. ಅ. 26 ರಂದು ಮನೆಗೆ ವಾಪಸ್​​ ಬಂದಾಗ ಕಳ್ಳರು ಮನೆ ಬೀಗ ಒಡೆದಿರುವುದು ಗೊತ್ತಾಗಿದೆ. ಮನೆಯ ಒಳಹೊಕ್ಕು ನೋಡಿದಾಗ ಕಪಾಟಿನ ಲಾಕರ್​ ಒಡೆದಿದ್ದು, 173 ಗ್ರಾಂ ತೂಕದ ವಿವಿಧ ಮಾದರಿಯ ಬಂಗಾರದ ಆಭರಣಗಳು ಹಾಗೂ 35,000 ರೂ. ಕಳವಾಗಿತ್ತು.

ಆಭರಣಗಳ ಮೊತ್ತ ಒಟ್ಟು 8,65,400 ರೂ. ಎಂದು ಅಂದಾಜಿಸಲಾಗಿದೆ. ಈ ಸಂಬಂಧ ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.