ಭಟ್ಕಳ: ಮನೆಯ ಹಂಚು ಕಿತ್ತುಹಾಕಿ ಮನೆಯಲ್ಲಿದ್ದ ಚಿನ್ನಾಭರಣ ಹಾಗೂ ನಗದು ದೋಚಿ ಪಾರಾರಿಯಾದ ಘಟನೆ ತಾಲೂಕಿನ ಗೊರಟೆಯಲ್ಲಿ ನಡೆದಿದೆ.
ರಾಮಕೃಷ್ಣ ಖಾರ್ವಿ ಎಂಬುವವರ ಮನೆಯಲ್ಲಿ ಕಳತನ ನಡೆದಿದೆ. ಕುಟುಂಬಸ್ಥರು ಪಕ್ಕದ ಊರಿನ ಬಂಧುಗಳ ಮನೆಗೆ ಹೋಗಿದ್ದರು. ಮನೆಯಲ್ಲಿ ಯಾರೂ ಇಲ್ಲದನ್ನು ಗಮನಿಸಿದ ಖದೀಮರು, ಹಂಚು ತೆಗೆದು ಒಳ ನುಗ್ಗಿ ಕಪಾಟು ಮುರಿದು ಚಿನ್ನಾಭರಣ, ಎಟಿಎಂ, 3 ಎಲ್ಐಸಿ ಬಾಂಡ್, ಪಾನ್ಕಾರ್ಡ್ ಹಾಗೂ ನಗದು ದೋಚಿ ಪರಾರಿಯಾಗಿದ್ದಾರೆ.
ಕುಟುಂಬಸ್ಥರು ಊರಿಂದ ಮರಳಿ ಮನೆಗೆ ಬಂದಾಗ ಕಳ್ಳತನ ನಡೆದದ್ದು ಗಮನಕ್ಕೆ ಬಂದಿದೆ. ಕೂಡಲೇ ಗ್ರಾಮೀಣ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.