ಕಾರವಾರ: ತದಡಿಯಲ್ಲಿ ಕಾರ್ಯಕ್ರಮವೊಂದಕ್ಕೆ ಆಗಮಿಸಿದ್ದ ಭಟ್ಕಳ ಮೂಲದ ಅಮ್ಮ ಮಗ ಸಮುದ್ರತೀರದಲ್ಲಿ ಆಟ ಆಡುತ್ತಿರುವಾಗ ಅಲೆಗೆ ಕೊಚ್ಚಿ ಹೋಗಿದ್ದರು.
ಅಲ್ಲಿಯೇ ಇದ್ದ ಮೀನುಗಾರರು ಬೋಟ್ ಮೂಲಕ ತೆರಳಿ ಮುಳುಗುತ್ತಿದ್ದವರನ್ನು ರಕ್ಷಣೆ ಮಾಡಿದ್ದಾರೆ. ನೀರಿನಲ್ಲಿ ಮುಳುಗಿ ಅಸ್ವಸ್ಥಗೊಂಡಿದ್ದ ಅವರನ್ನು ಗೋಕರ್ಣ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಕುಮಟಾ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಡಾ. ಜಗದೀಶ ನಾಯ್ಕ ಸೂಚಿಸಿದರು.
ಇದನ್ನೂ ಓದಿ: ಮನೆಯಂಗಳದಲ್ಲಿ ಕಟ್ಟಿದ್ದ ನಾಯಿ ಮೇಲೆ ಚಿರತೆ ದಾಳಿ: ತಪ್ಪಿದ ಬೇಟೆ