ETV Bharat / state

ಭಟ್ಕಳ ತಾಲೂಕು ಪಂಚಾಯತ ಸಾಮಾನ್ಯ ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ - ಭಟ್ಕಳ ವಿವಿಧ ಇಲಾಖೆಯ ಪ್ರಗತಿ ಪರಿಶೀಲನೆ ಸಭೆ ಸುದ್ದಿ

ಆರೋಗ್ಯ ಇಲಾಖೆಯ ತಾಲೂಕು ಆರೋಗ್ಯಾಧಿಕಾರಿ ಡಾ. ಮೂರ್ತಿರಾಜ್ ಭಟ್ ತಾಲೂಕಿನಲ್ಲಿ ಮಾರ್ಚನಿಂದ ಇಲ್ಲಿಯವರೆಗೆ ಕೊರೊನಾ ಪ್ರಕರಣಗಳ ಕುರಿತು ಮಾಹಿತಿ ನೀಡಿದರು. ಭಟ್ಕಳದಲ್ಲಿ ಜನವರಿಯಿಂದ ನಾಲ್ಕು ಡೆಂಗ್ಯೂ ಪ್ರಕರಣಗಳು ಕಂಡುಬಂದಿದ್ದು, ಚಿಕಿತ್ಸೆ ನೀಡಲಾಗಿದೆ ಎಂದು ತಿಳಿಸಿದರು.

ತಾಲೂಕು ಪಂಚಾಯತ ಸಾಮಾನ್ಯ ಸಭೆ
ತಾಲೂಕು ಪಂಚಾಯತ ಸಾಮಾನ್ಯ ಸಭೆ
author img

By

Published : Jun 24, 2020, 2:02 PM IST

ಭಟ್ಕಳ: ತಾಲೂಕು ಪಂಚಾಯತ ಅಧ್ಯಕ್ಷ ಈಶ್ವರ ನಾಯ್ಕ ಅಧ್ಯಕ್ಷತೆಯಲ್ಲಿ 2020-201ನೇ ಸಾಲಿನ ತಿಂಗಳ ಸಾಮಾನ್ಯ ಸಭೆ ತಾಲೂಕು ಪಂಚಾಯತ ಸಭಾಗೃಹದಲ್ಲಿ ನಡೆಯಿತು.

ಸಭೆಯಲ್ಲಿ ವಿವಿಧ ಇಲಾಖೆಯ ಪ್ರಗತಿ ಪರಿಶೀಲನೆ ಅನುಸಾರ ಇಲಾಖೆಗೆ ಯೋಜನೆ ಹಾಗೂ ಅನುಷ್ಠಾನಗೊಂಡ ಕೆಲಸದ ಬಗ್ಗೆ ಮಾಹಿತಿ ತಿಳಿಸಲಾಯಿತು. ಆರೋಗ್ಯ ಇಲಾಖೆಯ ತಾಲೂಕು ಆರೋಗ್ಯಾಧಿಕಾರಿ ಡಾ. ಮೂರ್ತಿರಾಜ್ ಭಟ್ ತಾಲೂಕಿನಲ್ಲಿ ಮಾರ್ಚನಿಂದ ಇಲ್ಲಿಯವರೆಗೆ ಕೊರೊನಾ ಪ್ರಕರಣಗಳ ಕುರಿತು ಮಾಹಿತಿ ನೀಡಿದರು. ಭಟ್ಕಳದಲ್ಲಿ ಜನವರಿಯಿಂದ ನಾಲ್ಕು ಡೆಂಗ್ಯೂ ಪ್ರಕರಣಗಳು ಕಂಡುಬಂದಿದ್ದು, ಚಿಕಿತ್ಸೆ ನೀಡಲಾಗಿದೆ ಎಂದರು.

ತಾಲೂಕು ಪಂಚಾಯತ ಸಾಮಾನ್ಯ ಸಭೆ

ಹೊರ ರಾಜ್ಯದಿಂದ ಬಂದವರ ಬಗ್ಗೆ ಮಾಹಿತಿ ನೀಡಿದವರ ಹೆಸರು ಬಹಿರಂಗ ಮಾಡಬೇಡಿ ಎಂದು ಸದಸ್ಯರು ಒತ್ತಾಯಿಸಿದರು. ಗ್ರಾಮೀಣ ಭಾಗದಲ್ಲಿಯೂ ಸಹ ಅಲ್ಲಿನ ಜನರಿಗೆ ಆರೋಗ್ಯದ ಬಗ್ಗೆ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳುವಂತೆ ಸದಸ್ಯರು ಸೂಚಿಸಿದರು.

ಕಾವಲು ಕಮಿಟಿಯಲ್ಲಿ ಓರ್ವ ಶಿಕ್ಷಕರು, ಪಿಡಿಓ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮ ಲೆಕ್ಕಾಧಿಕಾರಿ, ಗ್ರಾಮ ಸಹಾಯಕರು ಹಾಗೂ ಬೀಟ್ ಪೊಲೀಸರುಗಳಿದ್ದಾರೆ. ಯಾರೇ ಹೊರ ರಾಜ್ಯದಿಂದ ಬಂದಲ್ಲಿ ಅಂತವರ ಮೇಲೆ ನಿಗಾ ಇರಿಸಲಿದ್ದು, ತಕ್ಷಣಕ್ಕೆ ಕಾರ್ಯಪ್ರವೃತ್ತರಾಗಿ ಅವರ ಮಾಹಿತಿ ಸಂಗ್ರಹಲಿದ್ದಾರೆ.

ತಾಲೂಕಿನಲ್ಲಿ ಸೋಶಿಯಲ್ ರಿಪೋರ್ಟಿಂಗ್ ತುಂಬಾ ನಿಖರವಾಗಿದೆ. ಹಗಲು ರಾತ್ರಿಯೆನ್ನದೇ ಸಾರ್ವಜನಿಕರು ಕರೆ ಮಾಡಿ ಮಾಹಿತಿ ನೀಡಿದ ತಕ್ಷಣಕ್ಕೆ ಅಧಿಕಾರಿಗಳು ಕಾರ್ಯಪ್ರವೃತ್ತವಾಗುತ್ತಿದ್ದೇವೆ. ಹಾಗಾಗಿ ಇಲ್ಲಿಯವರೆಗೆ ಯಾರೊಬ್ಬರು ಸಹ ಕ್ವಾರಂಟೈನ್​​ನಿಂದ ತಪ್ಪಿಸಿಕೊಂಡಿಲ್ಲ ಎಂದು ತಾ.ಪಂ. ಪ್ರಬಾರಿ ಇ.ಇ.ಓ. ಪ್ರಭಾಕರ ಚಿಕ್ಕನಮನೆ ವಿವರಿಸಿದರು.

ಸಭೆಯಲ್ಲಿ ಮಾವಳ್ಳಿ-1 ಗ್ರಾಮ ಪಂಚಾಯತ ಪಿಡಿಓ ಜನರ ಕೆಲಸಕ್ಕೆ ಸ್ಪಂದಿಸುತ್ತಿಲ್ಲ. ಬದಲಾಗಿ ಉದ್ಧಟತನ ತೋರಿಸುತ್ತಿರುವ ಬಗ್ಗೆ ಪದೇ ಪದೇ ದೂರುಗಳು ಬರುತ್ತಿವೆ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಮಾತಿಗೆ ಬೆಲೆಯಿಲ್ಲದ ರೀತಿಯಲ್ಲಿ ಅವರು ವರ್ತಿಸುತ್ತಿದ್ದಾರೆ. ತಕ್ಷಣ ಅವರನ್ನು ಬದಲಾವಣೆ ಮಾಡುವಂತೆ ಅಧ್ಯಕ್ಷ ಈಶ್ವರ ನಾಯ್ಕ ಹಾಗೂ ಕೆಲ ಸದಸ್ಯರು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ರಾಧಾ ವೈದ್ಯ, ಸ್ಥಾಯಿ ಸಮಿತಿ ಅಧ್ಯಕ್ಷ ಮಹಾಬಲೇಶ್ವರ ನಾಯ್ಕ, ತಾಲೂಕು ಆರೋಗ್ಯಾಧಿಕಾರಿ ಡಾ. ಮೂರ್ತಿರಾಜ್ ಭಟ್​ ಸೇರಿದಂತೆ​ ಪಂಚಾಯತ ಸದಸ್ಯರು ಮತ್ತು ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.