ಕಾರವಾರ: ಆಕಸ್ಮಿಕವಾಗಿ ಸಮುದ್ರದಲ್ಲಿ ಬಿದ್ದು ಮೀನುಗಾರನೋರ್ವ ಕಣ್ಮರೆಯಾಗಿರುವ ಘಟನೆ ಅಂಕೋಲಾ ತಾಲ್ಲೂಕಿನ ಬೆಲೆಕೇರಿ ಬಂದರು ಬಳಿ ನಡೆದಿದೆ.
ನಾಪತ್ತೆಯಾದವನನ್ನು ಅಂಕೋಲಾ ತಾಲ್ಲೂಕಿನ ಬೇಲೆಕೇರಿ ನಿವಾಸಿ ಸುರೇಶ ಬಾನಾವಳಿಕರ್ (45) ಎಂದು ಗುರುತಿಸಲಾಗಿದೆ. ಬಂದರು ಬಳಿ ಬೋಟ್ ಮೇಲೆ ಕೆಲಸ ಮಾಡುತ್ತಿರುವಾಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದಿದ್ದ ಸುರೇಶ್ ಕಣ್ಮರೆಯಾಗಿದ್ದಾನೆ. ತಕ್ಷಣ ಮೀನುಗಾರರು ಕರಾವಳಿ ಕಾವಲು ಪೊಲೀಸರಿಗೆ ತಿಳಿಸಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.