ETV Bharat / state

3ನೇ ಅಲೆ ಆತಂಕ, ಗಡಿಯಲ್ಲಿ ಬಿಗಿ ಕ್ರಮ: ನಿಶ್ಚಿತಾರ್ಥಕ್ಕೆ ಗೋವಾದಿಂದ ಬಂದು ವರನ ಕುಟುಂಬಸ್ಥರ ಪರದಾಟ - ನಿಶ್ಚಿತಾರ್ಥಕ್ಕೆ ಗೋವಾದಿಂದ ಬಂದು ವರನ ಕುಟುಂಬಸ್ಥರ ಪರದಾಟ

ಕೊರೊನಾ 3ನೇ ಅಲೆ ತಡೆಯಲು ಗಡಿಯಲ್ಲಿ ಕಟ್ಟೆಚ್ಚರ ವಹಿಸಿರುವ ಹಿನ್ನೆಲೆ ರಾಜ್ಯಕ್ಕೆ ಆಗಮಿಸುವವರಿಗೆ ಆರ್​ಟಿಪಿಸಿಆರ್​ ಪ್ರಮಾಣ ಪತ್ರ ಕಡ್ಡಾಯಗೊಳಿಸಲಾಗಿದೆ. ಹೀಗಾಗಿ ನಿಶ್ಚಿತಾರ್ಥ ಕಾರ್ಯಕ್ಕಾಗಿ ಇಂದು ಗೋವಾದಿಂದ ಬರಬೇಕಿದ್ದ ವರನ ಕುಟುಂಬಸ್ಥರು ಗಡಿಯಲ್ಲಿ ಸಿಲುಕಿ ಸಮಸ್ಯೆ ಎದುರಿಸಿದ್ದಾರೆ.

groom-family-members-who-come-from-goa-to-an-engagement-got-stuck-in-border
ನಿಶ್ವಿತಾರ್ಥಕ್ಕೆಂದು ಗೋವಾದಿಂದ ಬಂದು ವರನ ಕುಟುಂಬಸ್ಥರ ಪರದಾಟ
author img

By

Published : Aug 5, 2021, 6:58 PM IST

ಕಾರವಾರ (ಉ.ಕ): ಕೊರೊನಾ 3ನೇ ಅಲೆ ಆತಂಕದ ಹಿನ್ನೆಲೆ ಕಟ್ಟುನಿಟ್ಟಿನ ಕ್ರಮ ಜರುಗಿಸಿದ್ದು, ಇದರಿಂದಾಗಿ ನಿಶ್ಚಿತಾರ್ಥಕ್ಕೆ ಬಂದವರು ಗಡಿ ದಾಟಲಾಗದೆ ಪರದಾಡಿದ ಘಟನೆ ಕರ್ನಾಟಕ-ಗೋವಾ ಗಡಿಭಾಗವಾದ ಮಾಜಾಳಿಯಲ್ಲಿ ನಡೆದಿದೆ.

ಕಾರವಾರದ ಯುವತಿಗೆ ಗೋವಾ ಮೂಲದ ಯುವಕನೊಂದಿಗೆ ನಿಶ್ಚಿತಾರ್ಥ ನಡೆಯಬೇಕಾಗಿತ್ತು. ತಾಲೂಕಿನ ಮಾಜಾಳಿ ಗಡಿಯಲ್ಲಿ ಗೋವಾದಿಂದ ನಿಶ್ಚಿತಾರ್ಥಕ್ಕೆಂದು ಕಾರವಾರಕ್ಕೆ ಬರುತ್ತಿದ್ದ ವರನ ಕಡೆಯವರನ್ನ ಮಾಜಾಳಿ ಚೆಕ್​​​​​ಪೋಸ್ಟ್​​ನಲ್ಲಿ ತಡೆಯಲಾಗಿತ್ತು.

ಕೊರೊನಾ ಹಿನ್ನೆಲೆ ಆರ್‌ಟಿಪಿಸಿಆರ್ ಪ್ರಮಾಣಪತ್ರ ಕೇಳಿದ್ದು ಯಾರ ಬಳಿಯೂ ಇರಲಿಲ್ಲ. ಈ ಕಾರಣದಿಂದ ರಾಜ್ಯ ಪ್ರವೇಶಕ್ಕೆ ನಿರಾಕರಿಸಲಾಯಿತು. ಕೊರೊನಾ 3ನೇ ಅಲೆ ಆತಂಕದಿಂದಾಗಿ ಮಹಾರಾಷ್ಟ್ರ ಹಾಗೂ ಕೇರಳದಿಂದ ಆಗಮಿಸುವವರಿಗೆ ಆರ್‌ಟಿಪಿಸಿಆರ್ ಕಡ್ಡಾಯಗೊಳಿಸಲಾಗಿದ್ದು, ಗಡಿಯಲ್ಲಿ ಕಟ್ಟುನಿಟ್ಟಿನ ತಪಾಸಣೆ ಕೈಗೊಳ್ಳಲಾಗುತ್ತಿದೆ.

ಹೀಗಾಗಿ ಗೋವಾ ಭಾಗದಿಂದ ಪ್ರವೇಶಿಸಿದವರು ಕಡ್ಡಾಯವಾಗಿ ಕೋವಿಡ್ ನೆಗೆಟಿವ್ ಪ್ರಮಾಣಪತ್ರ ಹೊಂದಿರಲೇಬೇಕೆಂದು ಜಿಲ್ಲಾಡಳಿತ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. ಆದರೆ ನಿಶ್ಚಿತಾರ್ಥಕ್ಕೆಂದು ಬಸ್ ಮಾಡಿಕೊಂಡು ಕಾರವಾರಕ್ಕೆ ಆಗಮಿಸುತ್ತಿದ್ದ ವರನ ಕುಟುಂಬಸ್ಥರು ಆರ್​ಟಿಪಿಸಿಆರ್ ಪ್ರಮಾಣಪತ್ರ ಇರಲಿಲ್ಲ. ಹಾಗಾಗಿ ಗಡಿಯಲ್ಲಿಯೇ ಎರಡು ಗಂಟೆಗಳ ಕಾಲ ಕಾದು ಕುಳಿತುಕೊಳ್ಳಬೇಕಾಯಿತು.

ಇದಾದ ಬಳಿಕ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿ ಕೇವಲ 8 ಮಂದಿಗಷ್ಟೇ ರಾಜ್ಯದೊಳಗೆ ಬರಲು ಅವಕಾಶ ಮಾಡಿಕೊಡಲಾಯಿತು.

ಓದಿ: ಮಂಗಳೂರಲ್ಲಿ ಮುಳುಗಿದ ಹಡಗಿಗೆ ಮೀನುಗಾರಿಕಾ ಬೋಟ್ ಡಿಕ್ಕಿ: 11 ಮಂದಿ ರಕ್ಷಣೆ, ಓರ್ವ ಕಣ್ಮರೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.