ಭಟ್ಕಳ: ಹೋಮ್ ಗಾರ್ಡ್ ತನ್ನ ಹೆಂಡತಿಯ ಮೇಲೆ ಹಲ್ಲೆ ನಡೆಸಿದ್ದಲ್ಲದೇ, ತಡೆಯಲು ಬಂದ ಅತ್ತೆ ಹಾಗೂ ಅತ್ತೆಯ ತಮ್ಮನ ಮೇಲೂ ಹಲ್ಲೆ ಮಾಡಿದ ಘಟನೆ ನಡೆದಿದೆ.
ತಾಲೂಕಿನ ನಗರ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಾರುಕೇರಿಯ ಕೃಷ್ಣ ಹುವೈಯ್ಯ ಗೊಂಡ ಹಲ್ಲೆ ಮಾಡಿದ ಹೋಮ್ ಗಾರ್ಡ್.
ಕೃಷ್ಣ ಕಳೆದ 7 ವರ್ಷದಿಂದ ನಿತ್ಯ ಕುಡಿದು ಬಂದು ಪತ್ನಿಗೆ ಕಿರುಕುಳ ನೀಡುತ್ತಿದ್ದಾನೆ. ಈ ಬಗ್ಗೆ ಮಹಿಳೆ ತನ್ನ ತಾಯಿಗೆ ಕರೆ ಮಾಡಿ ತಿಳಿಸಿದ್ದರು. ತಕ್ಷಣ ಮಹಿಳೆಯ ತಾಯಿ ನಾಗಮ್ಮ, ತನ್ನ ತಮ್ಮ ವೆಂಕಟರಮಣ ಜೊತೆ ಮಾರುಕೇರಿಗೆ ಬಂದಿದ್ರು. ಈ ವೇಳೆ ಕೂಡ ಪತ್ನಿ ಮೇಲೆ ಕೃಷ್ಣ ಹಲ್ಲೆ ಮಾಡುತ್ತಿದ್ದ. ಆಗ ತನ್ನ ಮಗಳನ್ನು ರಕ್ಷಿಸಲು ಬಂದ ತಾಯಿ, ಹಾಗೂ ಅವರ ತಮ್ಮನಿಗೆ ಚಾಕುವಿನಿಂದ ಇರಿದು ಹಲ್ಲೆ ಮಾಡಿದ್ದಾನೆ.
ಈ ವೇಳೆ ವೆಂಕಟರಮಣನ ಕೈ ಭಾಗಕ್ಕೆ ಗಂಭೀರ ಗಾಯವಾಗಿದ್ದು. ನಾಗಮ್ಮ ಅವರ ಕೈಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ತಕ್ಷಣ ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಕುಂದಾಪುರ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ.
ವಿಷಯ ತಿಳಿದು ಸ್ಥಳಕ್ಕೆ ಗ್ರಾಮೀಣ ಠಾಣೆ ಪಿ.ಎಸ್.ಐ ಓಂಕಾರಪ್ಪ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಈ ಕುರಿತು ಗ್ರಾಮೀಣ ಠಾಣೆಯಲ್ಲಿ ಆರೋಪಿಯ
ಅತ್ತೆ ನಾಗಮ್ಮ ಪ್ರಕರಣ ದಾಖಲಿಸಿದ್ದಾರೆ.