ETV Bharat / state

ಕಾರವಾರದ 3 ಕಡೆ ತುರ್ತು ಭೂ ಸ್ಪರ್ಶಕ್ಕೆ ಯತ್ನಿಸಿದ ಹೆಲಿಕಾಪ್ಟರ್.. ಆತಂಕಕ್ಕೊಳಗಾದ ಜನ - ಭಾರತೀಯ ಕೋಸ್ಟ್ ಗಾರ್ಡ್​ನ ಹೆಲಿಕಾಪ್ಟರ್

ಭಾರತೀಯ ಕೋಸ್ಟ್ ಗಾರ್ಡ್​ನ ಅಡ್ವಾನ್ಸ್ಡ್ ಲೈಟ್ ಹೆಲಿಕಾಪ್ಟರ್ ಕಾರವಾರ ನಗರದ ಮಾಲಾದೇವಿ ಮೈದಾನ, ಡಿಸಿ ಕಚೇರಿ ಎದುರಿಗಿನ ಫ್ಲೈ ಓವರ್ ಹಾಗೂ ಟ್ಯಾಗೋರ್ ಕಡಲತೀರದಲ್ಲಿ ಇಳಿಯಲು ಪ್ರಯತ್ನಿಸಿ ಪುನಃ ತೆರಳಿದ್ದು, ಇದರಿಂದ ಸ್ಥಳೀಯರಲ್ಲಿ ಕೆಲಕಾಲ ಆತಂಕ ಮನೆಮಾಡಿತ್ತು.

helicopter
ಹೆಲಿಕಾಪ್ಟರ್
author img

By

Published : Oct 22, 2022, 3:05 PM IST

Updated : Oct 22, 2022, 3:33 PM IST

ಕಾರವಾರ: ಭಾರತೀಯ ಕೋಸ್ಟ್ ಗಾರ್ಡ್​ನ ಹೆಲಿಕಾಪ್ಟರ್ ಒಂದು ನಗರದ ಮೂರು ಕಡೆ ತುರ್ತು ಭೂಸ್ಪರ್ಶಕ್ಕೆ ಯತ್ನಿಸಿದ್ದು ಸ್ಥಳೀಯರಲ್ಲಿ ಆತಂಕ ಸೃಷ್ಟಿಯಾದ ಘಟನೆ ನಡೆದಿದೆ.

ಕಾರವಾರ ನಗರದ ಮಾಲಾದೇವಿ ಮೈದಾನ, ಜಿಲ್ಲಾಧಿಕಾರಿ ಕಚೇರಿ ಎದುರಿಗಿನ ಫ್ಲೈ ಓವರ್ ಮೇಲೆ ಹಾಗೂ ಟ್ಯಾಗೋರ್ ಕಡಲತೀರದಲ್ಲಿ ಭಾರತೀಯ ಕೋಸ್ಟ್ ಗಾರ್ಡ್​ನ ಅಡ್ವಾನ್ಸ್ಡ್ ಲೈಟ್ ಹೆಲಿಕಾಪ್ಟರ್ ಇಳಿಯಲು ಪ್ರಯತ್ನಿಸಿ ಪುನಃ ತೆರಳಿದೆ.

ತುರ್ತು ಭೂ ಸ್ಪರ್ಶಕ್ಕೆ ಯತ್ನಿಸಿದ ಹೆಲಿಕಾಪ್ಟರ್

ಹೆಲಿಕಾಪ್ಟರ್ ತೀರಾ ಕೆಳಮಟ್ಟಕ್ಕೆ ಬಂದಿದ್ದನ್ನು ಕಂಡು ಸ್ಥಳೀಯರು ಒಮ್ಮೆ ಆತಂಕಕ್ಕೊಳಗಾಗಿದ್ದರು. ಏನು ನಡೆಯುತ್ತಿದೆ ಎನ್ನುವುದು ತಿಳಿಯದೇ ಗಾಬರಿಯಾದರು. ರಸ್ತೆ, ಕಡಲತೀರದಲ್ಲಿ ನಿಂತವರೆಲ್ಲ ಮೊಬೈಲ್​ನಲ್ಲಿ ಫೋಟೋ, ವಿಡಿಯೋ ಮಾಡಿಕೊಂಡರು.

ಇದನ್ನೂ ಓದಿ: ಸಿಎಂ ಧಾಮಿ ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ಆವರಿಸಿದ ಧೂಳು: ಆತಂಕಕ್ಕೊಳಗಾದ ಜನತೆ

ಈ‌ ಬಗ್ಗೆ ಕೋಸ್ಟ್ ಗಾರ್ಡ್ ಅಧಿಕಾರಿಗಳನ್ನು ಸಂಪರ್ಕಿಸಿದಾಗ, ಇದೊಂದು ಟ್ರೈಯಲ್ ಅಷ್ಟೇ. ತುರ್ತು ಸಂದರ್ಭದಲ್ಲಿ ಹೆಲಿಕಾಪ್ಟರ್ ಅನ್ನು ಎಲ್ಲೆಲ್ಲಿ ಸುರಕ್ಷಿತವಾಗಿ ಇಳಿಸಬಹುದು ಎಂಬ ಬಗ್ಗೆ ಪರೀಕ್ಷಾರ್ಥ ಪ್ರಯೋಗ ನಡೆಸುತ್ತಿದ್ದೇವೆ. ಅಂಕೋಲಾದ ಹಟ್ಟಿಕೇರಿ, ಕಾರವಾರದ ನಗರ ಭಾಗದಲ್ಲಿ ಪರೀಕ್ಷೆ ನಡೆಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.

Last Updated : Oct 22, 2022, 3:33 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.