ETV Bharat / state

ತೆರಿಗೆ ವಂಚಿಸಿ ಕಬ್ಬಿಣದ ಸರಳು ಸಾಗಣೆ: ಬರೋಬ್ಬರಿ 5 ಲಕ್ಷ ರೂ. ದಂಡ

ಹುಬ್ಬಳ್ಳಿ ಆದಾಯ ತೆರಿಗೆ ಅಧಿಕಾರಿಗಳು ವಾಹನವೊಂದನ್ನು ತಡೆದು ತೆರಿಗೆ ಪರಿಶೀಲಿಸಿದಾಗ ತೆರಿಗೆ ವಂಚಿಸಿ ಕಬ್ಬಿಣದ ಸರಳುಗಳನ್ನು ಸಾಗಿಸುತ್ತಿರುವುದು ಬೆಳಕಿಗೆ ಬಂದಿದೆ. ಬಳಿಕ 5.73 ಲಕ್ಷ ರೂ. ತೆರಿಗೆ ಮತ್ತು ದಂಡ ವಿಧಿಸಲಾಗಿದೆ.

iron rod
iron rod
author img

By

Published : Dec 9, 2020, 2:00 PM IST

ಕಾರವಾರ (ಉತ್ತರ ಕನ್ನಡ): ತೆರಿಗೆ ವಂಚಿಸಿ ಕಬ್ಬಿಣ ಹಾಗೂ ಸ್ಟೀಲ್ ಸರಳುಗಳನ್ನು ಹಳಿಯಾಳಕ್ಕೆ ಸಾಗಿಸುತ್ತಿದ್ದ ಲಾರಿಯೊಂದಕ್ಕೆ ವಾಣಿಜ್ಯ ತೆರಿಗೆ ಅಧಿಕಾರಿಗಳು ಬರೋಬ್ಬರಿ‌ 5.73 ಲಕ್ಷ ತೆರಿಗೆ ಮತ್ತು ದಂಡ ವಿಧಿಸಿದ್ದಾರೆ.

ಬೆಂಗಳೂರಿನಿಂದ ಹಳಿಯಾಳಕ್ಕೆ ಲಾರಿಯೊಂದರಲ್ಲಿ ಸುಮಾರು 14.42 ಲಕ್ಷ ಮೌಲ್ಯದ 40 ಮೆಟ್ರಿಕ್ ಟನ್ ತೂಕದ ಕಬ್ಬಿಣದ ಸರಳುಗಳನ್ನು‌ ಸಾಗಿಸಲಾಗುತ್ತಿತ್ತು. ಈ ವೇಳೆ ಹುಬ್ಬಳ್ಳಿ ಆದಾಯ ತೆರಿಗೆ ಅಧಿಕಾರಿಗಳು ತಡೆದು ತೆರಿಗೆ ಪರಿಶೀಲಿಸಿದಾಗ ವಂಚನೆ ಬೆಳಕಿಗೆ ಬಂದಿದೆ.

fine for not paying tax
ಆದಾಯ ತೆರಿಗೆ ಇಲಾಖೆ ಟ್ವೀಟ್

ನಂತರ ಅಕ್ರಮ ತೆರೆಗೆ ವಂಚನೆ ಹಿನ್ನೆಲೆಯಲ್ಲಿ 5.73 ಲಕ್ಷ ರೂ. ದಂಡ ವಿಧಿಸಲಾಗಿದೆ. ಈ ಬಗ್ಗೆ ಆದಾಯ ತೆರಿಗೆ ಇಲಾಖೆ ಟ್ವಿಟ್ಟರ್​ನಲ್ಲಿ ಕಬ್ಬಿಣದ ಸರಳು‌ ಸಾಗಿಸುತ್ತಿದ್ದ ಲಾರಿ ಫೋಟೋ ಸಹಿತ ವಂಚನೆಯಾಗಿದ್ದನ್ನು ಹಂಚಿಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.