ETV Bharat / state

ಉತ್ತರ ಕನ್ನಡದಲ್ಲಿ ಮಳೆ ಅಬ್ಬರ... ನದಿ ತೀರದ ಪ್ರದೇಶಗಳು ಮುಳುಗಡೆ, ಜನಜೀವನ ಅಸ್ತವ್ಯಸ್ತ - kannadanews

ಉತ್ತರ ಕನ್ನಡ ಜಿಲ್ಲೆಯಾದ್ಯಂತ ವರುಣನ ಆರ್ಭಟ ಜೋರಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ನದಿ ತೀರದ ಪ್ರದೇಶಗಳು ಮುಳುಗಡೆಯಾಗಿವೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ಅಬ್ಬರ
author img

By

Published : Aug 5, 2019, 8:47 PM IST

ಕಾರವಾರ/ಶಿರಸಿ: ಉತ್ತರಕನ್ನಡ ಜಿಲ್ಲೆಯಲ್ಲೂ ವರುಣನ ಆರ್ಭಟ. ಜಲಾಶಯಗಳ ಬೋರ್ಗರೆತ.. ಕದ್ರಾ ಜಲಾಶಯದಿಂದ ಇಂದು ಕೂಡ ನೀರನ್ನು ಹೊರಬಿಟ್ಟಿರುವುದರಿಂದ ಕಾಳಿ ನದಿ ಹರಿವಿನಂಚಿನ ಕೆಲ ಪ್ರದೇಶಗಳು ಮುಳುಗಡೆಯಾಗಿ, ಜನಜೀವನ ಅಸ್ತವ್ಯಸ್ತವಾಗಿದೆ.

ಜಿಲ್ಲೆಯ ಕರಾವಳಿ ಹಾಗೂ ಮಲೆನಾಡಿನಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದೆ. ಕಾರವಾರ, ಯಲ್ಲಾಪುರ, ಜೊಯಿಡಾ ಭಾಗದಲ್ಲಿ ಮಳೆ ಮುಂದುವರಿದ ಪರಿಣಾಮ ಕಾಳಿ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದ್ದು, ಕದ್ರಾ ಜಲಾಶಯ ಭರ್ತಿಯಾಗಿದೆ. ಇದರಿಂದ ಭಾನುವಾರ 5 ಗೇಟ್ ಗಳ ಮೂಲಕ 10.5 ಸಾವಿರ ಕ್ಯೂಸೆಕ್ ನೀರು ಹೊರಬಿಡಲಾಗಿತ್ತು. ಆದರೂ ನೀರಿನ ಹರಿವು ಹೆಚ್ಚಾದ ಕಾರಣ ಇಂದು ಮತ್ತೆ 10 ಗೇಟ್​​ಗಳ ಮೂಲಕ 43 ಸಾವಿರ ಕ್ಯೂಸೆಕ್ ನೀರನ್ನು ಹರಿಬಿಡಲಾಗಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ಅಬ್ಬರ

ಇದರಿಂದಾಗಿ ಕಾಳಿನದಿ ಪ್ರದೇಶವ್ಯಾಪ್ತಿಯ ಕ್ರದಾ, ಮಲ್ಲಾಪುರ ಭಾಗಗಳಲ್ಲಿನ ಜನರು ಪ್ರವಾಹಕ್ಕೆ ಸಿಲುಕಿದ್ದಾರೆ. ಬಹುತೇಕ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಅಲ್ಲದೆ ಮಲ್ಲಾಪುರ ಭಾಗದಲ್ಲಿ ಮನೆಗಳಿಗೆ ನೀರು ನುಗ್ಗಿದ್ದು, ಜನರು ಆತಂಕದಲ್ಲಿದ್ದಾರೆ.

ನಿರೀಕ್ಷೆಗೂ ಮೀರಿ ನೀರು ಹರಿದು ಬರುತ್ತಿರುವುದರಿಂದ ಕದ್ರಾ ಗ್ರಾಮದ 7 ಕುಟುಂಬಗಳ ಒಟ್ಟು 23 ಜನರನ್ನು ಗಂಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಇನ್ನೂ 2 ದಿನ ಮಳೆ ಮುಂದುವರಿಯುವುದಾಗಿ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ನಾಳೆ ಕೂಡ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಎಂದು ಶಿರಸಿ ಉಪವಿಭಾಗಾಧಿಕಾರಿ ಈಶ್ವರ್ ಉಳ್ಳಾಗಡ್ಡಿ ತಿಳಿಸಿದ್ದಾರೆ.

ಎರಡು ದಿನಗಳಿಂದ ಸುರಿಯುತ್ತಿರುವ ಮಳೆಗೆ ಶಿರಸಿ ತಾಲೂಕಿನಾದ್ಯಂತ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ನೂರಾರು ಎಕರೆ ಅಡಿಕೆ ತೋಟಗಳಿಗೆ ನೀರು ನುಗ್ಗಿ ಕೃಷಿ ಕ್ಷೇತ್ರಕ್ಕೆ ಹಾನಿಯಾಗಿದೆ. ತಣ್ಣೀರ ಹೊಳೆ, ದೇವದಕೆರೆ, ಸಿದ್ದಾಪುರದ ಸರ್ಕುಳಿ ಹೊಳೆ ಸೇರಿದಂತೆ ಹತ್ತಾರು ಸಣ್ಣ ಪುಟ್ಟ ಸೇತುವೆಗಳು ಜಲಾವೃತವಾಗಿವೆ. ಇದಲ್ಲದೇ ಬೇಡ್ತಿ, ಅಘನಾಶಿನಿ, ವರದಾ, ಶಾಲ್ಮಲಾ ನದಿಗಳು ತುಂಬಿ ಹರಿಯುತ್ತಿದ್ದು, ಅಕ್ಕ ಪಕ್ಕದ ಗ್ರಾಮಗಳಿಗೆ ನೆರೆಯ ಭೀತಿ ಎದುರಾಗಿದೆ.

ಸಿದ್ದಾಪುರ ತಾಲೂಕಿನಲ್ಲಿ 125.02 ಮೀ.ಮೀ ಸೇರಿ ಇಲ್ಲಿಯವರೆಗೆ 1904.4 ಮೀ.ಮೀ., ಮುಂಡಗೋಡಿನಲ್ಲಿ 30.8 ಮಿ.ಮೀ. ಹಾಗೂ 643.3 ಮಿ.ಮೀ. ಮತ್ತು ಯಲ್ಲಾಪುರ ತಾಲೂಕಿನಲ್ಲಿ 108.4 ಮಿ.ಮೀ., ಹಾಗೂ ಇಲ್ಲಿಯವರೆಗೆ 1628.4 ಮಿ.ಮೀ. ಮಳೆಯಾಗಿದೆ.

Intro:Body:ಉತ್ತರಕನ್ನಡ ಜಿಲ್ಲೆಯಲ್ಲಿ ಮಳೆ ಅಬ್ಬರ..

ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಮಳೆ ಅಬ್ಬರ ಮುಂದುವರಿದಿದೆ. ಕದ್ರಾ ಜಲಾಶಯದ ನೀರನ್ನು ಇಂದು ಕೂಡ ಹೊರಬಿಟ್ಟ ಕಾರಣ  ಕಾಳಿನದಿ ಹರಿವಿನಂಚಿನ ಕೆಲ ಪ್ರದೇಶಗಳು ಮುಳುಗಡೆಯಾಗಿ, ಜನಜೀವನ ಅಸ್ತವ್ಯಸ್ಥಗೊಂಡಿದೆ.
ಜಿಲ್ಲೆಯ ಕರಾವಳಿ ಹಾಗೂ ಮಲೆನಾಡಿನಲ್ಲಿ ನಿರಂತರವಾಗಿ ಮಳೆಯಾಗುತ್ತಿದೆ. ಕಾರವಾರ, ಯಲ್ಲಾಪುರ, ಜೊಯೀಡಾ ಭಾಗದಲ್ಲಿ ಮಳೆ ಮುಂದುವರಿದ ಕಾರಣ ಕಾಳಿ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದ್ದು, ಕದ್ರಾ ಜಲಾಶಯ ಭರ್ತಿಯಾಗಿದೆ. ಇದರಿಂದ ಭಾನುವಾರ ೫ ಗೇಟ್ ಗಳ ಮೂಲಕ ೧೦.೫ ಸಾವಿರ ಕ್ಯೂಸೆಕ್ ನೀರು ಹೊರಬಿಡಲಾಗಿತ್ತಾದರೂ ನೀರಿನ ಹರಿವು ಹೆಚ್ಚಾದ ಕಾರಣ ಇಂದು ಮತ್ತೆ  ೧೦ ಗೇಟ್ ಗಳ ಮೂಲಕ ೪೩ ಸಾವಿರ ಕ್ಯೂಸೆಕ್ ನೀರು ಹೊರಬಿಡಲಾಗಿದೆ.
ಇದರಿಂದಾಗಿ ಕಾಳಿನದಿ ಪ್ರದೇಶವ್ಯಾಪ್ತಿಯ ಕ್ರದಾ, ಮಲ್ಲಾಪುರ ಭಾಗಗಳಲ್ಲಿನ ಜನರು ಪ್ರವಾಹಕ್ಕೆ ಸಿಲುಕಿದ್ದು, ಬಹುತೇಕ ತಗ್ಗು ಪ್ರದೇಶಗಳು ಜಲಾವೃತಗೊಂಡಿದೆ. ಅಲ್ಲದೆ ಮಲ್ಲಾಪುರ ಭಾಗಗಳಿಗೆ ಮನೆಗಳಿಗೆ ನೀರು ನುಗ್ಗಿದ್ದು, ಜನಜೀವನ ಅಸ್ತವ್ಯಸ್ಥಗೊಂಡಿದೆ.
ನೀರು ಬಿಡುವ ಮೊದಲೇ ಮುನ್ಸೂಚನೆ ನೀಡಿರುವ ಕಾರಣ ಬಹುತೇಕರು ತಮ್ಮ ಜನ ಜಾನುವಾರುಗಳೊಂದಿಗೆ ಸುರಕ್ಷಿತ ಸ್ಥಳಗಳಿಗೆ ತೆರಳಿದ್ದು, ನೀರಿಕ್ಷೆಗೂ ಮೀರಿ ನೀರು ಹರುದುಬರುತ್ತಿರುವ ಕಾರಣ ಕದ್ರಾ ಗ್ರಾಮದ 7 ಕುಟುಂಬಗಳ ಒಟ್ಟು 23 ಜನರನ್ನು ಕನ್ನಡ ಹಿರಿಯ ಪ್ರಾಥಮಿಕ  ಶಾಲೆ ಕದ್ರಾದಲ್ಲಿ ತೆರೆದಿರುವ ಗಂಜೀ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಗಿದೆ.
ಇದಲ್ಲದೆ ಕರಾವಳಿಯಲ್ಲಿ ಮಳೆ ಎಡಬಿಡದೆ ಸುರಿಯುತ್ತಿರುವ ಕಾರಣ ಅಂಕೋಲಾ ಯಲ್ಲಾಪುರ ಹಾಗೂ ಅಂಕೋಲಾ ಶಿರಸಿ ಹೆದ್ದಾರಿಯಲ್ಲಿ ಗುಡ್ಡಕುಸಿತವಾಗಿ ರಸ್ತೆ ಮೇಲೆ ನೀರು ತುಂಬಿಕೊಂಡಿದೆ. ಅಲ್ಲದೆ ಗುಡ್ಡ ಭಾಗದಿಂದ ಯತ್ತೇಚ್ಚವಾಗಿ ನೀರು ಹರಿದುಬರುತ್ತಿರುವ ಕಾರಣ ಸಂಚಾರ ಅಸ್ತವ್ಯಸ್ಥಗೊಂಡಿದೆ.
ಇನ್ನು ಅಂಕೋಲಾದಲ್ಲಿಯೂ ಮಳೆ ಮುಂದುವರಿದಿದ್ದು, ಮಳೆ ವರದಿಗೆ ತೆರಳಿ ಹಿಚ್ಕಡ ದ್ವೀಪದಲ್ಲಿ ಸಿಲುಕ್ಕಿದ್ದ ನಾಲ್ವರು ಪತ್ರಕರ್ತರನ್ನು ಪತ್ರಕರ್ತರ ರಕ್ಷಣೆ ಮಾಡಲಾಗಿದೆ. ಇನ್ನು ಮಲೆನಾಡಿನಲ್ಲಿಯೂ ಗಾಳಿ ಸಹಿತ ಮಳೆ ಮುಂದುವರುದಿದ್ದು, ಜನಜೀವನ ಅಸ್ತವ್ಯಸ್ಥಗೊಂಡಿದೆ. Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.