ETV Bharat / state

ಮುಂಡಗೋಡ​ದಲ್ಲಿ ಗ್ರಾ.ಪಂ ಸದಸ್ಯೆ ಕೊಲೆ.. ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಪತಿ - Murder of Grama panchayath member in Mundagodi of Karwar

ಕಾರವಾರದ ಮುಂಡಗೋಡದಲ್ಲಿ ಗ್ರಾಮ ಪಂಚಾಯತ್ ಸದಸ್ಯೆಯ ಹತ್ಯೆ- ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಪತಿ- ಪ್ರಕರಣದ ಸುತ್ತ ಅನುಮಾನದ ಹುತ್ತ

gram-panchayat-member-killed-her-husband-tried-to-commit-suicide-in-karwar
ಮುಂಡಗೋಡಿನಲ್ಲಿ ಗ್ರಾಪಂ ಸದಸ್ಯೆ ಕೊಲೆ : ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಪತಿ!
author img

By

Published : Aug 3, 2022, 12:12 PM IST

ಕಾರವಾರ (ಉತ್ತರಕನ್ನಡ): ಇಲ್ಲಿನ ಮುಂಡಗೋಡ ತಾಲೂಕಿನ ಪಾಳಾ ಗ್ರಾಮ ಪಂಚಾಯತಿನ ಕಾಂಗ್ರೆಸ್ ಬೆಂಬಲಿತ ಸದಸ್ಯೆಯನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ. ಗಂಡನೇ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಆತನೂ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಮೃತ ಮಹಿಳೆಯನ್ನು ಅಕ್ಕಮ್ಮ ಬಸವರಾಜ ಮೇಲಿನಮನಿ ಎಂದು ಗುರುತಿಸಲಾಗಿದೆ.

ಮನೆಯ ಆವರಣದಲ್ಲಿಯೇ ಮಹಿಳೆಯನ್ನು ಕೊಲೆ ಮಾಡಲಾಗಿದೆ. ಈ ಪ್ರಕರಣ ಮಧ್ಯರಾತ್ರಿ ನಡೆದಿರಬಹುದೆಂದು ಶಂಕಿಸಲಾಗಿದೆ. ಘಟನಾ ಸ್ಥಳಕ್ಕೆ ಸಿಪಿಐ ಸಿದ್ದಪ್ಪ ಸಿಮಾನಿ, ಪಿಎಸ್ಐ ಬಸವರಾಜ ಮಬನೂರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮೃತದೇಹದ ಸುತ್ತಲೂ ಕುಂಕುಮ ಹರಡಲಾಗಿದ್ದು, ಮನೆಯ ಒಳಗೆ ಹಾಗೂ ಹೊರಗೆ ಚುನಾವಣಾ ಕರಪತ್ರಗಳನ್ನು ಇಟ್ಟು ಅವುಗಳ ಮೇಲೆ ಹುಲ್ಲು, ಕುಂಕುಮ ಇತ್ಯಾದಿಗಳನ್ನು ಇಡಲಾಗಿದೆ. ವಾಮಾಚಾರಕ್ಕಾಗಿ ಕೊಲೆ ನಡೆದಿದೆಯೋ ಅಥವಾ ಇತರೆ ವಿಷಯಕ್ಕೆ ಕೊಲೆ ನಡೆದಿದೆಯೋ ಎಂಬುದು ಪೊಲೀಸ್ ತನಿಖೆಯಿಂದ ತಿಳಿದುಬರಲಿದೆ.

ಓದಿ : ಭೀಮಾತೀರದ ಮಹಾದೇವ ಭೈರಗೊಂಡ ಮೇಲೆ ಮಾರಣಾಂತಿಕ ಹಲ್ಲೆ ಪ್ರಕರಣ: ಇಬ್ಬರು ಶರಣಾಗತಿ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.