ETV Bharat / state

ಹೊಸ ಮೋಟಾರು ವಾಹನ ಕಾಯ್ದೆ ಭಯ: ಎಮಿಷನ್​​​​​ ಟೆಸ್ಟ್​ಗೆ ಬೈಕ್​​​ ಸವಾರರ ಕ್ಯೂ

ಕೇಂದ್ರ ಸರ್ಕಾರದ ನೂತನ ಮೋಟಾರ್ ವಾಹನ​ ಕಾಯ್ದೆ ವಾಹನ ಸವಾರರಿಗೆ ನುಂಗಲಾರದ ತುತ್ತಾಗಿದೆ. ಟ್ರಾಫಿಕ್​ ರೂಲ್ಸ್​ಗೆ ಡೋಂಟ್​ ಕೇರ್​ ಅಂತಿದ್ದವರು ಈಗ ತಮ್ಮ ವಾಹನಗಳಿಗೆ ಬೇಕಾದ ಅಗತ್ಯ ದಾಖಲೆಗಳನ್ನು ಅಪ್​ಡೇಟ್​ ಮಾಡಿಸಿಕೊಳ್ಳುತ್ತಿದ್ದಾರೆ.

ವಾಯು ಮಾಲಿನ್ಯ ಪ್ರಮಾಣಪತ್ರ ನೀಡುವ ಕೇಂದ್ರಗಳಿಗೆ ಲಗ್ಗೆ ಇಟ್ಟ ವಾಹನ ಸವಾರರು
author img

By

Published : Sep 12, 2019, 1:10 PM IST

Updated : Sep 12, 2019, 3:39 PM IST

ಭಟ್ಕಳ: ಗ್ರಾಹಕರಿಲ್ಲದೆ ಬಿಕೋ ಎನ್ನುತ್ತಿದ್ದ ವಾಯು ಮಾಲಿನ್ಯ ಪ್ರಮಾಣಪತ್ರ ನೀಡುವ ಕೇಂದ್ರಗಳಲ್ಲಿ ಜನಸಂದಣಿ ಕಾಣುತ್ತಿದೆ. ಕೇಂದ್ರ ಸರ್ಕಾರದ ನೂತನ ಮೋಟಾರು ವಾಹನ ಕಾಯ್ದೆ ತಿದ್ದುಪಡಿಯಿಂದಾಗಿ ಈ ಕೇಂದ್ರಕ್ಕೆ ಶುಕ್ರದೆಸೆ ಆರಂಭವಾಗಿದೆ.

ದ್ವಿಚಕ್ರ ವಾಹನ ಚಾಲಕರು ತಮ್ಮ ಬೈಕ್​ಗಳನ್ನು ವಾಯು ಮಾಲಿನ್ಯ ಪರೀಕ್ಷೆಗೊಳಪಡಿಸಿ, ಪ್ರಮಾಣಪತ್ರ ಪಡೆಯಲು ವಾಯು ಮಾಲಿನ್ಯ ಪ್ರಮಾಣಪತ್ರ ನೀಡುವ ಕೇಂದ್ರಗಳ ಮುಂದೆ ಸಾಲು ಸಾಲು ವಾಹನಗಳೊಂದಿಗೆ ನಿಂತಿದ್ದಾರೆ.

ವಾಯು ಮಾಲಿನ್ಯ ಪ್ರಮಾಣಪತ್ರ ನೀಡುವ ಕೇಂದ್ರಗಳಿಗೆ ಲಗ್ಗೆ ಇಟ್ಟ ವಾಹನ ಸವಾರರು

ಹೌದು, ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ರಾ.ಹೆ. 66ರ ಸಾಮ್ಕೋ ಬಳಿಯ ವಾಯು ಮಾಲಿನ್ಯ ಪರೀಕ್ಷಾ ಕೇಂದ್ರದಲ್ಲಿ ಬೈಕ್ ಸವಾರರು ಸರತಿ ಸಾಲಿನಲ್ಲಿ ನಿಂತುಕೊಂಡು, ತಮ್ಮ ವಾಹನಗಳ ವಾಯು ಮಾಲಿನ್ಯ ಎಮಿಷನ್‍ ಟೆಸ್ಟ್ ಮಾಡಿಸಿಕೊಳ್ಳುತ್ತಿದ್ದಾರೆ.

ಕೇಂದ್ರದ ನೂತನ ಮೋಟಾರು ವಾಹನ ತಿದ್ದುಪಡಿ ಕಾಯ್ದೆಯಂತೆ ಪ್ರತಿಯೋರ್ವ ವಾಹನ ಚಾಲಕ ಅಗತ್ಯ ದಾಖಲೆ ಪತ್ರಗಳನ್ನು ಹೊಂದಿರುವುದು ಕಡ್ಡಾಯ. ವಾಹನ ಸವಾರರು ಹೆಲ್ಮೆಟ್(ದ್ವಿಚಕ್ರ ವಾಹನ ಸವಾರ), ಚಾಲನ ಪ್ರಮಾಣಪತ್ರ, ಹೊಗೆ ಪ್ರಮಾಣಪತ್ರ, ಇನ್ಸುರೆನ್ಸ್ ಮತ್ತಿತರರ ದಾಖಲೆ ಪತ್ರಗಳನ್ನು ಅಗತ್ಯವಾಗಿ ಹೊಂದಿರಬೇಕು. ಇಲ್ಲದಿದ್ದಲ್ಲಿ ಸಾವಿರಾರು ರೂಪಾಯಿ ದಂಡ ತೆರಬೇಕಾದೀತು. ದಂಡ ತೆರುವ ಭಯದಿಂದ ಈಗ ಬೈಕ್ ಹಾಗೂ ಇತರೆ ವಾಹನ ಚಾಲಕರು ತಮ್ಮ ವಾಹನಗಳ ದಾಖಲಾತಿಗಳನ್ನು ಅಪ್​​ಡೇಟ್​ ಮಾಡಿಕೊಳ್ಳುವತ್ತ ಮುಖ ಮಾಡಿದ್ದಾರೆ.

ನೂತನ ಮೋಟಾರು ವಾಹನ ತಿದ್ದುಪಡಿ ಕಾಯ್ದೆಯಲ್ಲಿ ಹಲವು ಕಟ್ಟುನಿಟ್ಟಿನ ಕ್ರಮಗಳಿದ್ದು, ದಂಡದ ಮೊತ್ತವನ್ನು ಹಲವು ಪಟ್ಟು ಹೆಚ್ಚಿಸಲಾಗಿದೆ. ಸೆ. 1ರಿಂದಲೇ ನೂತನ ನಿಯಮಗಳು ಜಾರಿಗೆ ಬಂದಿದ್ದು, ಹಲವು ಕಡೆಗಳಲ್ಲಿ ಇದಕ್ಕೆ ಭಾರಿ ವಿರೋಧಗಳು ವ್ಯಕ್ತವಾಗಿವೆ. ಆದರೆ ಪೊಲೀಸರು ಈ ನೂತನ ನಿಯಮಗಳನ್ನು ಜಾರಿಗೆ ತರುವಲ್ಲಿ ಪಣ ತೊಟ್ಟಿದ್ದು, ಸಾರ್ವಜನಿಕರ ವಿರೋಧವನ್ನು ಎದುರಿಸುವಂತಾಗಿದೆ.

Intro:ಭಟ್ಕಳ: ಗ್ರಾಹಕರಿಲ್ಲದೆ ಜಪೋ ಎನ್ನುತ್ತಿದ್ದ ವಾಯು ಮಾಲಿನ್ಯ ಪ್ರಮಾಣಪತ್ರ ನೀಡುವ ಕೇಂದ್ರಗಳಿಗೆ ಕೇಂದ್ರ ಸರ್ಕಾರದ ನೂತನ ಮೋಟಾರು ವಾಹನ ತಿದ್ದುಪಡಿಯಿಂದಾಗಿ ಶುಕ್ರದೆಸೆ ಪಡೆದುಕೊಂಡಿದ್ದು ದ್ವಿಚಕ್ರವಾಹನ ಚಾಲಕರು ತಮ್ಮ ಬೈಕ್ ಗಳನ್ನು ವಾಯುಮಾಲಿನ್ಯ ಪರೀಕ್ಷೆಗೊಳಪಡಿಸಿ ಪ್ರಮಾಣ ಪತ್ರ ಪಡೆಯಲು ವಾಯು ಮಾಲಿನ್ಯ ಪ್ರಮಾಣಪತ್ರ ನೀಡುವ ಕೇಂದಗಳ ಮುಂದೆ ನೂಕು ನುಗ್ಗಲು ಆರಂಭಿಸಿದ್ದಾರೆ.

Body:ಭಟ್ಕಳ: ಗ್ರಾಹಕರಿಲ್ಲದೆ ಜಪೋ ಎನ್ನುತ್ತಿದ್ದ ವಾಯು ಮಾಲಿನ್ಯ ಪ್ರಮಾಣಪತ್ರ ನೀಡುವ ಕೇಂದ್ರಗಳಿಗೆ ಕೇಂದ್ರ ಸರ್ಕಾರದ ನೂತನ ಮೋಟಾರು ವಾಹನ ತಿದ್ದುಪಡಿಯಿಂದಾಗಿ ಶುಕ್ರದೆಸೆ ಪಡೆದುಕೊಂಡಿದ್ದು ದ್ವಿಚಕ್ರವಾಹನ ಚಾಲಕರು ತಮ್ಮ ಬೈಕ್ ಗಳನ್ನು ವಾಯುಮಾಲಿನ್ಯ ಪರೀಕ್ಷೆಗೊಳಪಡಿಸಿ ಪ್ರಮಾಣ ಪತ್ರ ಪಡೆಯಲು ವಾಯು ಮಾಲಿನ್ಯ ಪ್ರಮಾಣಪತ್ರ ನೀಡುವ ಕೇಂದಗಳ ಮುಂದೆ ನೂಕು ನುಗ್ಗಲು ಆರಂಭಿಸಿದ್ದಾರ

ಹೌದು ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ರಾ.ಹೆ. 66 ರ ಸಾಮ್ಕೋ ಹಿಂಬದಿಯ ವಾಯುಮಾಲಿನ್ಯ ಕೇಂದ್ರದಲ್ಲಿ ಬೈಕ್ ಸವಾರರು ಸರತಿ ಸಾಲಿನಲ್ಲಿ ನಿಂತುಕೊಂಡು ತಮ್ಮ ವಾಹನಗಳ ವಾಯುಮಾಲಿನ್ಯ ಎಮಿಷನ್‍ಟೆಸ್ಟ್ ಮಾಡಿಸಿಕೊಳ್ಳುತ್ತಿರುವುದು ಕಂಡು ಬಂತು.

ಕೇಂದ್ರದ ನೂತನ ಮೋಟಾರು ವಾಹನ ತಿದ್ದುಪಡಿ ಕಾಯ್ದೆಯಂತೆ ಪ್ರತಿಯೊಬ್ಬ ವಾಹನಚಾಲಕ ದ್ವಿಚಕ್ರವಾಹನವಾದರೆ, ಹೆಲ್ಮೆಟ್, ಚಾಲನ ಪ್ರಮಾಣ ಪತ್ರ, ಹೊಗೆ ಪ್ರಮಾಣ ಪತ್ರ ಇನ್ಸುರೆನ್ಸ್ ಮತ್ತಿತರರ ಅಗತ್ಯ ದಾಖಲೆಪತ್ರೆಗಳನ್ನು ಹೊಂದಿರುವುದು ಅಗತ್ಯವಾಗಿದ್ದು ಇಲ್ಲದೆ ಹೋದರೆ ಸಾವಿರಾರು ದಂಡ ತೆರಬೇಕಾದೀತು. ದಂಡ ತೆರುವ ಭಯದಿಂದ ಈಗ ಬೈಕ್ ಹಾಗೂ ವಾಹನ ಚಾಲಕರು ತಮ್ಮ ವಾಹನಗಳನ್ನು ಅಪ್ಡೇಟ್ ಮಾಡಿಕೊಳ್ಳುವತ್ತ ಮುಖ ಮಾಡಿದ್ದಾರೆ

ನೂತನ ಮೋಟಾರು ವಾಹನ ತಿದ್ದುಪಡಿ ಕಾಯ್ದೆಯಲ್ಲಿ ಹಲವು ಕಟ್ಟುನಿಟ್ಟಿನ ಕ್ರಮಗಳಿದ್ದು ದಂಡದ ಮೊತ್ತವನ್ನು ಹಲವು ಪಟ್ಟು ಹೆಚ್ಚಿಸಲಾಗಿದೆ. ಸೆ.1 ರಿಂದಲೇ ನೂತನ ನಿಯಮಗಳು ಜಾರಿಗೆ ಬಂದಿದ್ದು ಹಲವು ಕಡೆಗಳಲ್ಲಿ ಇದಕ್ಕೆ ಭಾರಿ ವಿರೋಧಗಳು ವ್ಯಕ್ತವಾಗಿವೆ. ಆದರೆ ಪೊಲೀಸರು ಈ ನೂತನ ನಿಯಮಗಳನ್ನು ಜಾರಿಗೆ ತರುವಲ್ಲಿ ಪಣತೊಟ್ಟಂತೆ ತೋರುತ್ತಿದ್ದು ಸಾರ್ವಜನಿಕರ ವಿರೋಧವನ್ನು ಎದುರಿಸುವಂತಾಗಿದೆ.

Conclusion:ಉದಯ ನಾಯ್ಕ
Last Updated : Sep 12, 2019, 3:39 PM IST

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.