ETV Bharat / state

ಮೂರು ದಿನದಿಂದ ನಿಂತಿದ್ದ ಲಾರಿ: ನಿತ್ರಾಣಗೊಂಡು ಬಿದ್ದಿದ್ದ ಚಾಲಕನ ಕಂಡು ಗಾಬರಿಗೊಂಡ ಜನ!

ಕಳೆದ ಮೂರು ದಿನಗಳಿಂದ ನಿಂತಿದ್ದ ತಮಿಳುನಾಡು ಪಾಸಿಂಗ್ ಹೊಂದಿದ್ದ ಲಾರಿಯನ್ನು ಪೊಲೀಸರು ಪರಿಶೀಲಿಸಿದಾಗ ಒಳಗಡೆ ನಿತ್ರಾಣಗೊಂಡು ಬಿದ್ದಿದ್ದ ಚಾಲಕ ಪತ್ತೆಯಾಗಿದ್ದಾನೆ. ಕೊರೊನಾ ಭೀತಿ ಹಿನ್ನೆಲೆ ಲಾರಿ ತಮಿಳುನಾಡು ಮೂಲದ್ದು ಎನ್ನುವುದನ್ನು ತಿಳಿದ ಸ್ಥಳೀಯರು ನಿತ್ರಾಣವಗೊಂಡು ಬಿದ್ದಿದ್ದ ಚಾಲಕನ ನೆರವಿಗೆ ಧಾವಿಸಲು ಹಿಂದೇಟು ಹಾಕಿದ್ದಾರೆ.

Honnavar
ನಿತ್ರಾಣಗೊಂಡ ಲಾರಿ ಚಾಲಕನನ್ನು ಕಂಡು ಗಾಬರಿಗೊಂಡ ಜನರು
author img

By

Published : Jun 3, 2020, 10:22 PM IST

ಹೊನ್ನಾವರ: ಪಟ್ಟಣದ ಶರಾವತಿ ಸರ್ಕಲ್​ ಸಮೀಪವಿರುವ ಶಿಲ್ಪಾ ಕಾಫಿ ಹೌಸ್ ಬಳಿ ಕಳೆದ ಮೂರು ದಿನಗಳಿಂದ ನಿಂತಿದ್ದ ತಮಿಳುನಾಡು ಪಾಸಿಂಗ್ ಹೊಂದಿದ್ದ ಲಾರಿಯನ್ನು ಪೊಲೀಸರು ಪರಿಶೀಲಿಸಿದಾಗ ಒಳಗಡೆ ನಿತ್ರಾಣಗೊಂಡು ಬಿದ್ದಿದ್ದ ಚಾಲಕ ಪತ್ತೆಯಾಗಿದ್ದಾನೆ.

ಕೊರೊನಾ ಭೀತಿ ಹಿನ್ನೆಲೆ ಲಾರಿ ತಮಿಳುನಾಡು ಮೂಲದ್ದು ಎನ್ನುವುದನ್ನು ತಿಳಿದ ಸ್ಥಳೀಯರು ಚಾಲಕನ ನೆರವಿಗೆ ಧಾವಿಸಲು ಹಿಂದೇಟು ಹಾಕಿದ್ದಾರೆ. ನಂತರ ಸ್ಥಳಕ್ಕಾಗಮಿಸಿದ ಪಿಎಸ್​ಐ ಶಶಿಕುಮಾರ ಹಾಗೂ ವಾಹನ ಚಾಲಕ ಶಿವಾನಂದ ಚಿತ್ರಗಿ ಕೈಗವಸು ತೊಟ್ಟು ಡ್ರೈವರ್ ಪಕ್ಕದ ಡೋರ್ ತೆಗದು ನೋಡಿದರೆ ಚಾಲಕ ನಿತ್ರಾಣಗೊಂಡು ಮಲಗಿರುವುದು ಕಂಡು ಬಂದಿದೆ. ಈತ ಕೊರೊನಾ ಸೋಂಕಿನಿಂದ ನರಳಿ ಅಶಕ್ತನಾಗಿದ್ದಾನೆ ಎಂದು ಭಾವಿಸಿದ ಸಾರ್ವಜನಿಕರು ರಕ್ಷಣೆಗೆ ಮುಂದೆ ಬರದಿದ್ದಾಗ ಪಟ್ಟಣ ಪಂಚಾಯತ್​ ಸದಸ್ಯ ಸುರೇಶ ಹೊನ್ನಾವರ ಹಾಗೂ ಟ್ಯಾಕ್ಸಿ ಡ್ರೈವರ್ ಶ್ರೀಕಾಂತ ಮೇಸ್ತ ಪಿಪಿಇ ಕಿಟ್ ಧರಿಸಿ ಅಸ್ವಸ್ಥ ಚಾಲಕನನ್ನು ಆಂಬುಲೆನ್ಸ್​ ಹತ್ತಿಸಲು ನೆರವಾದರು.

ಚಾಲಕನನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಿ ಬಳಿಕ ಐಸೋಲೇಷನ್ ವಾರ್ಡ್​ನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತದೆ. ಸದ್ಯ ಚಾಲಕನ ಗಂಟಲ ದ್ರವದ ಮಾದರಿಯನ್ನು ಪಡೆದುಕೊಂಡು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.