ETV Bharat / state

ವಿದ್ಯುತ್ ಚಿತಾಗಾರದಲ್ಲಿ ಕೋವಿಡ್​ ಸೋಂಕಿತರ ಅಂತ್ಯಕ್ರಿಯೆ ನಡೆಸಿ: ಆನಂದ ಅಸ್ನೋಟಿಕರ್

ಇತ್ತೀಚೆಗೆ ಕೋವಿಡ್‌ನಿಂದಾಗಿ ಎಲ್ಲೆಡೆ ಭಯದ ವಾತಾವರಣ ಸೃಷ್ಟಿಯಾಗಿದೆ. ಸಹಜವಾಗಿ ಸತ್ತರೂ ಕೊರೋನಾ ಭಯದಲ್ಲಿ ಜನರು ಮೃತದೇಹವನ್ನು ಸುಡಲು ಅಥವಾ ಹೂಳಲು ತಮ್ಮ ವ್ಯಾಪ್ತಿಯಲ್ಲಿ ವಿರೋಧಿಸುತ್ತಿರುವುದು ಕಂಡು ಬರುತ್ತಿದೆ. ಹೀಗಾಗಿ, ಸೋಂಕಿತರನ್ನೂ ಸೇರಿದಂತೆ ಸಾಮಾನ್ಯರೂ ಮೃತಪಟ್ಟಾಗ ಶವ ಸಂಸ್ಕಾರಕ್ಕೆ ಅನುಕೂಲವಾಗುವಂತೆ ವಿದ್ಯುತ್ ಚಿತಾಗಾರ ಸ್ಥಾಪಿಸಬೇಕು ಎಂದು ಮಾಜಿ ಸಚಿವ ಆನಂದ ಅಸ್ನೋಟಿಕರ್ ಆಗ್ರಹಿಸಿದ್ದಾರೆ.

author img

By

Published : Jul 14, 2020, 3:54 AM IST

funeral-of-covid-infected-people-in-electric-sprinkler-ananda-asnotikar
ಆನಂದ ಅಸ್ನೋಟಿಕರ್

ಕಾರವಾರ: ಜಿಲ್ಲಾಡಳಿತವು ತರಾತುರಿಯಲ್ಲಿ ಯಾರಿಗೂ ಮಾಹಿತಿ ನೀಡದೆ ಮೈಂಗಿಣಿಯಲ್ಲಿ ಕೋವಿಡ್ ಸೋಂಕಿತರ ಮೃತದೇಹವನ್ನು ಮಣ್ಣು ಮಾಡಿದೆ. ಈ ರೀತಿ ಜನರನ್ನು ಭಯದಲ್ಲಿ ನೂಕುವ ಬದಲು ವಿದ್ಯುತ್ ಚಿತಾಗಾರ ಸ್ಥಾಪಿಸಿ ಶವ ಸಂಸ್ಕಾರ ಮಾಡುವಂತೆ ಮಾಜಿ ಸಚಿವ ಆನಂದ ಅಸ್ನೋಟಿಕರ್ ಒತ್ತಾಯಿಸಿದ್ದಾರೆ.

ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರವಾರದ ಮೈಂಗಿಣಿ ಭಾಗದಲ್ಲಿ ನೂರಾರು ಮನೆಗಳಿವೆ. ಆದರೆ, ಇತ್ತೀಚೆಗೆ ಮೃತಪಟ್ಟ ಸೋಂಕಿತನ ಶವವನ್ನು ರಾತ್ರೋರಾತ್ರಿ ಆಂಬ್ಯುಲೆನ್ಸ್​ನಲ್ಲಿ ತಂದು ಈ ಭಾಗದಲ್ಲಿ ಮಣ್ಣು ಮಾಡಲಾಗಿದೆ. ಈ ಬಗ್ಗೆ ತಹಶೀಲ್ದಾರ್​ರನ್ನು ಕೇಳಿದರೆ, ಎರಡು ಎಕರೆ ಜಾಗವನ್ನು ಈ ಭಾಗದಲ್ಲಿ ಕೋವಿಡ್‌ನಿಂದ ಮೃತರಾದವರ ಸಂಸ್ಕಾರಕ್ಕೆ ಕಾಯ್ದಿರಿಸಲಾಗಿದೆ ಎನ್ನುತ್ತಿದ್ದಾರೆ. ಆದರೆ, ಇಲ್ಲಿ ಜಾಗವನ್ನು ಕಾಯ್ದಿರಿಸಲು ಸ್ಥಳೀಯವಾಗಿ ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಜಿಲ್ಲಾಡಳಿತವೇ ನಿರ್ಣಯ ಕೈಗೊಂಡು ಮೃತರನ್ನು ಇಲ್ಲಿ ಹೂತಿರುವುದು ಸರಿಯಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಆನಂದ ಅಸ್ನೋಟಿಕರ್ ಸುದ್ದಿಗೋಷ್ಠಿ

ಮೈಂಗಿಣಿ ಭಾಗದಲ್ಲಿ ಕಾಡುಪ್ರಾಣಿಗಳು ಹೆಚ್ಚಿವೆ. ಮೃತದೇಹವನ್ನು ಹೂತಾಗ ಅವುಗಳು ಅದನ್ನು ಅಗೆದು ತೆಗೆಯುವ ಸಾಧ್ಯತೆಯೂ ಇದೆ. ಇದರಿಂದಾಗಿ ವೈರಸ್ ಇಡೀ ಊರಿಗೆ ಹಬ್ಬುವ ಆತಂಕ ಮನೆ ಮಾಡಿದೆ. ಈ ರೀತಿಯಾಗಿ ಏಕಮುಖವಾಗಿ ನಡೆದುಕೊಂಡು ಜನರಲ್ಲಿ ಭಯದ ವಾತಾವರಣ ನಿರ್ಮಿಸುವ ಬದಲು, ವಿದ್ಯುತ್ ಚಿತಾಗಾರ ನಿರ್ಮಾಣ ಮಾಡಿ. ಇತ್ತೀಚೆಗೆ ಕೋವಿಡ್‌ನಿಂದಾಗಿ ಎಲ್ಲೆಡೆ ಭಯದ ವಾತಾವರಣ ಸೃಷ್ಟಿಯಾಗಿದೆ. ಸಹಜವಾಗಿ ಸತ್ತರೂ ಕೊರೋನಾ ಭಯದಲ್ಲಿ ಜನರು ಮೃತದೇಹವನ್ನು ಸುಡಲು ಅಥವಾ ಹೂಳಲು ತಮ್ಮ ವ್ಯಾಪ್ತಿಯಲ್ಲಿ ವಿರೋಧಿಸುತ್ತಿರುವುದು ಕಂಡು ಬರುತ್ತಿದೆ. ಹೀಗಾಗಿ, ಸೋಂಕಿತರನ್ನೂ ಸೇರಿದಂತೆ ಸಾಮಾನ್ಯರೂ ಮೃತಪಟ್ಟಾಗ ಶವ ಸಂಸ್ಕಾರಕ್ಕೆ ಅನುಕೂಲವಾಗುವಂತೆ ವಿದ್ಯುತ್ ಚಿತಾಗಾರ ಸ್ಥಾಪಿಸಬೇಕು. ಇದು ಸಾಧ್ಯವಿಲ್ಲದಿದ್ದಲ್ಲಿ ಜನವಸತಿ ಇಲ್ಲದ ಅಣಶಿ ಭಾಗದಲ್ಲಿ ಮೃತದೇಹವನ್ನು ಹೂಳಿ ಎಂದು ಸಲಹೆ ನೀಡಿದ್ದಾರೆ.

ಇನ್ನು, ವಾಣಿಜ್ಯೋದ್ಯಮಿಗಳ ಸಂಘ ಅರ್ಧ ದಿನ ಕಾರವಾರ ಲಾಕ್‌ಡೌನ್‌ಗೆ ಕೋರಿದ್ದರು. ಈ ವೇಳೆ ಬಹುತೇಕರು ತಮ್ಮ ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡಿ ಬೆಂಬಲ ಘೋಷಿಸಿದ್ದರು. ಆದರೆ, ಕೆಲವರು ತೆರೆದು ವ್ಯಾಪಾರ ನಡೆಸುತ್ತಿದ್ದರು. ಸ್ವಯಂಪ್ರೇರಿತ ಲಾಕ್‌ಡೌನ್ ಎಂದು ಘೋಷಿಸಿ, ಬಳಿಕ ಒತ್ತಡ ಹೇರಿ ಮುಚ್ಚಿಸಲಾಗಿದೆ. ಇದು ಸರಿಯಲ್ಲ, ಈ ರೀತಿ ಗೂಂಡಾಗಿರಿ ಮಾಡಬಾರದು. ಬದಲಾಗಿ ವ್ಯಾಪಾರಸ್ಥರ ಮನವೊಲಿಸುವ ಕೆಲಸ ಮಾಡಬೇಕು ಎಂದು ಅವರು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.