ETV Bharat / state

ಉತ್ತರಕನ್ನಡದ 'ಬಿಜೆಪಿ ಭೀಷ್ಮ' ಡಾ.ಎಂ.ಪಿ.ಕರ್ಕಿ ನಡೆದು ಬಂದ ಹಾದಿ.. - ಎಂ ಪಿ ಕರ್ಕಿ ಸೇವೆ

ಮಾಜಿ ಶಾಸಕ ಡಾ.ಎಂ.ಪಿ. ಕರ್ಕಿ ನಿನ್ನೆ ನಿಧನರಾಗಿದ್ದಾರೆ. ಇವರು ವಿವಿಧ ಕ್ಷೇತ್ರಗಳಲ್ಲಿ ಅಪಾರ ಸೇವೆ ಸಲ್ಲಿಸಿದ್ದಾರೆ.

former mla m p karki passes away
ಮಾಜಿ ಶಾಸಕ ಡಾ.ಎಂ.ಪಿ. ಕರ್ಕಿ ನಿಧನ
author img

By

Published : Oct 19, 2021, 8:51 AM IST

Updated : Oct 19, 2021, 10:17 AM IST

ಕಾರವಾರ: ಉತ್ತರಕನ್ನಡ ಜಿಲ್ಲೆಯ ವೈದ್ಯಕೀಯ, ರಾಜಕೀಯ, ಶೈಕ್ಷಣಿಕ ಕ್ಷೇತ್ರಗಳಲ್ಲಿ ತಮ್ಮದೇ ಆದ ವಿಶೇಷ ಸೇವೆ ಸಲ್ಲಿಸುತ್ತಿದ್ದ ಬಿಜೆಪಿಯ ಮಾಜಿ ಶಾಸಕ ಡಾ.ಎಂ.ಪಿ. ಕರ್ಕಿ(87) ನಿನ್ನೆ ನಿಧನರಾಗಿದ್ದಾರೆ.

ಹೊನ್ನಾವರದ ನ್ಯಾಯವಾದಿ ಹಾಗೂ ಸ್ವಾತಂತ್ರ್ಯ ಹೋರಾಟಗಾರ ಪರಮೇಶ್ವರ ಗಣೇಶ ಕರ್ಕಿ ಹಾಗೂ ಅನುಸೂಯಾ ಕರ್ಕಿ ದಂಪತಿಯ ಪುತ್ರನಾಗಿ 1935ರ ಜುಲೈ 16 ರಂದು ಜನಿಸಿದರು. ಕರ್ಕಿ ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸ್ಥಳೀಯವಾಗಿ ಮುಗಿಸಿ ಮುಂಬೈನ ಗ್ರ್ಯಾಂಟೈಟ್ ಮೆಡಿಕಲ್ ಕಾಲೇಜಿನಲ್ಲಿ ಎಂ.ಬಿ.ಬಿ.ಎಸ್ ಪದವಿಯನ್ನು 1959ರಲ್ಲಿ ಪೂರೈಸಿದ್ದರು.

ಬಳಿಕ ಹೊನ್ನಾವರಕ್ಕೆ ಆಗಮಿಸಿ ವೈದ್ಯಕೀಯ ವೃತ್ತಿ ಜೀವನ ಆರಂಭಿಸಿದ ಅವರು 20 ವರ್ಷಗಳ ಕಾಲ ವೈದ್ಯ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಬಳಿಕ ಆಸ್ಪತ್ರೆಯನ್ನು ತೆರೆದ ಅವರು ಅನಾರೋಗ್ಯ ಎಂದು ಬಂದವರಿಗೆ ದುಡ್ಡಿನ ಮುಖ ನೋಡದೇ ಚಿಕಿತ್ಸೆ ನೀಡಿ ಕಳುಹಿಸುತ್ತಿದ್ದನ್ನು ಇಂದಿಗೂ ಕೂಡ ಜನ ಮರೆತಿಲ್ಲ.

ಬಳಿಕ ರಾಜಕೀಯದೆಡೆಗೆ ಆಸಕ್ತರಾದ ಕರ್ಕಿ ಬಿಜೆಪಿಯನ್ನು ಸೇರಿ ಜಿಲ್ಲೆಯಲ್ಲಿ ಬಿಜೆಯನ್ನು ಕಟ್ಟಿ ಬೆಳೆಸಲು ಕಾರಣರಾದರು. ವಾಜಪೇಯಿ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದ ಅವರು ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತರಾಗಿ, 18 ವರ್ಷಗಳ ಕಾಲ ಬಿಜೆಪಿ ಜಿಲ್ಲಾ ಅಧ್ಯಕ್ಷರಾಗಿ, ಒಮ್ಮೆ ರಾಜ್ಯ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದರು.

1983 ಹಾಗೂ 1994ರಲ್ಲಿ ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಆಯ್ಕೆಯಾದರು. ಶಾಸಕರಾಗಿದ್ದ ವೇಳೆ ಯಾರಿಂದಲೂ ಬಿಡಿಗಾಸನ್ನು ಪಡೆಯದೆ ಕ್ಷೇತ್ರದ ಕುಂದುಕೊರತೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸಿದ್ದಾರೆ. ಶಾಸಕರಾಗಿದ್ದ ವೇಳೆಯೂ ಆಸ್ಪತ್ರೆಗೆ ತೆರಳಿ ವೈದ್ಯ ವೃತ್ತಿಯನ್ನು ಮುಂದುವರಿಸಿದ್ದರು. ಹೊನ್ನಾವರ-ಕುಮಟಾ ಪಟ್ಟಣಗಳಿಗೆ ನೀರು ಪೂರೈಸುವ ಮರಾಕಲ್ ಯೋಜನೆ ಇವರ ಅವಧಿಯಲ್ಲಿ ಕಾರ್ಯರೂಪಕ್ಕೆ ಬಂದಿತು.

ಇದನ್ನೂ ಓದಿ: ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ಖಂಡನೆ: ಗಾಂಧಿ ಪ್ರತಿಮೆ ಎದುರು ಏಕಾಂಗಿ ಪ್ರತಿಭಟನೆ

ಹೊನ್ನಾವರ ಪಟ್ಟಣ ಪಂಚಾಯತ್ ಅಧ್ಯಕ್ಷರಾಗಿ ಉತ್ತಮ ಆಡಳಿತ ನೀಡಿದ್ದರು. ತಾಲೂಕು ಬೋರ್ಡಿನ ಸದಸ್ಯರಾಗಿ, ಲ್ಯಾಂಡ್ ಬ್ಯಾಂಕಿನ ಅಧ್ಯಕ್ಷರಾಗಿ, ಭಾರತ್ ಮಜದೂರ್ ಸಂಘದ ಸಂಚಾಲಕರಾಗಿ, ಹವ್ಯಕ ಬ್ಯಾಂಕಿನ ಅಧ್ಯಕ್ಷರಾಗಿ ಸೇವೆ ಮಾಡಿದ್ದಾರೆ. ಹವ್ಯಕ ಸಭಾಭವನದ ಮ್ಯಾನೇಜಿಂಗ್ ಟ್ರಸ್ಟಿಯಾಗಿ ಅದನ್ನು ಎಲ್ಲರೂ ಹೆಮ್ಮೆ ಪಡುವಂತೆ ನಿರ್ಮಿಸಿ ಎಲ್ಲ ಸಮುದಾಯದವರಿಗೆ ಅರ್ಪಿಸಿದ್ದಾರೆ. ಮೂಡಗಣಪತಿ ದೇವಾಲಯದ ಮುಖ್ಯ ಟ್ರಸ್ಟಿಯಾಗಿ, ಲಯನ್ಸ್​ ಕ್ಲಬ್‌ನ ಅಧ್ಯಕ್ಷರಾಗಿ, ಎಂ.ಪಿ.ಇ. ಸೊಸೈಟಿಯ ಅಧ್ಯಕ್ಷರಾಗಿ ಮೂರು ದಶಕಗಳಿಗೂ ಹೆಚ್ಚುಕಾಲ ಕಳಂಕರಹಿತ ಸೇವೆ ಸಲ್ಲಿಸಿದರು. ಜಿಲ್ಲಾ ಅನುದಾನಿತ ಖಾಸಗಿ ಕಾಲೇಜುಗಳ ಆಡಳಿತ ಮಂಡಳಿಗಳ ಒಕ್ಕೂಟದ ಅಧ್ಯಕ್ಷರಾಗಿ, ಕಾಸರಕೋಡಿನ ಕೋ-ಆಪರೇಟಿವ್ ಹಂಚಿನ ಕಾರ್ಖಾನೆಯ ಅಧ್ಯಕ್ಷರಾಗಿ, ಕರ್ನಾಟಕ ವಿಶ್ವವಿದ್ಯಾಲಯದ ‘ಸಿಂಡಿಕೇಟ್’ನ ಸದಸ್ಯರಾಗಿಯೂ ಕೆಲಸ ಮಾಡಿದ್ದಾರೆ.

Last Updated : Oct 19, 2021, 10:17 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.