ಶಿರಸಿ : ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ವತಿಯಿಂದ ರಚಿಸಲಾಗಿರುವ ಪ್ರವಾಹ ಪೀಡಿತ ಪರಿಹಾರ ಕಾರ್ಯ ಅಧ್ಯಯನ ಸಮಿತಿಯ ಸದಸ್ಯರು ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿಗೆ ಭೇಟಿ ನೀಡಿ ಚಿಗಳ್ಳಿ ಡ್ಯಾಂ ಒಡೆದು ಕೃಷಿ ಭೂಮಿಗಳಿಗಾದ ಹಾನಿಯನ್ನು ವೀಕ್ಷಿಸಿದರು.
ಕಳೆದೆರಡು ದಿನಗಳ ಹಿಂದೆ ಚಿಗಳ್ಳಿ ಡ್ಯಾಂ ಒಡೆದು ಅಪಾರ ಪ್ರಮಾಣದಲ್ಲಿ ಜಮೀನುಗಳಿಗೆ ನೀರು ನುಗ್ಗಿ ಅಧಿಕ ಹಾನಿ ಸಂಭವಿಸಿತ್ತು. ಈ ಸಂಬಂಧ ಮಾಜಿ ಸಚಿವ, ಹಿರಿಯ ನಾಯಕ ಎಚ್.ಕೆ.ಪಾಟೀಲ್ ನೇತೃತ್ವದ ಕಾಂಗ್ರೆಸ್ ಸಮಿತಿಯ ಸದಸ್ಯರು ಸ್ಥಳಕ್ಕೆ ಭೇಟಿ ನೀಡಿ ರೈತರ ಕಷ್ಟವನ್ನು ಆಲಿಸಿದರು. ಮಾಜಿ ಸಂಸದ ಪ್ರೊ.ಸನದಿ ಪಾಟೀಲರಿಗೆ ಸಾಥ್ ನೀಡಿದರು.
ಹಾವೇರಿಯ ಶಿಗ್ಗಾವಿನಲ್ಲಿಯೂ ಪ್ರವಾಹ ಪರಿಸ್ಥಿತಿ ಅವಲೋಕಿಸಿದ ಸಮಿತಿಯು ಉತ್ತರ ಕನ್ನಡ ಜಿಲ್ಲೆಗೆ ಮುಖ್ಯಮಂತ್ರಿಗಳು ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿ ಪರಿಹಾರ ಒದಗಿಸುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.