ETV Bharat / state

ಗೋವಾದಿಂದ ಬಂದು ಕ್ವಾರಂಟೈನ್​ ಕೇಂದ್ರ ಸೇರಿದ ಮೀನುಗಾರರು

ಗೋವಾದಿಂದ ಕಾರವಾರಕ್ಕೆ ಬೋಟ್ ಮೂಲಕ ಬಂದಿದ್ದ 41 ಮೀನುಗಾರರನ್ನು ಕರಾವಳಿ ಕಾವಲು ಪಡೆ ಪೊಲೀಸರು ಪರೀಕ್ಷೆಗೆ ಒಳಪಡಿಸಿ ಕುಮಟಾದ ಕೊಂಕಣ್ ಎಜುಕೇಶನ್ ಟ್ರಸ್ಟ್​ನಲ್ಲಿ ಪ್ರಾರಂಭಿಸಿರುವ ಸರ್ಕಾರಿ ಕ್ವಾರಂಟೈನ್​ ಕೇಂದ್ರಕ್ಕೆ ರವಾನೆ ಮಾಡಿದ್ದಾರೆ.

fishermen
ಮೀನುಗಾರರು
author img

By

Published : Mar 30, 2020, 7:53 AM IST

ಕಾರವಾರ: ಲಾಕ್ ಡೌನ್ ಹಿನ್ನೆಲೆಯಲ್ಲಿ ಸರಿಯಾಗಿ ಊಟ, ತಿಂಡಿ ಸಿಗುತ್ತಿಲ್ಲ ಎಂದು ಗೋವಾದಿಂದ ಕಾರವಾರಕ್ಕೆ ಬೋಟ್ ಮೂಲಕ ಬಂದಿದ್ದ 41 ಮೀನುಗಾರರನ್ನು ಪೊಲೀಸರು ಸರ್ಕಾರಿ ಕ್ವಾರಂಟೈನ್​ ಕೇಂದ್ರಕ್ಕೆ ಸೇರಿಸಿದ್ದಾರೆ.

ಗೋವಾದ ವಾಸ್ಕೋಗೆ ಕೆಲಸಕ್ಕಾಗಿ ತೆರಳಿದ್ದ ಕುಮಟಾ ತಾಲೂಕಿನ ಬೆಟ್ಕುಳಿ ಹಾಗೂ ಕಿಮಾನಿ ಗ್ರಾಮದ 41 ಮೀನುಗಾರರು ಕರಾವಳಿ ಕಾವಲು ಪಡೆ ಪೊಲೀಸರು ಹಿಡಿಯುತ್ತಾರೆಂದು 24 ನೌಕಾ ಮೈಲಿ ದೂರದಿಂದ ಅಂಕೋಲಾದ ತದಡಿ ಬಂದರಿಗೆ ಆಗಮಿಸಿದ್ದರು‌. ಈ ಬಗ್ಗೆ ವಿಷಯ ತಿಳಿದು ತಕ್ಷಣ ಬಂದರಿಗೆ ಆಗಮಿಸಿದ ಕರಾವಳಿ ಕಾವಲು ಪಡೆ ಪೊಲೀಸರು ಹಾಗೂ ಗೋಕರ್ಣ ಪೊಲೀಸರು 41 ಮೀನುಗಾರರನ್ನು ಪರೀಕ್ಷೆಗೆ ಒಳಪಡಿಸಿ ಕುಮಟಾದ ಕೊಂಕಣ್ ಎಜುಕೇಶನ್ ಟ್ರಸ್ಟ್​ನಲ್ಲಿ ಪ್ರಾರಂಭಿಸಿರುವ ಸರ್ಕಾರಿ ಕ್ವಾರಂಟೈನ್​ಗೆ ಕಳಿಸಿದ್ದಾರೆ.

ಗೋವಾದಲ್ಲಿ ತಾವು ತಂಗಿದ್ದ ಪ್ರದೇಶದಲ್ಲಿ ಊಟ ತಿಂಡಿ ಸರಿಯಾಗಿ ಸಿಗದ ಕಾರಣ ಮತ್ತು ಸಾರಿಗೆ ಸಂಪರ್ಕ ಇಲ್ಲದ್ದರಿಂದ ಬೋಟ್​ ಮೂಲಕ ಬಂದಿರುವುದಾಗಿ ಮೀನುಗಾರರು ಹೇಳಿದ್ದಾರೆ. ಆದರೆ ಕೊರೊನಾ ವೈರಸ್ ಮಾರಕವಾಗಿದ್ದು, ಇದರ ತಡೆಗೆ ಏಪ್ರಿಲ್ 14 ರವರೆಗೆ ಲಾಕ್ ಡೌನ್ ಮಾಡಲಾಗಿದೆ. ಜನರ ಸುರಕ್ಷತೆಗಾಗಿ ಹೊರ ರಾಜ್ಯದ ಮೀನುಗಾರರು ಇದಕ್ಕೆ ಸಹಕರಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.