ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಏಂಟು ಸೋಂಕಿತರು ಕೊರೊನಾದಿಂದ ಗುಣಮುಖರಾಗಿದ್ದು, ಮತ್ತೆ ಐದು ಜನರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ.
ಗುಣಮುಖರಾದವರ ಪೈಕಿ ಮೂರು ವರ್ಷದ ಹೆಣ್ಣುಮಗು, ಆಕೆಯ ತಾಯಿ ಹಾಗೂ ಆರು ಮಂದಿ ಪುರುಷರಿದ್ದಾರೆ. ಅವರಲ್ಲಿ ಓರ್ವ ಚಿಕ್ಕಮಗಳೂರು ಮೂಲದ ಯುವಕನಾಗಿದ್ದು, ಉಳಿದಂತೆ ಭಟ್ಕಳದ ಇಬ್ಬರು, ಹೊನ್ನಾವರ, ದಾಂಡೇಲಿ, ಜೊಯಿಡಾ, ಶಿರಸಿ ಹಾಗೂ ಮುಂಡಗೋಡಿನ ತಲಾ ಓರ್ವ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ.
ಶುಕ್ರವಾರ ಪತ್ತೆಯಾದ ಸೋಂಕಿತರ ಪೈಕಿ ಮೂವರು ಭಟ್ಕಳದವರಾಗಿದ್ದು, ಶಿರಸಿ ಹಾಗೂ ಜೊಯಿಡಾದಲ್ಲಿ ತಲಾ ಒಂದು ಪ್ರಕರಣ ಪತ್ತೆಯಾಗಿದೆ. ಇದರೊಂದಿಗೆ ಸದ್ಯ ಜಿಲ್ಲೆಯಲ್ಲಿ ಒಟ್ಟು 268 ಸೋಂಕಿತರಿದ್ದು, ಎರಡು ಸಾವು ಸಂಭವಿಸಿದೆ. 162 ಮಂದಿ ಗುಣಮುಖರಾಗಿದ್ದು, 134 ಮಂದಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.