ETV Bharat / state

ಮಾತೃಭಾಷೆ ಕಲಿಕೆಗೆ ಮೊದಲ ಪ್ರಾಶಸ್ತ್ಯ ನೀಡಿ: ವಿಶ್ವೇಶ್ವರ ಹೆಗಡೆ ಕಾಗೇರಿ ಸಲಹೆ

author img

By

Published : Sep 17, 2019, 9:45 PM IST

ಮಾತೃ ಭಾಷೆಗೆ ಕಲಿಕೆಯಲ್ಲಿ ಮೊದಲ ಪ್ರಾಶಸ್ತ್ಯ ನೀಡಿ ಎಂದು 'ಹಿಂದಿ ದಿವಸ್' ಕಾರ್ಯಕ್ರಮದಲ್ಲಿ ಮಾತನಾಡುತ್ತಾ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ರು.

ಹಿಂದಿ ದಿವಸ್ ಕಾರ್ಯಕ್ರಮವನ್ನು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ

ಶಿರಸಿ: ಮಾತೃಭಾಷೆಯನ್ನು ಸರಿಯಾಗಿ ಕಲಿಯುವ ಅವಕಾಶ ಕಲ್ಪಿಸಬೇಕು ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

'ಹಿಂದಿ ದಿವಸ್' ಕಾರ್ಯಕ್ರಮದಲ್ಲಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿದ್ರು.

ಸಿದ್ದಾಪುರದ ರಾಘವೇಂದ್ರ ಮಠದಲ್ಲಿ ನಡೆದ 'ಹಿಂದಿ ದಿವಸ್' ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ದಿನಗಳಲ್ಲಿ ವಿವಾದ ಹುಟ್ಟು ಹಾಕೋಕಂತನೇ ಕೆಲವರು ಕಾಯುತ್ತಿರುತ್ತಾರೆ. ಸಂವಿಧಾನದ ವಿಧಿಗಳಲ್ಲೇ ಹಿಂದಿ ಬಗ್ಗೆ ಉಲ್ಲೇಖವಿದೆ. ಇದನ್ನು ನಾವು ಉಲ್ಲಂಘಿಸಿದ್ರೆ ಸಂವಿಧಾನದ ಅಶಯಗಳನ್ನು ಉಳಿಸೋ ಪ್ರಯತ್ನಕ್ಕೆ ಹಿನ್ನೆಡೆಯಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ರು.

ಇಂದಿನ ದಿನಗಳಲ್ಲಿ ಇಂಗ್ಲಿಷ್ ಭಾಷೆ ಉಳಿದ ಭಾಷೆಗಳನ್ನು ನುಂಗುತ್ತಿದೆ. ಇಂಗ್ಲಿಷ್ ಕಲಿಕೆಯ ಬಗ್ಗೆ ನಮಗೆ ಯಾವುದೇ ಅಭ್ಯಂತರವಿಲ್ಲ. ಆದರೆ ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ತೊಂದರೆಯಾಗಬಾರದು. ಕಲಿಕೆಯಲ್ಲಿ ಪ್ರಥಮ ಪ್ರಾಶಸ್ತ್ಯವನ್ನು ಮಾತೃಭಾಷೆಗೆ ನೀಡಬೇಕು. ನಂತರ ಹಿಂದಿ ಭಾಷೆಗೆ ಮಹತ್ವ ನೀಡಬೇಕು ಎಂದು ಮನವಿ ಮಾಡಿದ್ರು.

ನನಗೇನು ಹಿಂದಿ ಬರಲ್ಲ ಅನ್ಕೋಬೇಡಿ, ನಾನೂ ಕೂಡ ಮಾತನಾಡ್ತೀನಿ. ದೆಹಲಿಯಲ್ಲಿ ಹಿಂದಿಯಲ್ಲೇ ನಾನೂ ಕೂಡ ಸ್ಪೀಚ್ ಕೊಟ್ಟಿದ್ದೀನಿ ಎಂದು ಕಾಗೇರಿ ತಿಳಿಸಿದ್ರು.

Intro:ಶಿರಸಿ : ನಮ್ಮೆಲ್ಲರ ಆಶಯ ಮಾತೃಭಾಷೆಯನ್ನ ಸರಿಯಾಗಿ ಕಲಿಸ್ಬೇಕು. ಏಕೆಂದ್ರೆ ಭಾಷೆಗೆ ಇರೋ ಪ್ರಾಮುಖ್ಯತೆಯನ್ನು ಕೆಲವೇ ಶಬ್ದಗಳಿಂದ ವರ್ಣಿಸೋಕೆ ಸಾಧ್ಯವಿಲ್ಲ ಅಂತ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತೃಭಾಷೆ ಪ್ರಾಮುಖ್ಯತೆ ಬಗ್ಗೆ ಹೇಳಿದರು.

Body:ಜಿಲ್ಲೆಯ ಸಿದ್ದಾಪುರದ ರಾಘವೇಂದ್ರ ಮಠದಲ್ಲಿ ನಡೆದ ಹಿಂದಿ ದಿವಸ್ ಕಾರ್ಯಕ್ರಮವನ್ನ ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ದಿನಗಳಲ್ಲಿ ವಿವಾದ ಹುಟ್ಟು ಹಾಕೋಕೆ ಅಂತಾನೆ ಕೆಲವರು ಕಾಯ್ತಾ ಇರ್ತಾರೆ. ಸಂವಿಧಾನದ ವಿಧಿಗಳಲ್ಲೇ ಹಿಂದಿ ಬಗ್ಗೆ ಉಲ್ಲೇಖ ಇದೆ. ಇದನ್ನು ನಾವು ಉಲ್ಲಂಘಿಸಿದ್ರೆ ಸಂವಿಧಾನದ ಅಶಯಗಳನ್ನ ಉಳಿಸೋ ಪ್ರಯತ್ನಕ್ಕೆ ಹಿನ್ನಡೆಯಾಗುತ್ತೆ ಎಂದರು.

ಇಂದಿನ ದಿನಗಳಲ್ಲಿ ಇಂಗ್ಲಿಷ್ ಭಾಷೆ ಉಳಿದ ಭಾಷೆಗಳನ್ನ ನುಂಗುತ್ತಿದೆ. ಇಂಗ್ಲಿಷ್ ಅನ್ನ ನಾವು ಪ್ರೀತಿಯಿಂದ ಅಪ್ಪಿಕೊಳ್ತಾ ಇದ್ದೇವೆ. ಇಂಗ್ಲಿಷ್ ಕಲಿಕೆಯ ಬಗ್ಗೆ ನಮಗೆ ಯಾವುದೇ ಅಭ್ಯಂತರವಿಲ್ಲ. ಆದ್ರೆ ಒಂದು ಭಾಷೆಯಿಂದಾಗಿ ಇನ್ನೊಂದು ಭಾಷೆಗೆ ತೊಂದರೆಯಾಗ್ಬಾರ್ದು. ಪ್ರಥಮ ಪ್ರಾಶಸ್ತ್ಯವನ್ನ ಮಾತೃಭಾಷೆಗೆ ನೀಡಬೇಕು. ನಂತರ ಹಿಂದಿ ಭಾಷೆಗೆ ಪ್ರಾಶಸ್ತ್ಯ ನೀಡ್ಬೇಕು ಎಂದರು.

ನನಗೇನು ಹಿಂದಿ ಬರಲ್ಲ ಅನ್ಕೋಬೇಡಿ, ನಾನೂ ಕೂಡ ಹಿಂದಿ ಮಾತನಾಡ್ತೀನಿ. ದೆಹಲಿಯಲ್ಲಿ ಹಿಂದಿಯಲ್ಲೇ ನಾನೂ ಕೂಡ ಸ್ಪೀಚ್ ಕೊಟ್ಟಿದೀನಿ ಅಂತ ಹಿಂದಿಯಲ್ಲಿ ಮಾತನಾಡಿ ಹಿಂದಿ ದಿನದ ಶುಭಾಷಯವನ್ನ ಕೋರಿದರು.

ಬೈಟ್ (೧) : ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನಸಭಾಧ್ಯಕ್ಷ,
..........
ಸಂದೇಶ ಭಟ್ ಶಿರಸಿ. Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.