ಶಿರಸಿ(ಉತ್ತರ ಕನ್ನಡ): ದೇವನಳ್ಳಿಯಲ್ಲಿ ನಡೆದ ಹಿಂದೂ ಸಮಾವೇಶದಲ್ಲಿ ಶಿರಸಿಯ ಸ್ವರ್ಣವಲ್ಲಿ ಮಹಾಸಂಸ್ಥಾನದ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ನಮ್ಮ ಸಮಾಜದಲ್ಲಿ ಹಿಂದೂಗಳಿಗೊಂದು ಬೇರೆ ಸಮಾಜಕ್ಕೊಂದು ವಿವಾಹದ ಕಾನೂನು ಇದ್ದು, ಕಾನೂನಿನಲ್ಲಿ ತಾರತಮ್ಯವಿದೆ. ಬೇರೆ ಸಮಾಜಕ್ಕೆ ಬೇರೆ ದೇಶದ ಆಶ್ರಯ ಇದೆ. ಹಿಂದೂಗಳಿಗೆ ಹಿಂದೂಸ್ಥಾನ ಒಂದೇ ಗತಿ. ಹೀಗಾಗಿ ಹಿಂದೂಸ್ತಾನದಲ್ಲಿ ನಾವು ಅಲ್ಪಸಂಖ್ಯಾಗರಾಗಬಾರದು ಎಂದು ಹಿಂದೂ ಸಮಾಜಕ್ಕೆ ಜಾಗೃತಿ ಸಂದೇಶ ನೀಡಿದರು.
ನಂತರ ಮಾತನಾಡಿದ ಅವರು ಹಿಂದೂಗಳು ಮೂರು ತಪ್ಪುಗಳನ್ನು ಮಾಡುತ್ತಿದ್ದಾರೆ. ಮಕ್ಕಳಿಗೆ ತಡವಾಗಿ ವಿವಾಹ ಮಾಡುತ್ತಿರುವುದು ಸಾಕಷ್ಟು ಸಮಸ್ಯೆಗೆ ಕಾರಣವಾಗಿದೆ ಎಂದರು. ಬೇರೆ ಸಮಾಜದಲ್ಲಿ 15 ವರ್ಷಕ್ಕೆ ವಿವಾಹ ಮಾಡಿ ಹಮ್ಮ್ ದೋ ಹಮಾರೆ ದಸ್ ಎನ್ನುತ್ತಾರೆ. ಆದರೇ ಹಿಂದೂಗಳಲ್ಲಿ 30 ವರ್ಷವಾದರೂ ವಿವಾಹ ಮಾಡುತ್ತಿಲ್ಲ. ನಾವು ಹಮ್ ದೋ ಹಮಾರೆ ಏಕ್ ಬಸ್ ಎನ್ನುತ್ತೇವೆ. ಹಿಂದೂ ಪರಿವಾರ ಅಲ್ಪ ಸಂತತಿ, ಅತೀ ನಿಯಂತ್ರಣ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಮಕ್ಕಳನ್ನು ಪಡೆದ ಹಿಂದೂಸ್ಥಾನದಲ್ಲಿ ಹಿಂದುಗಳು ಅಲ್ಪಸಂಖ್ಯಾತರಾಗುವುದನ್ನು ತಪ್ಪಿಸಬೇಕು ಎಂದು ಸ್ವಾಮೀಜಿ ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ದಿಕ್ಸೂಚಿ ಭಾಷಣ ಮಾಡಿದ ಚಿಂತಕ ಚಕ್ರವರ್ತಿ ಸೂಲಿಬೆಲೆ ಅವರು ಹಿಂದೂ ಎನ್ನುವುದು ಧರ್ಮ, ಉಳಿದಂತಹದ್ದು ರಿಲೀಜಿಯನ್ ಗಳು ಎಂದು ಹೇಳಿದರು. ಇಂಗ್ಲಿಷ್ ನ ರಿಲೀಜಿಯನ್ ಅನ್ನು ಅನುವಾದ ಮಾಡುವಾಗ ನಾವು ಎಡವಟ್ಟು ಮಾಡಿಕೊಂಡಿದ್ದೇವೆ, ಯಾವುದನ್ನು ಧರಿಸಿಕೊಂಡು ಹೋಗುತ್ತೇವೆಯೋ ಅದೇ ಧರ್ಮ ಎಂದರು. ಕೆಲವು ಹಿಂದೂಗಳು ಕ್ರಿಶ್ಚಿಯನ್ ಧರ್ಮಕ್ಕೆ ಕನ್ವರ್ಟ ಆಗಿ ಚರ್ಚಿಗೆ ಹೋಗುತ್ತಾರೆ. ಆದರೇ ಚರ್ಚಿನಲ್ಲಿ ಇವರನ್ನು ಆಕರ್ಶಿಸಲು ಗರುಡುಗಂಬ ಹಾಕಿ ಏಸುಗೆ ಆರತಿ ಮಾಡುತ್ತಾರೆ, ಹರಿಹರದ ಚರ್ಚನಲ್ಲಿ ರಥೋತ್ಸವ ನೆರವೇರಿಸುತ್ತಾರೆ, ಇದೆಲ್ಲವೂ ಹಿಂದೂ ಧರ್ಮದಿಂದಲೇ ಕಾಪಿ ಮಾಡಿರುವುದು ಎಂದು ಹೇಳಿದರು.
ಹಿಂದೂ ಧರ್ಮ ಎಂದರೇ ಬಿಟ್ಟರೂ ಬಿಡಲು ಸಾಧ್ಯವಾಗದಂತದ್ದು, ಹಿಂದೂ ಧರ್ಮದಂತ ಶ್ರೇಷ್ಠ ಧರ್ಮವನ್ನು ಬಿಟ್ಟುಹೋದವರು ಮತ್ತೊಂದು ಧರ್ಮದಲ್ಲಿ ನೆಮ್ಮದಿಯಿಂದ ಇರಲು ಸಾಧ್ಯವಿಲ್ಲ. ಇತರೆ ಧರ್ಮದಲ್ಲಿ ನಂಬಿಕೆಗಾಗಿ ಒಂದು ಪುಸ್ತಕ ಬೇಕು, ಒಬ್ಬನೇ ದೇವರು ಬೇಕು, ಆ ದೇವರ ಬಗ್ಗೆ ಹೇಳಲು ಒಬ್ಬ ವ್ಯಕ್ತಿ ಬೇಕು. ಆದರೇ ಹಿಂದೂ ಧರ್ಮದಲ್ಲಿ ಹಾಗಿಲ್ಲ, ಹಿಂದೂ ಧರ್ಮ ಎನ್ನುವುದು ಮೂಲ ವಿಜ್ಞಾನದಂತೆ ಇದರ ಬಗ್ಗೆ ಅಧ್ಯಯನ ಮಾಡುವುದು ಇಡೀ ಲೈಬ್ರರಿಯನ್ನೇ ಓದಿದಂತೆ ಎಂದರು. ಹಿಂದೂ ಧರ್ಮವನ್ನು ಅಶ್ಲೀಲ ಎಂದು ಕರೆದಂತೆ ಉಳಿದ ಧರ್ಮವನ್ನು ಅಶ್ಲೀಲ ಎಂದು ಕರೆದಿದ್ದರೆ ಆತ ಬದುಕುಳಿಯುವ ಸಾಧ್ಯತೆ ಇರಲಿಲ್ಲ. ಅವರ ತಲೆ ಕಡಿಯುವ ವರೆಗೂ ಬಿಡುತ್ತಿರಲಿಲ್ಲ. ಆದರೇ ಹಿಂದೂ ಧರ್ಮಕ್ಕೆ ಬಂದೂಕು ಬೇಕಿಲ್ಲ, ಕತ್ತಿ ಬೇಕಿಲ್ಲ, ಶಾಸ್ತ್ರದ ಗ್ರಂಥಗಳು ಸಾಕು ಎಂದು ಟಾಂಗ್ ಕೊಟ್ಟರು.
ಹಿಂದೂ ಸಮಾವೇಶದಲ್ಲಿ ನಾಮಧಾರಿ ಗುರು ಮಠದ ಶ್ರೀ. ಕಲ್ಯಾಣ ಸ್ವಾಮೀಜಿ, ಶಿರಸಿ ಬಣ್ಣದ ಮಠದ ಶ್ರೀ ಶಿವಲಿಂಗ ಮಹಾಸ್ವಾಮಿಗಳು, ಮಂಜುಗುಣಿ ಕ್ಷೇತ್ರದ ಅರ್ಚಕರಾದ ಶ್ರೀನಿವಾಸ ಭಟ್ಟರು ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ದೇವನಳ್ಳಿ, ಮಂಜುಗುಣಿ, ಬಂಡಲ, ಹೆಗಡೆಕಟ್ಟಾ, ಹುಣಸೇಕೊಪ್ಪ, ಸಾಲ್ಕಣಿ ವ್ಯಾಪ್ತಿಯ ಹಿಂದೂ ಸಮಾಜದವರು ಬೈಕ್ ರ್ಯಾಲಿ ಮತ್ತು ಶೋಭಾ ಯಾತ್ರೆಯನ್ನು ನೆರವೇರಿಸಿದರು.
ಇದನ್ನೂ ಓದಿ: ಪೌರತ್ವ ಕಾಯ್ದೆಯ ಸತ್ಯಾಸತ್ಯೆಯನ್ನು ಅರಿಯಬೇಕು: ವಿಶ್ವ ಹಿಂದೂ ಪರಿಷತ್ ಮುಖಂಡ ಗೋಪಾಲ್