ETV Bharat / state

ಮೀನುಗಾರರಿಗೆ ದೊರಕದ ಸೀಮೆಎಣ್ಣೆ: ಸರ್ಕಾರದ ನಿರ್ಲಕ್ಷ್ಯಕ್ಕೆ ಕೈಕಟ್ಟಿ ಕುಳಿತ‌ ಮೀನುಗಾರರು - ಸೀಮೆಎಣ್ಣೆ ಸಿಗದೆ ಮೀನುಗಾರಿಕೆಗೆ ಪರದಾಟ

ಕಡಲ ಮಕ್ಕಳಿಗೆ ಜೂನ್ ಜುಲೈ ತಿಂಗಳು ಸರ್ಕಾರ ಮೀನುಗಾರಿಕೆಯನ್ನ ನಿಷೇದ ಮಾಡಿರುತ್ತದೆ. ಸರ್ಕಾರದ ನಿಷೇದದ ಅವಧಿ ಮುಗಿದ ನಂತರ ಕಡಲಿಗೆ ಇಳಿಯುವಾಗ ಮೀನುಗಾರರಿಗೆ ಉತ್ತಮ ಮೀನುಗಳು ಬಲೆಗೆ ಬಿದ್ದು ಆ ವರ್ಷದ ಆರ್ಥಿಕ ಪರಿಸ್ಥಿತಿ ಸುಧಾರಿಸಿಕೊಳ್ಳುವಂತೆ ಮಾಡುತ್ತದೆ. ಆದರೆ, ಉತ್ತರ ಕನ್ನಡ ಜಿಲ್ಲೆಯ ನಾಡದೋಣಿ ಮೀನುಗಾರಿಕೆಗೆ ಈ ವರ್ಷ ಸರ್ಕಾರ ನಿರ್ಲಕ್ಷತನದಿಂದ ಕಗ್ಗಂಟಾಗುವಂತೆ ಮಾಡಿದೆ.

ಬಂದರು
ಬಂದರು
author img

By

Published : Nov 8, 2022, 4:50 PM IST

ಕಾರವಾರ: ಕಡಲ ಮಕ್ಕಳಿಗೆ ಮೀನುಗಾರಿಕೆಯೇ ಪ್ರಮುಖ ಉದ್ಯೋಗ. ಸಮುದ್ರಕ್ಕೆ ಇಳಿದು ಅಲೆಗಳ ಅಬ್ಬರ ಲೆಕ್ಕಿಸದೇ ಮತ್ಸ್ಯ ಶಿಕಾರಿ ಮಾಡೋ ಮೀನುಗಾರರಿಗೆ ಸದ್ಯ ಸರ್ಕಾರದ ನಿರ್ಲಕ್ಷ ಧೋರಣೆ ಕಗ್ಗಂಟಾಗುವಂತೆ ಮಾಡಿದೆ. ಮೀನುಗಾರಿಕೆಗಾಗಿ ಕೊಡುತ್ತಿದ್ದ ಸೀಮೆಎಣ್ಣೆಯನ್ನ ಈ ಬಾರಿ ಇನ್ನೂ ಮಂಜೂರು ಮಾಡದೇ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸರ್ಕಾರ ಮಾಡಿದೆ ಎಂಬ ಆರೋಪ ಕೇಳಿ ಬಂದಿದೆ.

ಹೌದು, ಕಡಲ ಮಕ್ಕಳಿಗೆ ಜೂನ್ ಜುಲೈ ತಿಂಗಳು ಸರ್ಕಾರ ಮೀನುಗಾರಿಕೆಯನ್ನ ನಿಷೇಧ ಮಾಡಿರುತ್ತದೆ. ಸರ್ಕಾರದ ನಿಷೇದದ ಅವಧಿ ಮುಗಿದ ನಂತರ ಕಡಲಿಗೆ ಇಳಿಯುವಾಗ ಮೀನುಗಾರರಿಗೆ ಉತ್ತಮ ಮೀನುಗಳು ಬಲೆಗೆ ಬಿದ್ದು ಆ ವರ್ಷದ ಆರ್ಥಿಕ ಪರಿಸ್ಥಿತಿ ಸುಧಾರಿಸಿಕೊಳ್ಳುವಂತೆ ಮಾಡುತ್ತದೆ. ಆದರೆ, ಉತ್ತರ ಕನ್ನಡ ಜಿಲ್ಲೆಯ ನಾಡದೋಣಿ ಮೀನುಗಾರಿಕೆಗೆ ಈ ವರ್ಷ ಸರ್ಕಾರ ನಿರ್ಲಕ್ಷ್ಯದಿಂದ ಕಗ್ಗಂಟಾಗುವಂತೆ ಮಾಡಿದೆ.

ನಾಡದೋಣಿ ಮೀನುಗಾರರಿಗೆ ಸರ್ಕಾರ ಪ್ರತಿ ತಿಂಗಳು 300 ಲೀಟರ್ ಸೀಮೆಎಣ್ಣೆಯನ್ನ ವಿತರಣೆ ಮಾಡುತ್ತದೆ. ಮೀನುಗಾರಿಕೆ ಮಾಡಲು ಬಳಸುವ ಯಂತ್ರಗಳಿಗೆ ಸೀಮೆಎಣ್ಣೆ ಬಳಸುವುದರಿಂದ ಸಬ್ಸಿಡಿ ದರದಲ್ಲಿ ಸೀಮೆಎಣ್ಣೆಯನ್ನ ಸರ್ಕಾರ ವಿತರಣೆ ಮಾಡುತ್ತದೆ. ಆದರೆ, ಈ ವರ್ಷ ಆಗಸ್ಟ್ ನಿಂದಲೂ ಸರ್ಕಾರ ಸೀಮೆಎಣ್ಣೆಯನ್ನೇ ವಿತರಣೆ ಮಾಡಿಲ್ಲ. ಇದರಿಂದ ನಾಡದೋಣಿ ಮೀನುಗಾರರು ದೋಣಿ, ಕೆಲಸ ಇದ್ದರೂ ಸೀಮೆಎಣ್ಣೆ ಸಿಗದೇ ಮೀನುಗಾರಿಕೆಗೆ ತೆರಳಲು ಆಗದೇ ಪರದಾಡುವಂತಾಗಿದ್ದು, ಸರ್ಕಾರದ ದೋರಣೆ ವಿರುದ್ಧ ಕಿಡಿಕಾರಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಸುಮಾರು 2 ಸಾವಿರ ನಾಡದೋಣಿಗಳಿದ್ದು, ಸುಮಾರು 8 ಸಾವಿರಕ್ಕೂ ಅಧಿಕ ಜನರು ಈ ಮೀನುಗಾರಿಕೆಯನ್ನೇ ನಂಬಿಕೊಂಡಿದ್ದಾರೆ. ಈ ಹಿಂದೆ ಕಡಿಮೆ ಸೀಮೆ ಎಣ್ಣೆಯನ್ನ ವಿತರಣೆ ಮಾಡಲಾಗುತ್ತಿತ್ತು. ಆದರೆ, ಈ ಬಾರಿ ಅದನ್ನೂ ಸಹ ನೀಡಿಲ್ಲ ಎನ್ನುವ ಅಸಮಾಧಾನ ಮೀನುಗಾರರದ್ದು.

ಇನ್ನು ಆಗಸ್ಟ್​ನಿಂದ ಡಿಸೆಂಬರ್​ವರೆಗೆ ಮೀನುಗಳು ದಡಕ್ಕೆ ಬರುವುದರಿಂದ ನಾಡದೋಣಿ ಮೀನುಗಾರಿಕೆಗೆ ಉತ್ತಮ ಮೀನುಗಳು ಬಲೆಗೆ ಬಿದ್ದು ಆ ವರ್ಷದ ಆದಾಯವನ್ನ ನಾಲ್ಕೈದು ತಿಂಗಳಲ್ಲಿ ಗಳಿಸಿಕೊಳ್ಳುತ್ತಾರೆ. ಆದರೆ, ಈ ಬಾರಿ ಸೀಮೆಎಣ್ಣೆ ಇಲ್ಲದೇ ನವೆಂಬರ್ ಬಂದರೂ ಮೀನುಗಾರಿಕೆ ಪ್ರಾರಂಭಿಸದ ಸ್ಥಿತಿ ನಿರ್ಮಾಣವಾಗಿದ್ದು, ಉದ್ಯೋಗ ಇದ್ದರೂ ಸರ್ಕಾರ ಮಾಡಲು ಅವಕಾಶ ಮಾಡಿಕೊಟ್ಟಿಲ್ಲ ಎನ್ನುವ ಆಕ್ರೋಶ ಮೀನುಗಾರರು ವ್ಯಕ್ತಪಡಿಸುತ್ತಾರೆ.

ಸೀಮೆಎಣ್ಣೆ ಸಿಗದೇ ಮೀನುಗಾರಿಕೆಗೆ ಪರದಾಟ: ಸೀಮೆಎಣ್ಣೆ ಎಲ್ಲ ಕಡೆ ಸಿಗದ ಹಿನ್ನೆಲೆಯಲ್ಲಿ ಸರ್ಕಾರ ವಿತರಣೆ ಮಾಡಿದಾಗ ಮಾತ್ರ ಮೀನುಗಾರರು ಪಡೆಯಬೇಕು. ಇನ್ನು ಕೆಲವರು ಕಾಳಸಂತೆಯಲ್ಲಿ ಮಾರಾಟ ಮಾಡಿದರು. ಆ ಬೆಲೆಯನ್ನ ಕೊಟ್ಟು ತೆಗೆದುಕೊಂಡು ಮೀನುಗಾರಿಕೆ ಮಾಡುವುದು ಅಸಾಧ್ಯ ಎನ್ನುವುದು ಮೀನುಗಾರರ ಅಭಿಪ್ರಾಯ. ಒಟ್ಟಿನಲ್ಲಿ ಸರ್ಕಾರದ ನಿರ್ಲಕ್ಷತನದಿಂದ ನಾಡದೋಣಿ ಮೀನುಗಾರರಿಗೆ ಮೀನುಗಾರಿಕೆ ಮಾಡಲು ಸೀಮೆಎಣ್ಣೆ ಸಿಗದೆ ಪರದಾಡುವಂತಾಗಿದ್ದು, ಈ ಬಗ್ಗೆ ಗಮನಹರಿಸಿದ ಕೂಡಲೇ ಸೀಮೆಎಣ್ಣೆ ವಿತರಿಸುವ ಕಾರ್ಯ ಸರ್ಕಾರ ಮಾಡಬೇಕಾಗಿದೆ.

ಓದಿ: ಉ.ಕನ್ನಡದಲ್ಲಿ ಹೆಚ್ಚಿದ ಮೀನು ಉತ್ಪಾದನೆ: ಡೀಸೆಲ್ ದರ ಏರಿಕೆಯಿಂದ ಮಿನುಗಾರರಿಗೆ ಸಿಗದ ಲಾಭ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.